Govt SchemesNews

Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ?

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (Karnataka Arogya Sanjeevini Scheme -KASS) ಜಾರಿಗೆ ಕಡೆಗೂ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಇದು ಘೋಷಣೆಯಾಗಲಿದ್ದು; ಇದರಿಂದ 22 ಲಕ್ಷ ಸರಕಾರಿ ನೌಕರರ ಕುಟುಂಬಗಳಿಗೆ ದುಬಾರಿ ವೆಚ್ಚದ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಈ ಯೋಜನೆಗೆ ವಾರ್ಷಿಕವಾಗಿ ಸುಮಾರು 1,000 ಕೋಟಿ ರೂ. ವೆಚ್ಚವಾಗಲಿದೆ.

ಏನಿದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯೋಜನೆ?

WhatsApp Group Join Now
Telegram Group Join Now

ಇದು ರಾಜ್ಯ ಸರಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಯೋಜನೆ. ಕಳೆದ 2022-23ನೇ ಸಾಲಿನ ಬಜೆಟ್‌ನಲ್ಲಿ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಗೆ ಅನುದಾನ ಕಾಯ್ದಿರಿಸಿ ಸಚಿವ ಸಂಪುಟ ಸಭೆಯ ಅಂಗೀಕಾರ ಪಡೆಯಲಾಗಿತ್ತು. ಮಾತ್ರವಲ್ಲ ಯೋಜನೆಯನ್ನು ಸಾಂಕೇತಿಕವಾಗಿ ಲೋಕಾರ್ಪಣೆ ಕೂಡ ಮಾಡಲಾಗಿತ್ತು. ಆದರೆ ಕೆಲವು ಕೆಲವು ತಾಂತ್ರಿಕ ದೋಷಗಳಿಂದಾಗಿ ಕಳೆದ 3 ವರ್ಷಗಳಿಂದ ಈ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ.

ಇದೀಗ ಕೊನೆಗೂ ರಾಜ್ಯ ಸರಕಾರವು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸಿದ್ಧತೆ ನಡೆಸಿದೆ. ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಜಾರಿ ಪ್ರಕ್ರಿಯೆಗೆ ಮುಂದಾಗಿದೆ. ಶೀಘ್ರದಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ಈ ಮಹತ್ವದ ಯೋಜನೆಯ ಪ್ರಯೋಜನಗಳು ಸದ್ಭಳಕೆಯಾಗಲಿವೆ.

ಇದನ್ನೂ ಓದಿ: Watermelon Fruit-ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣದ ಇಂಜೆಕ್ಷನ್ | ಆರೋಗ್ಯ ಇಲಾಖೆಯ ಎಚ್ಚರಿಕೆ

Karnataka Arogya Sanjeevini Scheme -KASS

ಯಾವೆಲ್ಲ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಸಿಗಲಿದೆ?

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ದುಬಾರಿ ವೆಚ್ಚದ ಮಾರಣಾಂತಿಕ ಕಾಯಿಲೆಗಳು ಹಾಗೂ ಅಂಗಾAಗ ಕಸಿ ಶಸ್ತ್ರಚಿಕಿತ್ಸೆ ಸಹಿತ ಬಹುತೇಕ ಎಲ್ಲ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ಸಿಗಲಿವೆ. ರಾಜ್ಯ ಸರಕಾರಿ ನೌಕರರ ಕುಟುಂಬ ಸದಸ್ಯರಿಗೆ ಬರೋಬ್ಬರಿ 1,500ಕ್ಕೂ ಹೆಚ್ಚಿನ ಕಾಯಿಲೆಗಳಿಗೆ ಉಚಿತ ಚಿಕಿತ್ಸಾ ಸೇವೆ ಲಭ್ಯವಾಗಲಿದೆ.

ರಾಜ್ಯ ಸರ್ಕಾರ ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆಯ ದರಗಳ ಬಗ್ಗೆ ಪ್ಯಾಕೇಜ್ ಮಾಡಿಕೊಳ್ಳಲಿದ್ದು; ಈ ಪ್ಯಾಕೇಜ್‌ಗಳಿಗೆ ಸಂಬAಧಿಸಿ ಆಸ್ಪತ್ರೆಗಳೊಂದಿಗೆ ಸರಕಾರವು ಎಂಒಯು ಮಾಡಿಕೊಳ್ಳಲಿದೆ. ಒಡಂಬಡಿಕೆ ಪ್ರಕಾರ ಚಿಕಿತ್ಸೆಗಳಿಗೆ ಅನುಗುಣವಾಗಿ ಆಸ್ಪತ್ರೆಗಳಿಗೆ ಸರಕಾರದಿಂದ ಅನುದಾನ ಸಂದಾಯವಾಗಲಿದೆ.

ಇದನ್ನೂ ಓದಿ: 2025 rain information-ಈ ವರ್ಷ ಏಪ್ರಿಲ್‌ನಲ್ಲಿ ಮಳೆ | 2025ರ ಮಳೆ ಮಾಹಿತಿ ಇಲ್ಲಿದೆ…

ಈ ಯೋಜನೆ ಸೌಲಭ್ಯ ಯಾರಿಗೆಲ್ಲ ಸಿಗಲಿದೆ?

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯೋಜನೆಗೆ ವೃತ್ತಿಪರ ಅವಧಿಯಲ್ಲಿರುವ ಸರಕಾರಿ ನೌಕರರು ಮಾತ್ರ ಅರ್ಹರು. ಸರಕಾರಿ ನೌಕರರ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ, ಹಾಗೂ ಮಕ್ಕಳು ಯೋಜನೆ ಅನ್ವವಾಗಲಿದೆ.

ಸಾರ್ವಜನಿಕ ವಲಯದ ಇತರ ನೌಕರರಾದ ಸ್ಥಳೀಯ, ಅನುದಾನಿತ, ಶಾಸನಬದ್ಧ, ಸ್ವಾಯತ್ತ ಸಂಸ್ಥೆಗಳು, ಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.

ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್

WhatsApp Group Join Now
Telegram Group Join Now

Raitapi Jagattu

ಮಾಲತೇಶ ಮಾಳಮ್ಮನವರ್, ಸಂಪಾದಕರು ಮಾಲತೇಶ ಮಾಳಮ್ಮನವರ್ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!