ತಂತ್ರಜ್ಞಾನಸುದ್ದಿಗಳು

Google pay : ಜೂನ್‌ನಿಂದ ಗೂಗಲ್ ಪೇ ಆ್ಯಪ್ ಬಂದ್ ಆಗಲಿದೆಯಾ? ಏನಿದು ಹೊಸ ಸುದ್ದಿ ಈಗಲೇ ತಿಳಿದುಕೊಳ್ಳಿ

WhatsApp Group Join Now
Telegram Group Join Now

Google pay : ಜಗತ್ತಿನ ಪ್ರಸಿದ್ಧ ಗೂಗಲ್ ಕಂಪನಿಯ ಡಿಜಿಟಲ್ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಗೂಗಲ್ ಪೇ ಕಂಪನಿಯು ಕೆಲವು ಪ್ರದೇಶಗಳಲ್ಲಿ ಸ್ಥಗಿತಗೊಳ್ಳಲಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಈ ಡಿಜಿಟಲ್ ಯುಗದಲ್ಲಿ (Digitalisation) ಪ್ರತಿಯೊಬ್ಬರು ಪ್ರತಿಯೊಂದು ಹಣಕಾಸು ವ್ಯವಹಾರಗಳಿಗಾಗಿ ಡಿಜಿಟಲ್ ಪೇಮೆಂಟ್ಸ್ ಆ್ಯಪ್’ಗಳನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಪೈಕಿ ಡಿಜಿಟಲ್ ಹಣಕಾಸು ವ್ಯವಹಾರಗಳಿಗೆ (Digital finance) ಪ್ರಸಿದ್ಧವಾದ ಗೂಗಲ್ ಪೇ ಅಪ್ಲಿಕೇಶನ್ ಉಪಯೋಗಿಸುವವರ ಸಂಖ್ಯೆ ಜಗತ್ತಿನಾದ್ಯಂತ 150 ಮಿಲಿಯನ್’ಗಿಂತಲೂ ಹೆಚ್ಚಿದೆ. ಈ ಒಂದು ಪ್ರಸಿದ್ಧ ಅಪ್ಲಿಕೇಶನ್ ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ (Ban) ಎಂದು ಗೂಗಲ್ ಪೇ ಘೋಷಿಸಿದೆ.

ಇದನ್ನೂ ಓದಿ: Village accountant recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಧಿಕೃತ ಅಧಿಸೂಚನೆ ಬಿಡುಗಡೆ | 1000 ಹುದ್ದೆಗಳು

ಬಂದ್‌ಗೆ ಕಾರಣವೇನು?

ಗೂಗಲ್ ಪೇ ಅಪ್ಲಿಕೇಶನ್ ಬಳಸುವುದನ್ನು ಸ್ಥಗಿತಗೊಳಿಸಲು ಮುಖ್ಯ ಕಾರಣವೇನೆಂದರೆ ಪಾವತಿ ಕೊಡುಗೆಗಳನ್ನು ಸರಳೀಕರಣಗೊಳಿಸುವುದು. ಅಂದರೆ ಗೂಗಲ್ ಪೇ ಅಪ್ಲಿಕೇಶನ್’ನ ಹಳೆಯ ಆವೃತ್ತಿಯನ್ನು (Old version) ಸ್ಥಗಿತಗೊಳಿಸಿ, ಹೊಸ ಆವೃತ್ತಿಗಳನ್ನು (New version) ಜಾರಿಗೆ ತರುವುದು ಗೂಗಲ್ ಪೇ ಕಂಪನಿಯ ಉದ್ದೇಶವಾಗಿದೆ.

