Gucchi Mushroom Farming : ಒಂದು ಕೆಜಿ ಅಣಬೆ ಬೆಲೆ 41,000 ರೂಪಾಯಿ
ಈ ಅಣಬೆ ಬೆಳೆದರೆ ಕುಲಾಯಿಸಲಿದೆ ಅದೃಷ್ಟ...
ಅಣಬೆ ಬೆಳೆದು ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸುತ್ತಿರುವ ಹಲವಾರು ರೈತರಿದ್ದಾರೆ. ಅಣಬೆ ಬೆಳೆಯಲು (Mushroom Farming) ಹೆಕ್ಟೇರುಗಟ್ಟಲೇ ಕೃಷಿ ಭೂಮಿ ಬೇಕಾಗಿಲ್ಲ. ಮನೆಯ ತಾರಸಿ ಅಥವಾ ಅಥವಾ ಬಂಜರು ಭೂಮಿಯಲ್ಲಿ ಕೂಡ ಮಾಡಬಹುದು.
ಕೇವಲ ಒಂದು ಶೆಡ್ ನಿರ್ಮಿಸಿದರೆ ಸಾಕು ಅದರ ಮೂಲಕ ಕೈ ತುಂಬ ಹಣ ಸಂಪಾದಿಸಬಹುದು. ಅಣಬೆಯಲ್ಲಿ ಪ್ರೊಟೀನ್, ಕಬ್ಬಿಣ ಹಾಗೂ ತುಂಬಾನೇ ಮಿಟಿಮಿನ್ ಡಿ ಇರುತ್ತದೆ. ಇದು ಡಯಾಬಿಟಿಸ್ ರೋಗಿಗಳಿಗೆ ತುಂಬಾ ಒಳ್ಳೆಯದು.
ಸಾಮಾನ್ಯವಾಗಿ ಅಣಬೆಯ ಬಳಕೆ ಭಾರತದಲ್ಲಿ ಕಡಿಮೆ. ಆದರೆ ಬೇರೆ ರಾಷ್ಟçಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಇರುವ, ದುಬಾರಿ ಬೆಲೆಯ ಅಣಬೆಗಳು ಇದೀಗ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ನಮ್ಮ ರೈತರು ಕೃಷಿಯೊಂದಿಗೆ ಅಣಬೆ ಫಸಲು ತೆಗೆಯುತ್ತಾ ಹೆಚ್ಚಿನ ಹಣವನ್ನು ಗಳಿಸಬಹುದು. ಅದರಲ್ಲೂ ಈ ವಿಶೇಷ ತಳಿಯ ಅಣಬೆ ಬೆಳೆದರೆ ಅದೃಷ್ಟ ಕುಲಾಯಿಸಿತು ಅಂತಲೇ ಅರ್ಥ!
ಇದನ್ನೂ ಓದಿ: Nati koli Poultry Farming – ನಾಟಿ ಕೋಳಿ ಸಾಕಣೆಯಲ್ಲಿ ಅಧಿಕ ಲಾಭ ಗಳಿಕೆಯ ಸೂತ್ರಗಳು
ಯಾವುದು ಈ ವಿಶೇಷ ತಳಿ ಅಣಬೆ?
ಇದು ಗುಚ್ಚಿ ಅಥವಾ ಮೊರ್ಚೆಲ್ಲಾ ಎಸ್ಕುಲೆಂಟಾ ಪ್ರಭೇದದ ಅಣಬೆ. ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವ ವಿಶೇಷ ಪ್ರಭೇದದ ಅಣಬೆ ಇದು. ಹಿಮಾಚಲ ಪ್ರದೇಶ, ಉತ್ತರಾಂಚಲ್, ಜಮ್ಮು- ಕಾಶ್ಮೀರದ ಭಾಗಗಳಲ್ಲಿ ಈ ಅಣಬೆಯನ್ನು ಕಾಣಬಹುದು.
ಹಿಮಾಚಲ ಪ್ರದೇಶದ ಹಿಮಭರಿತ ಇಳಿಜಾರುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಅಣಬೆ ಬೆಳೆ ತನ್ನ ವಿನ್ಯಾಸ, ಪರಿಮಳ ಮತ್ತು ಹೆಚ್ಚು ಸಮಯ ಬಾಳುವಿಕೆಯಿಂದಾಗಿ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಮೂಲಗಳ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಪ್ರಬೇಧದ ಅಣಬೆ ಬಳಸುತ್ತಾರೆ ಎನ್ನಲಾಗುತ್ತಿದೆ.
ವಿದೇಶಕ್ಕೆ ರಫ್ತು
ಗುಚ್ಚಿ ಅಣಬೆ ಸಿಗುವುದು ಅಪರೂಪವಾದ್ದರಿಂದ ಬೇಡಿಕೆ ಹೆಚ್ಚು. ಬೇಡಿಕೆಯ ಕಾರಣಕ್ಕೆ ಇದಕ್ಕೆ ಬೆಲೆ ಕೂಡ ಹೆಚ್ಚು. ಈ ಪ್ರಭೇದದ ಅಣಬೆಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಕಾಂಗರಾ ಕಣಿವೆ, ಜಮ್ಮು- ಕಾಶ್ಮೀರ, ಮನಾಲಿ ಹಾಗೂ ಹಿಮಾಚಲ ಪ್ರದೇಶದ ಮತ್ತಿತರ ಭಾಗಗಗಳಲ್ಲಿ ಮಂಜು ಬೀಳುವ ಅವಧಿ ಮುಗಿದ ಮೇಲೆ ದೊರೆಯುತ್ತದೆ.
