ಕೃಷಿಸರಕಾರಿ ಯೋಜನೆ

Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

WhatsApp Group Join Now
Telegram Group Join Now

Free horticulture training with stipend : ತೋಟಗಾರಿಕೆ ಇಲಾಖೆಯಿಂದ ರೈತರು ಮತ್ತು ರೈತರ ಮಕ್ಕಳಿಗೆ 17,500 ರೂಪಾಯಿ ಶಿಷ್ಯವೇತನದ ಜೊತೆಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದ ವಿವಿಧ 11 ಜಿಲ್ಲೆಗಳಲ್ಲಿ ಇರುವ ತೋಟಗಾರಿಕೆ ಇಲಾಖೆಗಳಲ್ಲಿ (Department of Horticulture) 2024-25ನೇ ಸಾಲಿಗೆ ತೋಟಗಾರಿಕೆ ಕ್ಷೇತ್ರದ ಸಮಗ್ರ ಜ್ಞಾನವನ್ನು ಮತ್ತು ವೈಜ್ಞಾನಿಕ ಕ್ರಮ ಅನುಸರಿಸಲು 10 ತಿಂಗಳ ತರಬೇತಿ ನೀಡಲು ತೋಟಗಾರಿಕೆ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಒಂದು ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಮತ್ತು ತರಬೇತಿ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

ತೋಟಗಾರಿಕೆ ತರಬೇತಿ ವಿವರ Training details

ತೋಟಗಾರಿಕೆ ಇಲಾಖೆಯಿಂದ ಈ ಉಚಿತ ತರಬೇತಿಯನ್ನು 02ನೇ ಮೇ 2024 ರಿಂದ 28ನೇ ಮೇ 2025ರ ಒಳಗಾಗಿ ಒಟ್ಟು 10 ತಿಂಗಳ ಅವಧಿಗೆ ನೀಡಲಾಗುತ್ತದೆ. ಯುವ ಜನರು ತೋಟಗಾರಿಕೆಯ ಸಮಗ್ರ ವೈಜ್ಞಾನಿಕ ಬೇಸಾಯ (Scientific Horticulture method) ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಸ್ವಂತ ತೋಟಗಳನ್ನು ಅಭಿವೃದ್ಧಿಪಡಿಸಿ (Development) ಹೆಚ್ಚಿನ ಇಳುವರಿ ಪಡೆಯುವಲ್ಲಿ ಸಫಲರಾಗಬೇಕೆಂಬುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.

10 ತಿಂಗಳ ಉಚಿತ ತರಬೇತಿಯ ನಂತರ, ತರಬೇತಿ ಪಡೆದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಹಾಜರಾಗಲು ಅಭ್ಯರ್ಥಿಯ ಶೇಕಡ 75% ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಆಧಾರದ ಮೇಲೆ 30 ದಿನಗಳ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: PM-Surya Ghar Muft Bijli yojana 2024 : ಮನೆ ತಾರಸಿ ಸೋಲಾರ್ ವಿದ್ಯುತ್‌ಗೆ ₹78,000 ಸಬ್ಸಿಡಿ | ಸೋಲಾರ್ ವಿದ್ಯುತ್ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ಅರ್ಜಿ ಸಲ್ಲಿಸಲು ಯಾರು ಅರ್ಹರು Eligibility Criteria

ತೋಟಗಾರಿಕೆ ಇಲಾಖೆಯ ಈ ಒಂದು ಉಚಿತ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈ ತರಬೇತಿಯನ್ನು ಮುಖ್ಯವಾಗಿ ರೈತರ ಮಕ್ಕಳಿಗಾಗಿಯೇ ನಡೆಸುತ್ತಿರುವುದರಿಂದ, ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಸ್ವಂತ ಜಮೀನನ್ನು ಹೊಂದಿರಬೇಕು. ಉಚಿತ ತರಬೇತಿ ಪಡೆದು ತಮ್ಮ ಸ್ವಂತ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ವಯೋಮಿತಿ ಎಷ್ಟು?

ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ವರ್ಗಗಳ ಅನುಸಾರ ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 30 ವರ್ಷ, ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳು 33 ವರ್ಷ ಹಾಗೂ ಮಾಜಿ ಸೈನಿಕರಿಗೆ 65 ವರ್ಷ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ₹47,650 ರೂಪಾಯಿ ಸಂಬಳ

17,500 ರೂಪಾಯಿ ಶಿಷ್ಯವೇತನ

ಉಚಿತ ತೋಟಗಾರಿಕೆ ತರಬೇತಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತರಬೇತಿಯ ಜೊತೆಗೆ ಪ್ರತಿ ತಿಂಗಳು 1,750 ರೂಪಾಯಿಯ ಶಿಷ್ಯ ವೇತನವನ್ನು ನೀಡಲಾಗಿವುದು. ಅಂದರೆ 10 ತಿಂಗಳ ತರಬೇತಿಗೆ ಒಟ್ಟು 17,500 ರೂಪಾಯಿ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಹತ್ತು ತಿಂಗಳ ತೋಟಗಾರಿಕೆ ತರಬೇತಿಯ ಅರ್ಜಿಗಳನ್ನು ಆಯಾ ಜಿಲ್ಲೆಗಳ ಹಿರಿಯ ಸಹಾಯಕ ತೋಟಗಾರಿಕೆ ಅಥವಾ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ)/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಅವರ ಕಛೇರಿ ಅಥವಾ ಕೆಳಗೆ ನೀಡಿರುವ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 1, 2024ರ ಸಾಯಂಕಾಲ 5.30ರ ಒಳಗಾಗಿ ಕಳುಹಿಸಬೇಕು.

ಅರ್ಜಿಯ ಜೊತೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 30 ಮತ್ತು SC/ST ವರ್ಗದ ಅಭ್ಯರ್ಥಿಗಳು ರೂ. 15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಅನ್ನು ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಅವರ ಹೆಸರಿನಲ್ಲಿ ಪಡೆದು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Atal Pension Yojana-APY : ಪ್ರತಿ ತಿಂಗಳು ₹5000 ಪಿಂಚಣಿ ಪಡೆಯಬೇಕೆ? | ಕೂಡಲೇ ಅಟಲ್ ಪಿಂಚಣಿ ಯೋಜನೆಯಡಿ ಈ ಕೆಲಸ ಮಾಡಿ…

ತರಬೇತಿಗೆ ನಿಗಧಿಪಡಿಸಿರುವ ತೋಟಗಾರಿಕೆ ಕೇಂದ್ರಗಳ ಜಿಲ್ಲಾವಾರು ಮಾಹಿತಿ

ಇದನ್ನೂ ಓದಿ: Village accountant recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಧಿಕೃತ ಅಧಿಸೂಚನೆ ಬಿಡುಗಡೆ | 1000 ಹುದ್ದೆಗಳು

RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

WhatsApp Group Join Now
Telegram Group Join Now

Related Posts

error: Content is protected !!