Karnataka Budget-ರಾಜ್ಯ ಬಜೆಟ್ 2025: ಸರಕಾರಿ ನೌಕರರ ಈ ನಿರೀಕ್ಷೆಗಳಿಗೆ ಫಲ ಸಿಗುತ್ತಾ?
ಹಲವು ಭರವಸೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರು

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ಇದೇ ಮಾರ್ಚ್ 7ರಂದು ತಮ್ಮ 16ನೇ ಬಜೆಟ್ (Siddaramaiah 16th Budget) ಮಂಡಿಸಲಿದ್ದಾರೆ. ವಿತ್ತ ಸಚಿವರಾಗಿ 7 ಬಜೆಟ್ ಹಾಗೂ ಮುಖ್ಯಮಂತ್ರಿಯಾಗಿ 8 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಇದೀಗ ಮಂಡಿಸಲಿರುವ 16ನೇ ಬಜೆಟ್ ಎಂದಿನ೦ತೆ ಜನರ ನಿರೀಕ್ಷೆಗಳನ್ನು ಬೆಟ್ಟದಷ್ಟು ಏರಿಸಿದೆ.
ಪಂಚ ಗ್ಯಾರಂಟಿಗಳ ತೋಳಲಾಟ
ಪ್ರತಿಪಕ್ಷಗಳು ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳಿ೦ದಾಗಿ ರಾಜ್ಯದ ಅರ್ಥಿಕತೆ ದಿವಾಳಿಯಾಗಿದೆ ಎಂದು ದೂರಿವೆ. ಅನುದಾನ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಸಿಬ್ಬಂದಿಗೆ ಸಂಬಳ ನೀಡಲು ಸಮಸ್ಯೆಯಾಗುತ್ತಿದೆ. ಸುಮಾರು 58,000 ಕೋಟಿ ರೂ. ಬಿಟ್ಟಿ ಭಾಗ್ಯಗಳಿಗೆ ವೆಚ್ಚವಾಗುತ್ತಿದೆ. ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ತೆರಿಗೆದಾರನ ಹಣ ಮತ ಬ್ಯಾಂಕ್ ಸೃಷ್ಟಿಸಲು ಮತ್ತು ಉಳಿಸಿಕೊಳ್ಳಲು ವ್ಯಯವಾಗುತ್ತಿದೆ ಎಂದೆಲ್ಲ ಪ್ರತಿಪಕ್ಷಗಳು ದೂರಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಬಜೆಟ್‌ನಲ್ಲಿ ಜನತೆಯ ನೀರೀಕ್ಷೆ ಏನು ಎನ್ನುವುದು ಭಾರೀ ಕುತೂಹಲ ಮೂಡಿಸಿದೆ ಮತ್ತು ಪಂಚ ಗ್ಯಾರಂಟಿಗಳ ಭವಿಷ್ಯದ ಬಗೆಗೆ ಪ್ರಶ್ನಾರ್ಥಕ ಚಿಹ್ನೆಯೂ ಕಾಣುತ್ತಿದೆ. ಸರಕಾರವು ಪಂಚ ಗ್ಯಾರಂಟಿಗಳ ಮೌಲ್ಯಮಾಪನ ನಡೆಸುತ್ತಿದ್ದು, ಈ ಯೋಜನೆಗಳ ಮುಂದುವರಿಕೆ ಬಗೆಗೆ ಅನುಮಾನ ಕೇಳಿ ಬರುತ್ತಿದೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ

ಖಾಲಿ ಹುದ್ದೆಗಳ ನೇಮಕಾತಿಗೆ ಜೀವ ಸಿಗಬಹುದಾ?
ಕಳೆದ ಬಾರಿ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಅಂದಾಜು 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ರಾಜ್ಯದ ವಿವಿಧ ವಲಯಗಳ ಜನತೆ ಬಜೆಟ್ ಮೇಲೆ ಹಲವು ನಿರೀಕ್ಷೆಗಳ ಭಾರ ಹೊತ್ತು ನಿಂತಿದ್ದಾರೆ. ಪ್ರಮುಖವಾಗಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ವಿಶೇಷವಾಗಿವೆ.
ರಾಜ್ಯದಲ್ಲಿ ಸಂಖ್ಯೆ 7.26 ಲಕ್ಷ ನೌಕರರಿಗೆ ಸರಕಾರ ಅನುಮೋದನೆ (Sanctioned) ನೀಡಿದ್ದು; ಅದರಲ್ಲಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಳೆದ ವರ್ಷ ಕೇವಲ 20,465 ಉದ್ಯೋಗಿಗಳ ನೇಮಕವಾಗಿದ್ದು, ಸರಕಾರಿ ನೌಕರರ ಸಂಘವು ಸರಕಾರಿ ಕಚೇರಿಗಳಲ್ಲಿ ಸುಗಮ ಮತ್ತು ತ್ವರಿತ ಕೆಲಸಕ್ಕಾಗಿ ನೇಮಕಾತಿಯನ್ನು ತ್ವರಿತಗೊಳಿಸಬೇಕು ಎಂದು ಒತ್ತಾಯಿಸುತ್ತಿದೆ. ಈ ಬೇಡಿಕೆಗೆ ಬಜೆಟ್‌ನಲ್ಲಿ ಜೀವ ಸಿಗಬಹುದಾ? ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ: Watermelon Fruit-ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣದ ಇಂಜೆಕ್ಷನ್ | ಆರೋಗ್ಯ ಇಲಾಖೆಯ ಎಚ್ಚರಿಕೆ
ಹಳೇ ಪಿಂಚಣಿ ಯೋಜನೆ ಮರುಸ್ಥಾಪನೆಯಾಗುತ್ತಾ?
ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನೌಕರರ ಸಂಘದ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿಗಳು ಭರವಸೆಯ ಮತ್ತು ಆಶಾದಾಯಕ ಮಾತನಾಡಿದ್ದಾರೆ. ಇದು ಬಜೆಟ್‌ನಲ್ಲಿ ಅಧಿಕೃತವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ.
ಇನ್ನು ಕೇಂದ್ರದ 8ನೇ ವೇತನ ಅಯೋಗದ ಮಾದರಿಯಲ್ಲಿ ರಾಜ್ಯ ಸರಕಾರದ ನೌಕರರ ವೇತನವೂ ಪರಿಷ್ಕರಣೆಯಾಗಬಹುದು ಎನ್ನುವ ಆಶಾಭಾವನೆ ಹೊಂದಿದ್ದು, ಈ ಬಗೆಗೆ ಸ್ವಲ್ಪ ಆಶಾದಾಯಕ ಸುಳಿವನ್ನು ರಾಜ್ಯ ಸರ್ಕಾರಿ ನೌಕರರು ನಿರೀಕ್ಷಿಸಿದ್ದಾರೆ. ನೌಕರರ ಭರವಸೆ, ನಿರೀಕ್ಷೆಗಳು ಎಷ್ಟು ಸಫಲವಾಗುವವೋ ಕಾದು ನೋಡಬೇಕಿದೆ…
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್