ಸುಮಾರು ಶೇ.90 ರಷ್ಟು ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ನೆದರ್‌ಲ್ಯಾಂಡ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಯುರೋಪಿಯನ್ ದೇಶದ ಸಸ್ಯಾಹಾರಿಗಳು ಪ್ರಾಣಿಗಳ ಪ್ರೋಟೀನ್ಗಾಗಿ ಮೊರ್ಚೆಲ್ಲಾ ತಳಿ ಮುಶ್ರೂಮ್‌ನ್ನು ಹೆಚ್ಚು ಸೇವಿಸುತ್ತಾರೆ. ಹೀಗಾಗಿ ಬೇಡಿಕೆ ಹೆಚ್ಚಿದೆ ಎಂಬುವುದು ವ್ಯಾಪಾರಿಗಳ ಅನಿಸಿಕೆ.
ಇದನ್ನೂ ಓದಿ: Line 883 Onion : ಎಕರೆಗೆ 325 ಕ್ವಿಂಟಾಲ್ ಇಳುವರಿ ಕೊಡುವ ಹೊಸ ತಳಿ ಇರುಳ್ಳಿ
ಒಂದು ಕೆ.ಜಿ ಅಣಬೆಗೆ 41,000 ರೂಪಾಯಿ!
ಸ್ವಾಭಾವಿಕವಾಗಿ ಬೆಳೆಯುವ ಗುಚ್ಚಿ ಅಣಬೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಕೆ.ಜಿ ಒಣಗಿದ ಅಣಬೆಗೆ ದೇಶೀಯ ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ಗಾತ್ರದ ಆಧಾರದ ಮೇಲೆ 8,000 ರಿಂದ 12,000 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 41,128 ರೂಪಾಯಿಗೆ ಅಣಬೆ ರಫ್ತಾಗುತ್ತಿದೆ.
ಹಿಮಾಚಲದ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ನೇಪಾಳಿಗರು ಕಾಡಿನಲ್ಲಿ ಗುಚ್ಚಿ ಅಣಬೆ ಸಂಗ್ರಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಮ್ಲಾ, ಚಂಬಾ, ಕುಲು ಮತ್ತು ಮಂಡಿ ಜಿಲ್ಲೆಗಳ ಒಳಭಾಗದ ದಟ್ಟವಾದ ದೇವದಾರು ಕಾಡುಗಳಲ್ಲಿ ಮೊರ್ಚೆಲ್ಲಾ ತಳಿ ಅಣಬೆಯನ್ನು ಬೆಳೆಯಲಾಗುತ್ತದೆ.
ಕೃಷಿ ಮಾಡಲು ಸಾಧ್ಯವೇ?
ಹಿಮಚ್ಛಾದಿತ ಭಾಗಗಗಳಲ್ಲಿ ಮಂಜು ಬೀಳುವ ಅವಧಿ ಮುಗಿದ ಮೇಲೆ ಗುಚ್ಚಿ ಅಣಬೆ ದೊರೆಯುತ್ತದೆ. ಮೇ ತಿಂಗಳಿನಿAದ ಜೂನ್ ಅಂತ್ಯದ ವರೆಗೆ ಈ ಅಣಬೆಯ ಕೊಯ್ಲು ನಡೆಸಲಾತ್ತದೆ. ನೈಸರ್ಗಿಕ ಪರಿಸ್ಥಿತಿಯಲ್ಲಿ ಒಣಗಿದ ನಂತರ ಹೊಸ ಕೊಯ್ಲಿನ ಅಣಬೆಯನ್ನು 80-100 ಗ್ರಾಂ ಗಳಾಗಿ ವಿಂಗಡಿಸಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಇನ್ನು ಮೇಲಷ್ಟೇ ಗುಚ್ಚಿ ಪ್ರಬೇಧದ ಅಣಬೆ ಕೃಷಿ ಸಾಧ್ಯವೇ ಎಂಬ ಬಗ್ಗೆ ಸಂಶೋಧನೆಗಳಾಗಬೇಕಿದೆ. ಈಚೇಗೆ ಹಿಮ ಪ್ರದೇಶದಲ್ಲಿ ಬೆಳೆಯುವ ಸೇಬು ಬೆಳೆ ಬೀದರ್‌ನಂತಹ ರಣ ಬಿಸಿಲಿನಲ್ಲೂ ಬೆಳೆಯಲು ಸಾಧ್ಯವಾಗಿದೆ. ಅದರಂತೆ ಗುಚ್ಚಿ ಅಣಬೆಯ ಕೃಷಿಯೂ ಸಾಧ್ಯವಾಗಬಹುದೇನೋ?
ಇದನ್ನೂ ಓದಿ: E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?