ಸಾಲ ಯೋಜನೆಹಣಕಾಸು

Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Google Pay loan : ಗೂಗಲ್ ಪೇ ಮುಖಾಂತರ ಸಾಲವನ್ನು ಪಡೆಯಲು ಬೇಕಾಗಿರುವ ಅರ್ಹತೆ, ಸಾಲ ಸೌಲಭ್ಯದ ಇತರ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಪ್ರತಿಷ್ಟಿತ ಗೂಗಲ್ ಸಹಭಾಗಿತ್ವದ ‘ಗೂಗಲ್ ಪೇ’ (Google Pay) ತನ್ನ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಿದೆ. ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಯಾವುದೇ ಹೆಚ್ಚಿನ ದಾಖಲೆಗಳಿಲ್ಲದೆ (Physical documents) ಸಾಲವನ್ನು ನೀಡುತ್ತ್ತದೆ. ಗೂಗಲ್ ಪೇ ಬ್ಯುಸಿನೆಸ್ ಆ್ಯಪ್ ಮೂಲಕ ಬರೋಬ್ಬರಿ 8 ಲಕ್ಷ ರೂಪಾಯಿ ವರೆಗೂ ಸರಳ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ.

ಗೂಗಲ್ ಪೇ DMI FINANCE, Axis bank, IDFC ಬ್ಯಾಂಕ್ ಮತ್ತು ಇತರೆ ಬೇರೆ ಬೇರೆ ಸಾಲದಾಯಿ ಹಣಕಾಸು ಕಂಪನಿಗಳ ಮೂಲಕ (Money lenders) ಈ ಸಾಲ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸುತ್ತದೆ. ಹಾಗಂತ ಈ ಸಾಲ ಪಡೆಯಲು ಮೇಲ್ಕಾಣಿಸಿದ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕಿಲ್ಲ.

ಇದನ್ನೂ ಓದಿ: Rajiv Gandhi Housing Scheme 2024 : ರಾಜೀವ್ ಗಾಂಧಿ ವಸತಿ ನಿಗಮದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಗರಿಷ್ಟ ಎಷ್ಟು ಸಾಲ ಪಡೆಯಬಹುದು?

‘ಗೂಗಲ್ ಪೇ’ ಅರ್ಹ ಗ್ರಾಹಕರಿಗೆ 10,000 ದಿಂದ ಬರೋಬ್ಬರಿ 8 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ಈ ಸಾಲದ ಪ್ರಯೋಜನ ಪಡೆಯಲು, ಆನ್‌ಲೈನ್ ನಗದು ವರ್ಗಾವಣೆಗಾಗಿ (Online transaction) ಗೂಗಲ್ ಪೇ ಅಪ್ಲಿಕೇಶನ್ ಉಪಯೋಗಿಸುತ್ತಿರುವ ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.

ಸಾಲ ಮರುಪಾವತಿ ಹೇಗೆ? (Loan repayment details)

ಸುಲಭ ಮಾಸಿಕ ಕಂತುಗಳಲ್ಲಿ (EMI) ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಅವಕಾಶವಿದೆ. ಪಡೆದ ಸಾಲವನ್ನು 6 ತಿಂಗಳಿನಿAದ 4 ವರ್ಷಗಳ ವರೆಗೆ ಮರುಪಾವತಿಗೆ ಅವಕಾಶವಿದೆ. ಪಡೆದ ಸಾಲ ಮೊತ್ತದ ಮೇಲೆ ಅದರ ಮಿತಿಯು ಅನ್ವಯವಾಗಿರುತ್ತದೆ. ಈ ಮಿತಿಯು ತಿಂಗಳಿಗೆ 1,000 ರೂಪಾಯಿಯಿಂದ ಆರಂಭವಾಗುತ್ತದೆ.

