ಪಶುಪಾಲನೆಹಣಕಾಸು

HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

WhatsApp Group Join Now
Telegram Group Join Now

ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಹೆಸರುವಾಸಿಯಾದ HDFC ಬ್ಯಾಂಕ್ ರೈತರ ಕೃಷಿ, ಪಶುಪಾಲನೆ ಚಟುವಟಿಕೆಗಳನ್ನು ಉತ್ತೇಜಿಸಲು 10 ಲಕ್ಷದ ವರೆಗೂ ಮೇಲಾದಾರ ಮುಕ್ತ ಸಾಲ ಸೌಲಭ್ಯವನ್ನು ನೀಡಲು ಅರ್ಜಿ ಆಹ್ವಾನಿಸಿದೆ. ಈ ಲೋನ್ ಪಡೆಯಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

HDFC Bank Agriculture – Dairy Farming Loan : ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ HDFC ಬ್ಯಾಂಕ್ ಲಿಮಿಟೆಡ್ ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಬೃಹತ್ ಕಂಪನಿಗಳಲ್ಲಿ ಒಂದಾಗಿದೆ. ರೈತರಿಗೆ ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳನ್ನು ಉತ್ತೇಜಿಸಲು ಸಾಲದ ಸೌಲಭ್ಯವನ್ನು ನೀಡುತ್ತಿದೆ. ಗ್ರಾಮೀಣ ಜನತೆ ಹಸು ಸಾಕಾಣಿಕೆ ಸೇರಿದಂತೆ ಹಲವಾರು ಕೃಷಿ ಚಟುವಟಿಕೆಗಳಲ್ಲಿ ಪರಿಣಿತಿ ಹೊಂದಿರುತ್ತಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ತಮ್ಮ ಚಟುವಟಿಕೆಗಳನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Mgnrega Personal Work Subsidy : ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಹಾಯಧನ | ₹5 ಲಕ್ಷದ ವರೆಗೆ ನೆರವು

ಕೃಷಿ, ಪಶುಪಾಲನೆಯಲ್ಲಿ ಹೊಸದನ್ನು ಮಾಡುವ ಆಸಕ್ತಿ ಇದ್ದರೂ ಕೂಡ ಬಂಡವಾಳದ ಕಾರಣಕ್ಕೆ ಪರಿತಪಿಸುವವರಿಗೆ ಸರಕಾರ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ವಿವಿಧ ಸಾಲ ಸೌಲಭ್ಯಗಳನ್ನು ಕಲ್ಪಿಸಿವೆ. ಈ ನಿಟ್ಟಿನಲ್ಲಿ HDFC ಬ್ಯಾಂಕ್‌ನ (HDFC Bank loan for agri activities) ಈ ಸೌಲಭ್ಯ ಸಹಕಾರಿಯಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಸಾಲವನ್ನು ಪಡೆಯಲು ಅರ್ಹತೆ, ಬೇಕಾಗುವ ದಾಖಲಾತಿಗಳು, ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಇತರೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ…

ಲೋನ್ ವಿವರ ಮತ್ತು ಅರ್ಹತೆ (Loan details and eligibility)

 HDFC ಬ್ಯಾಂಕ್ ನಿಮ್ಮ ಅರ್ಹತೆಗೆ ಅನುಗುಣವಾಗಿ 10 ಲಕ್ಷದ ವರೆಗೆ ಲೋನ್ ಸೌಲಭ್ಯ ನೀಡುತ್ತದೆ. ಈ ಲೋನ್ ಪಡೆಯಲು ಯಾವುದೇ ಮೇಲಾಧಾರದ (Surity) ಅವಶ್ಯಕತೆ ಇರುವುದಿಲ್ಲ ಎನ್ನುತ್ತದೆ ಬ್ಯಾಂಕ್ ಮೂಲ. ಸಂಬ೦ಧಪಟ್ಟ ಕೃಷಿ, ಪಶುಪಾಲನೆ ಚಟುವಟಿಕೆಗಳಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವ, ಕನಿಷ್ಠ 18 ಮತ್ತು ಗರಿಷ್ಟ 60 ವರ್ಷದ ವಯೋಮಿತಿಯವರು ಈ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಯಾವ್ಯಾವ ಕೃಷಿ ಚಟುವಟಿಕೆಗಳಿಗೆ ಲೋನ್ ಸೌಲಭ್ಯ ಸಿಗಲಿದೆ?

 • ಹೈನುಗಾರಿಕೆ (Dairy farming)
 • ಹಂದಿ ಸಾಕಾಣಿಕೆ (Pig farming)
 • ಶ್ರೇಣಿಕರಣ ಹಾಗೂ ವಿಂಗಡೀಕರಣ ಘಟಕಗಳು
 • ಕೋಳಿ ಸಾಕಾಣಿಕೆ (Poultry farming)
 • ಜೇನು ಕೃಷಿ (Honey Bee farming)
 • ಸಣ್ಣ ಆಹಾರ ಸಂಸ್ಕರಣ ಘಟಕಗಳು
 • ಮೀನು ಸಾಕಾಣಿಕೆ (Fish farming)

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಆಧಾರ್ ಕಾರ್ಡ
 • ಪಾನ್ ಕಾರ್ಡ್
 • ಪಾಸ್ ಪೋರ್ಟ್ ಸೈಜ್ ಫೋಟೋ
 • ಒಂದು ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್

ಇದನ್ನೂ ಓದಿ: WCD Karnataka Anganwadi Recruitment 2024 : ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸುವುದು ಹೇಗೆ?

HDFC ಲೋನ್ ಸೌಲಭ್ಯ ಪಡೆಯಲು ನಿಮ್ಮ ಹತ್ತಿರವಿರುವ HDFC  ಬ್ಯಾಂಕ್‌ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಕೆಳಗೆ ನೀಡಿರುವ ಸಹಾಯವಾಣಿ ಸಂಖ್ಯೆಗೆ ಕರೆ ಅರ್ಜಿ ಸಲ್ಲಿಕೆಯ ಮತ್ತಷ್ಟು ವಿವರ, ಬಡ್ಡಿ ಮತ್ತು ಸಾಲ ಮರುಪಾವತಿ ಸಂಬ೦ಧಿತ ವಿವರಗಳ ಬಗ್ಗೆ ವಿಚಾರಿಸಬಹುದು. ಈ ಲೋನ್ ಸಂಬ೦ಧಿತ ಯಾವುದೇ ಸಲಹೆ ಮತ್ತು ಸಹಾಯ ಬೇಕಿದ್ದರೆ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿ : 8310840750

HDFC Bank Agriculture – Dairy Farming Loan

Post Office Gram surakha yojane :1500 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ರೂಪಾಯಿ ಪಡೆಯುವ ಪೋಸ್ಟಾಫೀಸ್ ಸ್ಕೀಮ್ | ಇದು ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಯೋಜನೆ

WhatsApp Group Join Now
Telegram Group Join Now

Related Posts

error: Content is protected !!