AgricultureNews

ಮೇಕೆ ಹೈನುಗಾರಿಕೆ ನಿತ್ಯವೂ ಹಣ ಗಳಿಕೆ Goat Dairy Farming

Goat Dairy Farming : ಹಸು, ಎಮ್ಮೆ ಹಾಲಿಗಿಂತ ಎರಡ್ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುವ ಆಡಿನ ಹಾಲು ಹಲವು ಔಷಧಿಯ ಗುಣ ಹೊಂದಿದೆ. ಹೀಗಾಗಿ ಇಂದು ಮೇಕೆ ಹೈನುಗಾರಿಕೆ ಯುವ ರೈತರನ್ನು ಆಕರ್ಷಿಸುತ್ತಿದೆ. ಮೇಕೆ ಹಾಲಿನ ಸುಧಾರಿತ ತಳಿಗಳನ್ನು ಸಂಗೋಪನೆ ಮಾಡುವುದು ಇಂದು ಟ್ರೆಂಡ್ ಆಗಿದೆ.

WhatsApp Group Join Now
Telegram Group Join Now

ಅಲ್ಲದೆ ಆಡಿನ ಹಾಲಿನ ಮಹತ್ವ ಇತ್ತೀಚಿನ ದಿನಗಳಲ್ಲಿ ಜನರಿಗೆ ತಿಳಿಯುತ್ತಿದೆ. ಆಡಿನ ಹಾಲಿನ ಪೌಷ್ಟಿಕತೆ ಮತ್ತು ರೋಗ ನಿರೋಧಕ ಶಕ್ತಿ ಇಂದಿನ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ.

ಮೇಕೆ ಹಾಲಿಗೆ ಭರ್ಜರಿ ಬೇಡಿಕೆ

ಒಂದು ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲಿಯೇ ಸದ್ಯ ಹಲವಾರು ಸಾವಿರ ಲೀಟರ್‌ನಷ್ಟು ಮೇಕೆಯ ಹಾಲು ಮಾರಾಟವಾಗುತ್ತಿದೆ. ಆದರೆ ಅದನ್ನು ವ್ಯವಸ್ಥಿತವಾಗಿ ಮಾರುವ ಮಾರಾಟ ಜಾಲ ಇಲ್ಲದಂತಾಗಿದೆ.

ಅಲ್ಲದೆ ಐದರಿಂದ-ಹತ್ತು ದಿನಗಳವರೆಗೆ ಇಟ್ಟುಕೊಂಡು ಮಾರಾಟ ಮಾಡಬಹುದಾದ ಪ್ಯಾಶ್ಚಿತೀಕರಿಸಿದ ಮೇಕೆ ಹಾಲಿಗೂ ಬೇಡಿಕೆ ಇದೆ. 90 ದಿನಗಳ ವರೆಗೆ ಮಾರಾಟ ಮಾಡಬಹುದಾದ ಸ್ಟರ್‌ಲೈಜ್‌ಗೊಂಡ ಮೇಕೆ ಹಾಲಿಗೂ ಸಹ ಬೇಡಿಕೆ ಹೆಚ್ಚುತ್ತಾ ಹೋಗುತ್ತಿದೆ.

ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

ಗಿಡಮೂಲಿಕೆ ಸಹಿತ ಆಡಿನ ಹಾಲು

ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಆಡಿನ ಹಾಲಿನ ಹಲವು ಉತ್ಪನ್ನಗಳನ್ನು ಅಲ್ಲಲ್ಲಿ ತಯಾರಿಸುವ ಹಂತದಲ್ಲಿದ್ದಾರೆ. ಈ ಗಿಡಮೂಲಿಕೆಗಳನ್ನು ಪುರುಷರ ಬಲವರ್ಧನೆಗೆ, ಮಹಿಳೆಯರ ಗರ್ಭಧಾರಣೆಗೆ, ಮಕ್ಕಳ ಬೆಳವಣಿಗೆಗೆ ಪೂರಕವಾಗುವಂತಹ ಗಿಡಮೂಲಿಕೆಗಳನ್ನು ಬಳಸಿ, ವಿವಿಧ ಮೇಕೆಯ ಹಾಲಿನ ಉತ್ಪನ್ನಗಳನ್ನು ಮಾಡಬಹುದಾಗಿದೆ.

