HMPV New Virus : ಹೊಸ ವೈರಸ್ ಎಷ್ಟು ಡೇಂಜರಸ್?
ಈ ವೈರಾಣು ಯಾರಿಗೆಲ್ಲ ಅಪಾಯಕಾರಿ | ಆರೋಗ್ಯ ಇಲಾಖೆಯ ಮಾರ್ಗಸೂಚಿಗಳೇನು?
ಈಗ್ಗೆ ಹದಿನಾಲ್ಕು ವರ್ಷಗಳ ಹಿಂದೆ ಗುರುತಿಸಲ್ಪಟ್ಟಿದ್ದ ನೆಗಡಿ ವೈರಾಣುವೊಂದು ಈಗ ಭಾರೀ ಸದ್ದು ಮಾಡುತ್ತಿದೆ. ದಿನಕ್ಕೊಂದು ಕ್ಷಣಕ್ಕೊಂದು ಗಾಳಿಸುದ್ದಿ, ಊಹಾಪೋಹಗಳು ಬಿತ್ತರವಾಗತೊಡಗಿವೆ. ಕೋರೊನಾ ಹೊಡೆತದಿಂದ ಜರ್ಜರಿತರಾಗಿದ್ದ ಜನ ‘ಮತ್ತೇನು ಬಂತಪ್ಪಾ ಗಂಡಾ೦ತರ’ ಅಂತ ತತ್ತರಿಸುತ್ತಿದ್ದಾರೆ.
ಹೌದು, ಕೋವಿಡ್-19 (Covid-19) ಸಾಂಕ್ರಾಮಿಕದ ಸಾವು-ನೋವಿನ ಸಂಕಟ ಮಾಸುವ ಮುನ್ನವೇ ಮತ್ತೊಂದು ಸಾಂಕ್ರಾಮಿಕದ ಗದ್ದಲವೆದ್ದಿದೆ. ಹೂಮನ್ ಮೆಟಾನ್ಯೂಮೋ ವೈರಸ್ (Human Metapneumo Virus – HMPV) ಎಂಬ ವೈರಸ್ ಕಳವಳ ಮೂಡಿಸಿದ್ದು; ಚೀನಾದಲ್ಲಿ ಆಸ್ಪತ್ರೆಗಳು ಕಿಕ್ಕಿರಿದಿವೆಯಂತೆ, ಸ್ಮಶಾನಗಳಲ್ಲಿ ರಾಶಿರಾಶಿ ಹೆಣಗಳಂತೆ. ಭಾರತದಲ್ಲಿ ಮತ್ತೆ ಲಾಕ್ಡೌನ್ ಅಂತೆ, ಈ ಸೋಂಕಿಗೆ ಔಷಧಿ ಇಲ್ವಂತೆ… ಎಂಬಿತ್ಯಾದಿ ಅಂತೆ-ಕ೦ತೆಗಳು ಹರಿದಾಡುತ್ತಿವೆ.
ಇದನ್ನೂ ಓದಿ: Cold wave forecast in Karnataka : ಮುಂದಿನ ಒಂದು ವಾರ ಭಾರೀ ಚಳಿ
ಏನಿದು HMPV ವೈರಸ್?
ಹೂಮನ್ ಮೆಟಾನ್ಯೂಮೋ ವೈರಸ್ ಒಂದು ವಿದೇಶಿ ವೈರಸ್. ಇದು ನ್ಯುಮೊವಿರಿಡೆ ಕುಟುಂಬದ ಮೆಟಾ ನ್ಯೂಮೋ ವೈರಸ್ ಪಂಗಡಕ್ಕೆ ಸೇರಿದ್ದು; ಕಳೆದ 2001ರಲ್ಲಿ ಡೆನ್ಮಾರ್ಕ್’ನ ಸಂಶೋಧಕರು ಮೊದಲ ಬಾರಿಗೆ ಈ ವೈರಸ್ ಗುರುತಿಸಿದ್ದರು. ಇದು ಕಳೆದ 6 ದಶಕದಿಂದ ಪ್ರಪಂಚದಾದ್ಯ೦ತ ವಿವಿಧೆಡೆ ಇದನ್ನು ಗುರುತಿಸಲಾಗಿದೆ.
ಇದೀಗ ಈ ವೈರಸ್ ಮತ್ತೆ ಸದ್ದು ಮಾಡುತ್ತಿದ್ದು; ಚಳಿಗಾಲದ ನೆಗಡಿ, ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ರೋಗ ಲಕ್ಷಣಗಳಿಗೂ ಮತ್ತು ಸದರಿ ಎಚ್ಎಂಪಿವಿ ವೈರಸ್’ನ ರೋಗ ಲಕ್ಷಣಗಳಿಗೂ ಹೋಲಿಕೆ ಇರುವುದರಿಂದ ಸಹಜವಾಗಿಯೇ ಎಲ್ಲರಲ್ಲೂ ಭಯ ಮನೆ ಮಾಡಿದೆ.
ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ
ಬೆಂಗಳೂರಲ್ಲಿ ಶಿಶುಗಳಿಗೆ ಸೋಂಕು
ಕರ್ನಾಟಕದಲ್ಲಿ ಎರಡು ಎಚ್ಎಂಪಿವಿ ಪ್ರಕರಣ ಪತ್ತೆಯಾಗಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research -ICMR) ಹೇಳಿದೆ. ಬ್ರಾಂಕೋನ್ಯೂಮೋನಿಯಾ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ಪ್ರತ್ಯೇಕವಾಗಿ ದಾಖಲಾಗಿದ್ದ 3 ತಿಂಗಳ ಹೆಣ್ಣು ಹಾಗೂ 8 ತಿಂಗಳ ಗಂಡು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಆದರೆ, ಈ ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಹೀಗಾಗಿ ಸೋಂಕು ಚೀನಾ ಅಥವಾ ಬೇರೆಡೆಯಿಂದ ಹರಡಿಲ್ಲ ಎನ್ನುವುದನ್ನು ಪುಷ್ಟಿಕರಿಸಿದೆ.
HMPV ಸೋಂಕಿನ ಲಕ್ಷಣಗಳು
ಎಚ್ಎಂಪಿವಿ ಸೋಂಕಿತರಲ್ಲಿ ಜ್ವರ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸೋಂಕು 3-6 ದಿನಗಳ ವರೆಗೆ ಇರುತ್ತದೆ. ತೀವ್ರಗೊಂಡರೆ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಉಂಟಾಗುತ್ತದೆ.
ಸೋ೦ಕಿತರು ಕೆಮ್ಮಿದಾಗ, ಸೀನಿದಾಗ, ಸೋಂಕಿತರ ಜತೆ ಸಂಪರ್ಕಕ್ಕೆ ಬಂದಾಗ, ಕೈ ಕುಲುಕಿದಾಗ, ಸೋಂಕಿತರ ಮೂಗು, ಕಣ್ಣು, ಬಾಯಿ ಮುಟ್ಟಿದಾಗ ವೈರಾಣುಗಳು ಹರಡುತ್ತವೆ.
ಇದನ್ನೂ ಓದಿ: New facilities for Govt employees : ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಸೌಲಭ್ಯಗಳು
ಆರೋಗ್ಯ ಇಲಾಖೆ ಮಾರ್ಗಸೂಚಿಗಳೇನು?
ಸೋಂಕಿನ ಕುರಿತು ಗಾಬರಿಯಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕೆಳಕಂಡ ಮಾರ್ಗಸೂಚಿ ಪ್ರಕಟಿಸಿದೆ:
- ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳಿ
- ಆಗಾಗ ಕೈಗಳನ್ನು ಸೋಪು ಅಥವಾ ಸ್ಯಾನಿಟೈಜರ್ನಿಂದ ತೊಳೆದುಕೊಳ್ಳಿ
- ಜ್ವರ, ಕೆಮ್ಮು ಅಥವಾ ಸೀನು ಇದ್ದಲ್ಲಿ ಸಾರ್ವಜನಿಕ ಪ್ರದೇಶಗಳಿಂದ ದೂರವಿರಿ
- ಸೋಂಕು ಹರಡುವುದನ್ನು ತಡೆಯಲು ಹೊರಗಿನಿಂದ ಗಾಳಿಯಾಡುವ ವ್ಯವಸ್ಥೆ ಇರಲಿ
- ಆರೋಗ್ಯ ಸಮಸ್ಯೆಯಿದ್ದರೆ ಮನೆಯಲ್ಲಿಯೇ ಇದ್ದು ಜನಸಂಪರ್ಕ ಕಡಿಮೆ ಮಾಡಿ
- ಹೇರಳವಾಗಿ ನೀರು ಕುಡಿದು ಪೌಷ್ಠಿಕ ಆಹಾರ ಸೇವಿಸಿ
ಈ ವೈರಾಣು ಯಾರಿಗೆಲ್ಲ ಅಪಾಯಕಾರಿ?
ಸಣ್ಣ ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಬೇಗ ಹರಡುತ್ತದೆ ಎನ್ನುವುದು ಗಂಭೀರ ವಿಚಾರ. ಈಗ ಬೆಂಗಳೂರಿನಲ್ಲೂ ಎರಡು ಶಿಶುಗಳಿಗೆ HMPV ಪತ್ತೆಯಾಗಿರುವುದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿದೆ.
ಈ ಹೊಸ ವೈರಾಣುವಿನ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಹಿರಿಯ ನಾಗರಿಕರು, ಉಸಿರಾಟ ಸಮಸ್ಯೆ ಹೊಂದಿರುವವರು, ಹೃದಯ ಸಮಸ್ಯೆ ಹೊಂದಿರುವವರು, ರೋಗನಿರೋಧಕ ಶಕ್ತಿ ಸಮಸ್ಯೆ ಹೊಂದಿರುವವರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಕ್ಷೇಮಕರ.
ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು
One Comment