ಇದನ್ನೂ ಓದಿ: PM – Surya Ghar Muft Bijli Jojana : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಸಾಲಕ್ಕೆ ಬಡ್ಡಿದರ ಎಷ್ಟು? (Interests rate on loan)

ಸಾಲದ ಬಡ್ಡಿ ದರವು ಗ್ರಾಹಕರ ಸಿಬಿಲ್ ಸ್ಕೋರ್ (CIBIL SCORE or CREDIT SCORE) ಮೇಲೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಗೂಗಲ್ ಪೇಯಿಂದ ನೀವು ಪಡೆಯುವ ಸಾಲಕ್ಕೆ ಬಡ್ಡಿದರವು ವಾರ್ಷಿಕ 13.99% ನಿಂದ ಆರಂಭವಾಗುತ್ತದೆ. ಉದಾಹರಣೆಗೆ: 1 ಲಕ್ಷ ರೂಪಾಯಿ ಸಾಲಕ್ಕೆ ವಾರ್ಷಿಕ 13,900 ರೂಪಾಯಿ ಬಡ್ಡಿ ಪಾವತಿಸಬೇಕು.

Google Pay loan

ಸಾಲವನ್ನು ಪಡೆಯುವುದು ಹೇಗೆ? (How to get loan)

ಗೂಗಲ್ ಪೇ ಮೂಲಕ ಸಾಲ ಪಡೆಯಲು ಮೊದಲನೆಯದಾಗಿ ನಿಮ್ಮ ಮೊಬೈಲ್‌ನಲ್ಲಿ Google pay for business app ಅನ್ನು ಹೊಂದಿರಬೇಕು ಮತ್ತು ಈ ಆ್ಯಪ್’ನ ಡೈರೆಕ್ಟ್ ಲಿಂಕ್ ಈ ಲೇಖನದ ಕೊನೆಯಲ್ಲಿದೆ. ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ನಂತರ ಅಲ್ಲಿ ಕೊನೆಗೆ ಕಾಣುವ ‘Manage your money’ ಎಂಬ ವಿಭಾಗದಲ್ಲಿ ಎರಡನೇ ಆಯ್ಕೆಯಾದ LOANS ಮೇಲೆ ಕ್ಲಿಕ್ ಮಾಡಿ.

ಆನಂತರ APPLY NOW ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ತೋರಿಸುತ್ತದೆ. ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಸರಿಯಾಗಿದ್ದರೆ CONTINUE ಎಂಬ ಆಯ್ಕೆಯ ಮೇಲೆ ಒತ್ತಿ. ಬಳಿಕ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸಾಲ ಪಡೆಯಬಹುದು. ನೀವು ಸಾಲ ಪಡೆಯಲು ಅರ್ಹರಿದ್ದರೆ ಅರ್ಜಿ ಸಲ್ಲಿಸಿದ ನಂತರ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಬರೀ ಗೂಗಲ್ ಪೇ ಆ್ಯಪ್’ನಲ್ಲಿ ಸಾಲ ಸೌಲಭ್ಯವಿಲ್ಲ. Google pay business app ಮೂಲಕ ಮಾತ್ರ ಸಾಲ ಲಭ್ಯವಿದೆ.

ಸೂಚನೆ: ಯಾವುದೇ ಸಾಲ ಸೌಲಭ್ಯ ಪಡೆಯುವಾಗ ಎಚ್ಚರಿಕೆ ಇರಲಿ. ಸಾಲ ನೀಡುವ ಸಂಸ್ಥೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡು ಅರ್ಜಿ ಸಲ್ಲಿಕೆಗೆ ಮುಂದುವರೆಯಿರಿ. ಸಾಲ ಮರುಪಾವತಿಯ ಅರ್ಹತೆಗೆ ಆಧಾರವಾಗಿ ಸಾಲ ಪಡೆಯಿರಿ.

ಇದನ್ನೂ ಓದಿ: ಸಾರಿಗೆ ಇಲಾಖೆ ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಪಾಸಾಗಿದ್ರೆ ಅರ್ಜಿ ಹಾಕಿ KPSC Motor Vehicle Inspector Recruitment 2024

WhatsApp Group Join Now
Telegram Group Join Now

Related Posts

error: Content is protected !!