ಪಶುಪಾಲನೆಸರಕಾರಿ ಯೋಜನೆ

ಈ ರೈತರಿಗೆ ಉಚಿತ ಮೇವಿನ ಬಿತ್ತನೆ ಬೀಜಗಳ ಮಿನಿಕಿಟ್ ವಿತರಣೆ | ಯಾವೆಲ್ಲ ರೈತರಿಗೆ ಸಿಗಲಿದೆ? Free Fodder Seeds Mini Kit

WhatsApp Group Join Now
Telegram Group Join Now

Free Fodder Seeds Mini Kit : ರಾಜ್ಯಾದ್ಯಂತ ಮಳೆ ಹನಿಯತೊಡಗಿದೆ. ರಣ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಭೂಮಿ ತಂಪಾಗಿ, ಎಲ್ಲೆಲ್ಲೂ ಹಸಿರು ಚಿಗುರಿ ಜೀವಕಳೆ ನಳನಳಿಸುವಂತಾಗಿದೆ. ಇನ್ನೇನು ಮುಂಗಾರು ಮಳೆ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು; ಕೃಷಿ ಚಟುವಟಿಕೆ ಗರಿಗೆದರಿದೆ. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಏತನ್ಮಧ್ಯೆ ಹೈನುಗಾರ ರೈತರಿಗೆ ಉಚಿತ ಮೇವಿನ ಬಿತ್ತನೆ ಬೀಜ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು; ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ಹೈನು ರೈತರಿಗೆ ನೆರವಾಗಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಮಳೆ ಆಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಮೇವಿನ ಬೀಜದ ಮಿನಿ ಕಿಟ್’‍ಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಕಾಲುದಾರಿ, ಬಂಡಿದಾರಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… | ಜಮೀನು ದಾರಿ ಸರಕಾರದ ಆದೇಶವೇನು? Agriculture Land Way Revenue Maps Online

ಯಾವ ಯೋಜನೆಯಡಿ ಬೀಜ ವಿತರಣೆ?

ಕೇಂದ್ರ ಸರ್ಕಾರದ ಎನ್.ಎಲ್.ಎಂ ಯೋಜನೆಯಡಿ (National Livestock Mission) ಹಾಲು ಒಕ್ಕೂಟಗಳಿಗೆ ಮೇವಿನ ಬೀಜಗಳ ಮಿನಿ ಕಿಟ್’ಗಳು ವಿತರಣೆಯಾಗಿವೆ. ಈ ಹಸಿರು ಮೇವಿನ ಬಿತ್ತನೆ ಬೀಜದ ಮಿನಿಕಿಟ್’‍ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಯೋಜನೆಯ ನಿಬಂಧನೆ ಅನುಸಾರ ಹಂಚಿಕೆ ಮಾಡಲಾಗುತ್ತದೆ.

ಹಸು-ಎಮ್ಮೆಗಳ ಆರೋಗ್ಯ ಸುಧಾರಣೆ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ಹಾಗೂ ಹಾಲಿನ ಉಳುವರಿ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಹಾಲು ಉತ್ಪಾದಕರು ಹಸಿರು ಮೇವನ್ನು ಬೆಳೆಸಿ, ಬಳಸಲು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

Free Fodder Seeds Mini Kit

ಇದನ್ನೂ ಓದಿ: Rajiv Gandhi Housing Scheme 2024 : ರಾಜೀವ್ ಗಾಂಧಿ ವಸತಿ ನಿಗಮದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಯಾವೆಲ್ಲ ರೈತರಿಗೆ ಬಿತ್ತನೆ ಬೀಜದ ಕಿಟ್ ಸಿಗಲಿದೆ?

ಎನ್.ಡಿ.ಡಿ.ಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ವತಿಯಿಂದ ರೈತರು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ವಿತರಿಸುವ ಹಾಲಿನ ಪ್ರಮಾಣದ ಆಧಾರದ ಮೇಲೆ ಮೇವಿನ ಬಿತ್ತನೆ ಬೀಜಗಳ ಕಿಟ್’ಗಳನ್ನು ಉಚಿತವಾಗಿ ವಿತರಿಸಲು ಆಯೋಜಿಸಲಾಗಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಶಿಮುಲ್) ವತಿಯಿಂದ ವಿವಿಧ ಮೇವಿನ ತಳಿಗಳ 3 ಹಾಗೂ 5 ಕೆ.ಜಿ. ತೂಕದ ಕಿರು ಪೊಟ್ಟಣಗಳನ್ನು ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ.

ಎನ್.ಡಿ.ಡಿ.ಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ವತಿಯಿಂದ ಶಿಮುಲ್’ಗೆ 1.20 ಕೋಟಿ ರೂಪಾಯಿ ಮೊತ್ತದ ಹಸಿರು ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್’‍ಗಳು ವಿತರಣೆ ಆಗಿವೆ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್ ಜಿ ಶೇಖರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: PM – Surya Ghar Muft Bijli Jojana : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಒಟ್ಟು 120 ಮೆಟ್ರಿಕ್ ಟನ್ ಬಹು ಕಟಾವು ಜೋಳ ಹಾಗೂ ಮೆಕ್ಕೆಜೋಳದ ವಿವಿಧ ತಳಿಯ ಮೇವಿನ ಬಿತ್ತನೆ ಬೀಜ ಹಂಚಿಕೆಯಾಗಿರುತ್ತದೆ.

ಶಿಮುಲ್ ಹೊರತುಪಡಿಸಿ ಇತರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತಗಳಲ್ಲೂ ಈ ಯೋಜನೆಯಡಿ ಉಚಿತ ಮೇವಿನ ಬಿತ್ತನೆ ಬೀಜಗಳ ಕಿಟ್ ವಿತರಣೆ ಕಾರ್ಯಕ್ರಮ ಜಾರಿಯಲ್ಲಿದೆ. ಹೈನು ರೈತರು ತಾವು ಹಾಲು ಒದಗಿಸುವ ಹಾಲು ಉತ್ಪಾದಕ ಸಹಕಾರ ಸಂಘಗಗಳಲ್ಲಿ ಮಾಹಿತಿ ಪಡೆದು ಈ ಸದುಪಯೋಗ ಪಡೆದುಕೊಳ್ಳಲು ರೈತರಿಗೆ ಕರೆ ನೀಡಲಾಗಿದೆ.

WhatsApp Group Join Now
Telegram Group Join Now

Related Posts

error: Content is protected !!