ಉದ್ಯೋಗ

Home Guards jobs : ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ

WhatsApp Group Join Now
Telegram Group Join Now

Home Guards jobs

59 ಪುರುಷರು ಹಾಗೂ 10 ಮಹಿಳೆಯರು ಸೇರಿ ಒಟ್ಟು 69 ಹೋಮ್‌ಗಾರ್ಡ್ ಹುದ್ದೆಗಳಿಗೆ 10ನೇ ತರಗತಿ ಪಾಸಾದ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಬಯಸುವ ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ನೇಮಕಾತಿ ಕುರಿತ ಸಂಕ್ಷಿಪ್ತ ವಿವರ

 • ನೇಮಕಾತಿ ಸಂಸ್ಥೆ : ಗೃಹರಕ್ಷಕ ದಳ, ದಾವಣಗೆರೆ
 • ಹುದ್ದೆಗಳ ಹೆಸರು : ಗೃಹರಕ್ಷಕ/ ಗೃಹರಕ್ಷಕಿ
 • ಒಟ್ಟು ಖಾಲಿ ಹುದ್ದೆಗಳು : 69 ಹುದ್ದೆಗಳು
 • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳು

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ವಯೋಮಿತಿ ಮತ್ತು ವಿದ್ಯಾರ್ಹತೆ

19 ರಿಂದ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ವಯಸ್ಸಿನೊಳಗಿರುವ 10ನೇ ತರಗತಿ ಪಾಸಾಗಿರುವ ಅರ್ಹ ಪುರುಷರು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಆಗಿರಬಾರದು ಮತ್ತು ಯಾವುದೇ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿರಬಾರದು.

ಗೃಹರಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು 10 ದಿನಗಳ ಮೂಲ ತರಬೇತಿ ನೀಡಲಾಗುತ್ತದೆ. ನೆರೆ ರಕ್ಷಣೆ, ಅಗ್ನಿಶಮನ ತರಬೇತಿ, ಪ್ರಥಮ ಚಿಕಿತ್ಸೆ, ರೈಫಲ್ ಟ್ರೈನಿಂಗ್, ಸಂಚಾರ ನಿಯಂತ್ರಣ, ಶಸ್ತ್ರಾಸ್ತ್ರ ತರಬೇತಿ ಮೊದಲಾದ ತರಬೇತಿ ನೀಡಿ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: WCD Karnataka Anganwadi Recruitment 2024 : ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಖಾಲಿ ಇರುವ ಹುದ್ದೆಗಳ ವಿವರ

ದಾವಣಗೆರೆ- 10 (ಮಹಿಳೆಯರು ಮಾತ್ರ)
ಹರಿಹರ-3
ಮಲೇಬೆನ್ನೂರು-7
ಹೊನ್ನಾಳಿ-4
ನ್ಯಾಮತಿ-15
ಚನ್ನಗಿರಿ-3
ಸಂತೇಬೆನ್ನೂರು-4
ಜಗಳೂರು-8
ಬಿಳಿಚೋಡು-11
ಬಸವನಕೋಟೆ-4

ಇದನ್ನೂ ಓದಿ: RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

 • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು
 • ಅರ್ಜಿಯೊಂದಿಗೆ ವಿದ್ಯಾರ್ಹತೆಯ ಪ್ರಮಾಣ ಪತ್ರ
 • ಜನ್ಮ ದಿನಾಂಕದ ದೃಢೀಕರಣ ಪತ್ರ
 • ವೈದ್ಯಕೀಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 09-02-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 12-02-2024

ಹೆಚ್ಚಿನ ಮಾಹಿತಿಗಾಗಿ

ಜಿಲ್ಲಾ ಸಮಾದೇಷ್ಟರ ಕಚೇರಿ, ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್, ಶಿವಪಾರ್ವತಿ ಕಲ್ಯಾಣ ಮಂಟಪ ಪಕ್ಕ, ಶಿವಾಲಯ ಹಿಂಭಾಗ, ದಾವಣಗೆರೆ-577006
ದೂರವಾಣಿ ಸಂಖ್ಯೆ: 08192-250784

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

WhatsApp Group Join Now
Telegram Group Join Now

Related Posts

error: Content is protected !!