Horticulture and Nursery Free Training : ವಾಣಿಜ್ಯ ತೋಟಗಾರಿಕೆ ಮತ್ತು ತರಕಾರಿ ನರ್ಸರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ತೋಟಗಾರಿಕೆ ಹಾಗೂ ನರ್ಸರಿ ಕುರಿತ ಉಚಿತ ತರಬೇತಿಗಾಗಿ (Free Training) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇದೇ ಜನವರಿ 14ರೊಳಗೆ ಹೆಸರು ನೋಂದಾಯಿಸಲು ಕೋರಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ (Canara Bank Deshpande rseti Training Institute) ಒಟ್ಟು 10 ದಿನ ತರಕಾರಿ ಬೆಳೆಗಳ ನರ್ಸರಿ ತರಬೇತಿ (Vegetable Crops Nursery Training) ಹಾಗೂ 13 ದಿನಗಳ ಕಾಲ ವಾಣಿಜ್ಯ ತೋಟಗಾರಿಕೆ ಉಚಿತ ತರಬೇತಿಯನ್ನು (Commercial Horticulture Training) ಹಮ್ಮಿಕೊಳ್ಳಲಾಗಿದೆ.
ಈ ಸಂಬ೦ಧ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಂದ ಅರ್ಜಿ ಕರೆಯಲಾಗಿದೆ. 2025ರ ಜನವರಿ 16 ರಿಂದ 10 ದಿನ ತರಕಾರಿ ಬೆಳೆಗಳ ನರ್ಸರಿ ತರಬೇತಿ ಮತ್ತು 2025ರ ಫೆಬ್ರವರಿ 3 ರಿಂದ 13 ದಿನ ವಾಣಿಜ್ಯ ತೋಟಗಾರಿಕೆ ಉಚಿತ ತರಬೇತಿ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ಜನವರಿ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ 9980510717, 9483485489 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
One Comment