ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ಒಟ್ಟು 68 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸುವವರು ಜನವರಿ 10ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಹುದ್ದೆಗಳ ವಿವರ
- ಅಸಿಸ್ಟಂಟ್ ಮ್ಯಾನೇಜರ್: 54
- ಮ್ಯಾನೇಜರ್: 04
- ಸೀನಿಯರ್ ಮ್ಯಾನೇಜರ್: 03
- ಸೈಬರ್ ಸೆಕ್ಯೂರಿಟಿ ಎಕ್ಸ್’ಫರ್ಟ್: 07
- ಒಟ್ಟು ಹುದ್ದೆಗಳು: 68
ಶೈಕ್ಷಣಿಕ ಅರ್ಹತೆಗಳೇನು?
ಕಂಪ್ಯೂಟರ್ ಸೈನ್ಸ್/ ಐಟಿ/ ಕಂಪ್ಯೂಟರ್ ಅಪ್ಲಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿAಗ್ ವಿಷಯಗಳಲ್ಲಿ ಬಿಇ / ಬಿಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಐಟಿ ವಿಭಾಗದಲ್ಲಿ ಖಾಲಿ ಇರುವ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಪ್ರಯತ್ನಿಸಬಹುದು.
ಇಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಒಂದು ವರ್ಷ, ಮ್ಯಾನೇಜರ್ ಹುದ್ದೆಗಳಿಗೆ 3 ವರ್ಷ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ 6 ವರ್ಷಗಳ ಸೇವಾನುಭವ ನಿಗದಿಪಡಿಸಲಾಗಿದೆ.
ಸೈಬರ್ ಸೆಕ್ಯೂರಿಟಿ ಎಕ್ಸ್’ಫರ್ಟ್ ಹುದ್ದೆಗಳೂ ಖಾಲಿ ಇದ್ದು, ಎಲೆಕ್ಟ್ರಾನಿಕ್ಸ್, ಇನ್‌ಫಾರ್ಮೆಶನ್ ಟೆಕ್ನಾಲಜಿ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ / ಬಿಟೆಕ್ ವಿದ್ಯಾರ್ಹತೆಯುಳ್ಳವರು ಪ್ರಯತ್ನಿಸಬಹುದು. ಈ ಹುದ್ದೆಗಳಿಗೂ 6 ವರ್ಷಗಳ ಸೇವಾನುಭವ ನಿರೀಕ್ಷಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅರ್ಹರನ್ನು ಗುರುತಿಸಿ ಸಂದರ್ಶನ ಮತ್ತು ಗುಂಪು ಚರ್ಚೆ ನಡೆಸಿ ಆಯ್ಕೆ ಸೇರಿದಂತೆ ಬ್ಯಾಂಕ್ ನಿಯೋಜಿಸಿದ ಮಾಡಲಾಗುತ್ತದೆ. ನೇಮಕಗೊಂಡವರು ಯಾವುದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ದಿಲ್ಲಿಯ ಐಪಿಪಿಬಿ ಕಾರ್ಪೊರೇಟ್ ಕಚೇರಿ ಸಿದ್ದರಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ವಯೋಮಿತಿ ವಿವರ
ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಟ 20ರಿಂದ ಗರಿಷ್ಟ 30 ವರ್ಷ, ಮ್ಯಾನೇಜರ್ ಹುದ್ದೆಗಳಿಗೆ 23ರಿಂದ 35 ವರ್ಷ, ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ 26ರಿಂದ 35 ವರ್ಷ ಹಾಗೂ ಸೈಬರ್ ಸೆಕ್ಯೂರಿಟಿ ಎಕ್ಸ್’ಫರ್ಟ್ ಹುದ್ದೆಗಳಿಗೆ 50 ವರ್ಷದೊಳಗಿನವರು ಅರ್ಜಿ ಸಲ್ಲಿಸಬುದಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಇದನ್ನೂ ಓದಿ: PM-Surya Ghar Muft Bijli Jojana : ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…
ಅರ್ಜಿ ಶುಲ್ಕವೆಷ್ಟು?
ಎಸ್‌ಸಿ, ಎಸ್‌ಟಿ ವಿಸೇಷಚೇತನ ಅಭ್ಯರ್ಥಿಗಳಿಗೆ 150 ರೂ. ಹಾಗೂ ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 10-01-2025