IPPB Group Accident Insurance-500 ರೂಪಾಯಿಗೆ 10 ಲಕ್ಷ ವಿಮೆ ಪರಿಹಾರ | ಅಂಚೆ ಇಲಾಖೆಯ ಈ ಅವಕಾಶ ಮಿಸ್ ಮಾಡದೇ ಬಳಸಿಕೊಳ್ಳಿ…
ಕಡಿಮೆ ಪ್ರೀಮಿಯಮ್’ನೊಂದಿಗೆ ಹೆಚ್ಚು ಪ್ರಯೋಜನ ನೀಡುವ ವಿಶೇಷ ವಿಮೆ...

ಅಪಘಾತ ಸಂತ್ರಸ್ತ ಕುಟುಂಬಗಳಿಗಾಗಿ ಅಂಚೆ ಇಲಾಖೆ ‘ಸಮೂಹ ವಿಮೆ’ ಪರಿಚಯಿಸಿದೆ. ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ವಿಮೆ ಕವರೇಜ್ ಸಿಗುವ ಈ ವಿಮೆ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿದೆ…
ಅಪಘಾತ ಆಕಸ್ಮಿಕ; ಅದು ಯಾರ ಬದುಕಿನಲ್ಲಿ ಯಾವ ಸಂದರ್ಭದಲ್ಲಾದರೂ ಸಂಭವಿಸಬಹುದು. ಅಪಘಾತಕ್ಕೆ ಒಳಪಟ್ಟವರು ಹಾಗೂ ಅವರ ಕುಟುಂಬಸ್ಥರು ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಅನುಭವಿಸುವ ಸಂಕಟ ಹೇಳತೀರದು. ಇದನ್ನು ಅರಿತ ಭಾರತೀಯ ಅಂಚೆ ಇಲಾಖೆ ಈ ಸಮಸ್ಯೆಗೆ ಪರಿಹಾರವಾಗಿ ಅಂಚೆ ಇಲಾಖೆ ‘ಸಮೂಹ ವಿಮೆ’ಯನ್ನು ಪರಿಚಯಿಸಿದೆ.
ಕಡಿಮೆ ಪ್ರೀಮಿಯಂ ಹೆಚ್ಚು ಪ್ರಯೋಜನ
ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಅತೀ ಹೆಚ್ಚು ವಿಮೆ ಕವರೇಜ್ ಸಿಗುವ ಈ ವಿಮೆ ಪ್ರತಿಯೊಬ್ಬರಿಗೂ ಪ್ರಯೋಜನಕಾರಿ ಆಗಿದೆ. ಏಕೆಂದರೆ, ಈ ವಿಮೆಗೆ ಗ್ರಾಹಕರು 10 ಅಥವಾ 15 ಲಕ್ಷ ರೂ.ಗಳ ವಿಮೆ ಕವರೇಜ್‌ಗೆ ಕೇವಲ 500 ಚಿಲ್ಲರೆ ರೂ. ಪ್ರೀಮಿಯಂ ಕಟ್ಟಿದರೆ ಸಾಕಾಗುತ್ತದೆ. ಇದು ದೇಶದ ಎಲ್ಲರಿಗೂ ಕಡಿಮೆ ಪ್ರೀಮಿಯಮ್’ನೊಂದಿಗೆ ಹೆಚ್ಚು ಪ್ರಯೋಜನ ನೀಡುವ ವಿಶೇಷ ವಿಮೆಯಾಗಿದೆ.
ಅಂಚೆ ಇಲಾಖೆಯು ತನ್ನ ಅಂಗಸ೦ಸ್ಥೆಯಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ (India Post Payments Bank -IPPB) ಬ್ಯಾಂಕಿನ ಮೂಲಕ ಈ ಸೇವೆಗಾಗಿ ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್, ಸ್ಟಾರ್ ಹೆಲ್ತ್ ಇನ್ಸೂರೆನ್ಸ್, ನೀವಾ ಭೂಪ ಹೆಲ್ತ್ ಇನ್ಸೂರೆನ್ಸ್, ರಾಯಲ್ ಸುಂದರ೦ ಹಾಗೂ ರಿಲಯನ್ಸ್ ಇನ್ಸೂರೆನ್ಸ್ ಕಂಪನಿಗಳೊ೦ದಿಗೆ ಒಡಂಬಡಿಕೆ ಮಾಡಿಕೊಂಡು ಗ್ರಾಹಕರಿಗೆ ಹಲವು ಆಯ್ಕೆಗಳನ್ನು ನೀಡುತ್ತಿದೆ.
ಇದನ್ನೂ ಓದಿ: Karnataka Budget-ರಾಜ್ಯ ಬಜೆಟ್ 2025: ಸರಕಾರಿ ನೌಕರರ ಈ ನಿರೀಕ್ಷೆಗಳಿಗೆ ಫಲ ಸಿಗುತ್ತಾ?
ಯಾವೆಲ್ಲ ಅಪಘಾತಗಳಿಗೆ ವಿಮೆ ರಕ್ಷೆ ಸಿಗುತ್ತದೆ?
ಅಪಘಾತ ಎಂದರೆ ರಸ್ತೆ ಅಪಘಾತ, ಹಾವು ಕಚ್ಚುವುದು, ಗ್ಯಾಸ್ ಸಿಲಿಂಡರ್ ಸ್ಫೋಟ, ಕಾಲು ಜಾರಿ ಬೀಳುವುದು, ಎತ್ತರದ ಕಟ್ಟಡ ಹಾಗೂ ಎತ್ತರದ ಮರದ ಮೇಲಿನಿಂದ ಬೀಳುವುದು, ವಿದ್ಯುತ್ ಅವಘಡ ಹಾಗೂ ಇನ್ನಿತರ ದುರ್ಘಟನೆಗಳು ವಿಮೆ ವ್ಯಾಪ್ತಿಯಲ್ಲಿ ಬರುತ್ತವೆ.