ಮತ್ತೆ ಮೇಕೆಯ ಹಾಲಿನಲ್ಲಿ ಪನ್ನೀರ್, ಯೋಗರ್ಟ್, ಲಸ್ಸಿ, ತುಪ್ಪ, ಮೊಸರುಗಳನ್ನು ಸಹ ತಯಾರಿಸಬಹುದಾಗಿದೆ. ಪನ್ನೀರ್, ಯೋಗರ್ಟ್ ಮಾಡುವಾಗ ಆಡಿನ ಹಾಲಿನಲ್ಲಿರುವ ತೊಂಬತ್ತು ಭಾಗ ನೀರನ್ನು ಬೇರ್ಪಡಿಸಬೇಕಾಗುತ್ತದೆ. ಅದನ್ನು ವೇ (Whಚಿಥಿ) ಎನ್ನಲಾಗುವುದು. ಅದನ್ನು ಎನರ್ಜಿ ಡ್ರಿಂಕ್ ಆಗಿ ಹಲವು ಪಾನೀಯಗಳಲ್ಲಿ ಬಳಸಲಾಗುತ್ತಿದೆ.

ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಔಷಧಿ ತಯಾರಿಕೆಯಲ್ಲಿ ಮೇಕೆ ಹಾಲು

ಮೇಕೆಯ ಹಾಲನ್ನು ಪೌಡರ್ ಮಾಡಿ, ಹಲವು ಔಷಧಿಗಳೊಂದಿಗೆ ಬೆರೆಸಲಾಗುತ್ತದೆ. ವಿಶೇಷವಾಗಿ ಹೋಮಿಯೋಪತಿ ಲಿಕ್ವಿಡ್ ಅನ್ನು ಶುಗರ್ ಗ್ಲಾö್ಯಬೂಲ್‌ಗಳ ಮೂಲಕ ಕೊಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಶುಗರ್ ಗ್ಲಾö್ಯಬೂಲ್‌ಗಳನ್ನು ಮೇಕೆಯ ಹಾಲಿನ ಪೌಡರ್‌ನಲ್ಲಿ ಮಾಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹೋಮಿಯೋಪತಿ ವೈದ್ಯಪದ್ಧತಿ ಹೆಚ್ಚು ಪ್ರಚುರಗೊಂಡ ಕಾರಣಕ್ಕೆ ಮೇಕೆಯ ಹಾಲಿನ ಪೌಡರ್ ಸಹ ಹೋಮಿಯೋಪತಿ ವೈದ್ಯ ಉದ್ಯಮಕ್ಕೆ ಅತ್ಯಂತ ಅಗತ್ಯ ವಸ್ತುವಾಗಿ ಪರಿಣಮಿಸಿದೆ.

ಹೀಗೆ ಹಲವಾರು ಉತ್ಪನ್ನಗಳನ್ನು ಆಡಿನ ಹಾಲಿನಿಂದ ತಯಾರಿಸಬಹುದಾಗಿದೆ. ಇಂದಿನ ಆರೋಗ್ಯ ಪ್ರಜ್ಞೆಯ ಜಾಗೃತಿಯಿಂದಾಗಿ ಮೇಕೆ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನೆಲ್ಲಾ ಗಮನಿಸಿದರೆ ಮೇಕೆಯ ಹಾಲಿನ ಉತ್ಪನ್ನಗಳ ವಲಯದ ಸಾಧ್ಯತೆಗಳು ಹಿಗ್ಗುತ್ತಿವೆ. ಈ ವಿಭಾಗದಲ್ಲಿ ರಾಜ್ಯದಲ್ಲಿ ಹಲವರು ಮೇಕೆ ಹಾಲನ್ನು ನೂರಾರು ಲೀಟರ್‌ನಷ್ಟು ಉತ್ಪಾದಿಸುತ್ತಿದ್ದಾರೆ.

ಕೆಲವರು ಮೇಲ್ಕಂಡ ಹಲವು ಆಡಿನ ಉತ್ಪನ್ನಗಳ ತಯಾರಿಕೆಯಲ್ಲಿ ಈಗಾಗಲೇ ತೊಡಗಿದ್ದಾರೆ. ಇಂಥ ಉದ್ಯಮಶೀಲರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಿದರೆ ಈ ವಲಯವನ್ನು ಇನ್ನೂ ಸದೃಡಗೊಳಿಸಿ, ಕರ್ನಾಟಕದ ಆರ್ಥಿಕತೆ, ಆರೋಗ್ಯವನ್ನು ಕಾಪಾಡಿದಂತಾಗುತ್ತದೆ.

Crop Insurance Karnataka Status Check : ಮೊಬೈಲ್‌ನಲ್ಲೇ ಚೆಕ್ ಮಾಡಿ ಬೆಳೆವಿಮೆ ಪರಿಹಾರ | ಇಲ್ಲಿದೆ ಸರಳ ವಿಧಾನ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!