ಗೂಗಲ್ ಪೇ ಅಪ್ಲಿಕೇಶನ್ ಅಮೆರಿಕಾದಲ್ಲಿ ಇದೇ ಜೂನ್ 04, 2024ರಂದು ಬಂದ್ ಆಗಲಿದ್ದು, ಗೂಗಲ್ ಪೇ ಆ್ಯಪ್ ಬದಲಿಗೆ ಪ್ರಾಥಮಿಕ ಪಾವತಿ ವೇದಿಕೆಯಾಗಿ ಗೂಗಲ್ ವಾಲೆಟ್ (Google wallet) ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಆಗಲಿದೆ ಎಂದು ಗೂಗಲ್ ಕಂಪನಿಯು ತನ್ನ ಬ್ಲಾಗ್ ಪೋಸ್ಟ್ ಮುಖಾಂತರ ಮಾಹಿತಿ ಹಂಚಿಕೊ೦ಡಿದೆ.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಏನಿದು ಹೊಸ ಗೂಗಲ್ ವಾಲೆಟ್?

‘ಗೂಗಲ್ ಬ್ಯಾಲೆಟ್’ ಎಂಬ ಹೊಸ ಅಪ್ಲಿಕೇಶನ್ ಗೂಗಲ್ ಪೇ ಅಪ್ಲಿಕೇಶನ್’ನ ರೂಪಾಂತರಗೊ೦ಡ ಅಪ್ಲಿಕೇಶನ್ ಆಗಿದೆ. ಅಮೆರಿಕ ಸೇರಿದಂತೆ 180 ದೇಶಗಳಲ್ಲಿ 5 ಪಟ್ಟು ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂದು ಗೂಗಲ್ ಪೇ ಕಂಪನಿ ಹೇಳಿದೆ. ಏಕೆಂದರೆ ಗೂಗಲ್ ವಾಲೆಟ್ ಅಪ್ಲಿಕೇಶನ್ ಪಾವತಿಗಳಿಗಾಗಿ ಸೀಮಿತವಾಗದೆ ಬಳಕೆದಾರರಿಗೆ ಹಲವಾರು ಹೊಸ ಫ್ಯೂಚರ್’ಗಳನ್ನು ನೀಡುತ್ತದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್’ಗಳ ಉಪಯೋಗ (Debit and credit card), ಬಸ್ ಪಾಸುಗಳು, ಸ್ಟೇಟ್ ಗುರುತಿನ ಚೀಟಿಗಳು, ಡ್ರೈವರ್ ಲೈಸೆನ್ಸ್, ವರ್ಚುವಲ್ ಕಾರ್ ಕೀಗಳು (Virtual car key) ಸೇರಿದಂತೆ ಇನ್ನೂ ಹತ್ತು ಹಲವಾರು ಹೊಸ ಫೀಚರ್ಸ್’ಗಳನ್ನು ಬಳಕೆದಾರರಿಗೆ ನೀಡಲಿದೆ.

ಇದನ್ನೂ ಓದಿ: FDA SDA Recruitment 2024 : ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ | ಖಾಲಿ ಇರುವ 300 ಹುದ್ದೆಗಳ ನೇಮಕಾತಿಗೆ ಜಿಲ್ಲಾವಾರು ಪಟ್ಟಿ ಬಿಡುಗಡೆ

ಭಾರತದಲ್ಲೂ ಬಂದ್ ಆಗಲಿದೆಯಾ?

ಗೂಗಲ್ ಪೇ ಆ್ಯಪ್ ಬಹುತೇಕವಾಗಿ 2022 ರಿಂದಲೇ ಗೂಗಲ್ ವಾಲೆಟ್ ಎಂದು ಬದಲಾಗಿದ್ದರೂ ಕೂಡ ಅಮೆರಿಕ ಸೇರಿ ಇನ್ನು ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಪಾವತಿ ಕೊಡುಗೆಗಳನ್ನು ಸರಳೀಕರಣಗೊಳಿಸಲು ಜೂನ್ 4, 2024ರಿಂದ ಅಮೆರಿಕ ದೇಶದಲ್ಲಿ ಇದು ಸ್ಥಗಿತಗೊಳ್ಳುವುದು. ಆದರೆ ಭಾರತ ಮತ್ತು ಸಿಂಗಾಪುರ ದೇಶದಲ್ಲಿ ಯಾವುದೇ ರೀತಿಯ ಬ್ಯಾನ್ ಆಗುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಇದು ಭಾರತೀಯರಿಗೆ ನಿಟ್ಟುಸಿರು ಬಿಡುವಂತಾಗಿದೆ.

Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Posts

error: Content is protected !!