ಈ ವಿಮೆಯಿಂದ ಸಿಗುವ ಲಾಭಗಳೇನು?
ವಿಮಾದಾರರು ಅಪಘಾತದಲ್ಲಿ ಮರಣ ಹೊಂದಿದರೆ ವಿಮಾದಾರ ಆಯ್ಕೆ ಮಾಡಿಕೊಂಡ೦ತೆ 10-15 ಲಕ್ಷ ರೂ. ಪರಿಹಾರ ಮೊತ್ತವನ್ನು ನಾಮಿನಿದಾರರಿಗೆ ನೀಡಲಾಗುತ್ತದೆ.
ಶಾಶ್ವತ ಸಂಪೂರ್ಣ ಮತ್ತು ಆಂಶಿಕ ಅಂಗವಿಕಲತೆ ಪ್ರಯೋಜನಗಳು ಸಿಗಲಿವೆ. ಶಾಶ್ವತ ಸಂಪೂರ್ಣ ಅಂಗವಿಕಲತೆ ಸಂದರ್ಭದಲ್ಲಿ ವಿಮಾ ಮೊತ್ತದ ಶೇ.100ರಷ್ಟು ಪರಿಹಾರ ನೀಡಲಾಗುತ್ತದೆ.
ಆಸ್ಪತ್ರೆಯಲ್ಲಿ ದಾಖಲಾಗುವ ವೆಚ್ಚಕ್ಕೆ 60,000 ದಿಂದ 1,00,000 ರೂ. ವರೆಗೆ ನೀಡಲಾಗುತ್ತದೆ. ಅಪಘಾತದಿಂದ ಉಂಟಾಗುವ ಚಿಕಿತ್ಸಾ ವೆಚ್ಚದ ಹೊರೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ
ತುರ್ತು ಸ್ಥಳಾಂತರ ವೆಚ್ಚ 5,000 ರೂ. ವರೆಗೆ ಪಾವತಿಸಲಾಗುತ್ತದೆ.ಕುಟುಂಬದ ಮಕ್ಕಳ ಶಿಕ್ಷಣಕ್ಕೆ 1 ಲಕ್ಷ ರೂ. ವರೆಗೆ (ಗರಿಷ್ಠ 2 ಮಕ್ಕಳಿಗೆ) ನೀಡಲಾಗುತ್ತದೆ. ಆಸ್ಪತ್ರೆ ದಿನ ಭತ್ಯೆ ಪ್ರತಿ ದಿನ 1000 ರೂ. ಹತ್ತು ದಿನಗಳ ವರೆಗೆ ನೀಡಲಾಗುತ್ತದೆ.
ಕುಟುಂಬದ ಸಂಚಾರ ಭತ್ಯೆಯಾಗಿ ಅಪಘಾತದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬ೦ಧಿಸಿದ೦ತೆ ಕುಟುಂದ ಸದಸ್ಯರು ಭೇಟಿ ನೀಡಲು 25,000 ರೂ.ವರೆಗೆ ನೀಡಲಾಗುತ್ತದೆ.
ಅಪಘಾತದಿಂದ ಕೋಮಾಗೆ ಒಳಗಾದರೆ 1 ಲಕ್ಷ ರೂ. ಒಮ್ಮೆ ಪಾವತಿಸಲಾಗುತ್ತದೆ. ಮೃತದೇಹ ಹಸ್ತಾಂತರ ಹಾಗೂ ಅಂತ್ಯ ಕ್ರಿಯಾ ವೆಚ್ಚವಾಗಿ 5,000 ರೂ.ವರೆಗೆ ನೀಡಲಾಗುತ್ತದೆ. ಭಯೋತ್ಪಾದನೆ ಸಂಬ೦ಧಿತ ಅಪಘಾತಕ್ಕೂ ಈ ವಿಮೆ ಅನ್ವಯಿಸುತ್ತದೆ.
ಇದನ್ನೂ ಓದಿ: 2025 rain information-ಈ ವರ್ಷ ಏಪ್ರಿಲ್‌ನಲ್ಲಿ ಮಳೆ | 2025ರ ಮಳೆ ಮಾಹಿತಿ ಇಲ್ಲಿದೆ…
ಸಮೂಹ ವಿಮೆ ಪಡೆಯುವುದು ಹೇಗೆ?
ಆಧಾರ್ ಆಧಾರಿತ ಇ-ಕೆವೈಸಿ ಮೂಲಕ 5 ನಿಮಿಷದಲ್ಲಿ ಅಂಚೆ ಕಚೇರಿ, ಇಲ್ಲವೇ ಪೋಸ್ಟ್ ಮ್ಯಾನ್ / ಪೋಸ್ಟ್ ವುಮೆನ್‌ಗಳ ಮೂಲಕ ಮನೆ ಬಾಗಿಲಲ್ಲೇ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕೆ ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಮಾತ್ರ ಸಾಕು.
18ರಿಂದ 65 ವರ್ಷ ವಯಸ್ಸಿನ ಯಾರು ಬೇಕಾದರೂ ಈ ವಿಮೆ ಮಾಡಿಕೊಳ್ಳಬಹುದು. ಆದರೆ, ಈ ವಿಮೆ ಪಡೆಯಲು ಕಡ್ಡಾಯವಾಗಿ ಇಂಡಿಯಾ ಪೋಸ್ಟ್ ಸೆಮೆಂಟ್ಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿ ಕೂಡಲೇ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಡಿ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್