ಸುದ್ದಿಗಳುಹವಾಮಾನ

karnataka Heat Wave : ರಾಜ್ಯದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬೆಂಕಿ ಬಿಸಿಲು | ಅಧಿಕ ಉಷ್ಣಾಂಶದ ಜಿಲ್ಲೆಗಳ ಪಟ್ಟಿ ಬಿಡುಗಡೆ

WhatsApp Group Join Now
Telegram Group Join Now

karnataka Heat Wave  : ರಾಜ್ಯದಲ್ಲಿ ಬರಗಾಲದ ಭೀಕರತೆ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದೆ. ಈ ವರ್ಷ ಉತ್ತಮ ಮಳೆಯಾಗುವ ಭರವಸೆ ವ್ಯಕ್ತವಾಗಿದ್ದರೂ ಕೂಡ ಹಿಂದಿನ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಗಳು ಕೈ ಕೊಟ್ಟಿದ್ದರ ಪರಿಣಾಮ ಇದೀಗ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.

ಕುಡಿಯುವ ನೀರಿನ ಬಿಕ್ಕಟ್ಟು ತೀವ್ರವಾಗುತ್ತಿದ್ದು; ಬಿಸಿಲ ಧಗೆ ಭಯಂಕರ ಸ್ವರೂಪ ತಾಳುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಬೆಂಕಿ ಬಿಸಿಲು’ ಸುರಿಯುವ ಸಾಧ್ಯತೆ ಇದ್ದು; ಜಾಗತಿಕ ಮಟ್ಟದಲ್ಲಿ ಎಲ್‌ನಿನೋ ಪ್ರಭಾವದಿಂದಾಗಿ ರಾಜ್ಯದಲ್ಲಿ ‘ಉಷ್ಣ ಅಲೆ’ ಸೃಷ್ಟಿಗೆ ಕಾರಣವಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ: RTC aadhar card link : ರೈತರ ಮನೆ ಬಾಗಿಲಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ | ಕಂದಾಯ ಸಚಿವರ ಸೂಚನೆ

ಬೆಂಕಿ ಬಿಸಿಲ ಆತಂಕ

ಹೌದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಂಕಿ ಬಿಸಿಲು ಸುರಿಯುತ್ತಿದ್ದು; ಉಷ್ಣ ಅಲೆಯ ಭೀತಿ ಎದುರಾಗಿದೆ. ಇದು ಮಾನವನ ಜತೆಗೆ ಪ್ರಾಣಿ, ಪಕ್ಷಿ ಇತರ ಜೀವ ಸಂಕುಲಕ್ಕೂ ಸಂಕಷ್ಟ ತಂದೊಡ್ಡಿದೆ. ಬೇಸಿಗೆಯ ತಾಪದ ಪರಿಣಾಮದಿಂದ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್’ಗಿಂತ ಹೆಚ್ಚು ದಾಖಲಾಗುತ್ತಿದೆ. ಈ ಹಂತದ ಉಷ್ಣಾಂಶ ದಾಖಲಾದರೆ ಅದು ‘ಉಷ್ಣ ಅಲೆ’ಯ ಮುನ್ಸೂಚನೆ ಎಂದೇ ಹೇಳಲಾಗುತ್ತದೆ. ಉಷ್ಣ ಅಲೆ ಉಂಟಾದರೆ ಹಲವು ಆರೋಗ್ಯ ಸಂಬAಧಿ ಪರಿಣಾಮ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Kisan Vikas Patra – KVP : ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ

ಒಂದು ತಿಂಗಳ ಮೊದಲೇ ಬಿರು ಬೇಸಿಗೆ

ಕಳೆದ ವರ್ಷ ಕೂಡ ಮಾರ್ಚ್ ತಿಂಗಳಿನಲ್ಲಿಯೇ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿ ‘ಉಷ್ಣ ಅಲೆ’ ಸೃಷ್ಟಿಯಾಗಿತ್ತು. ಈ ಬಾರೀ ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಬೀದರ್, ಯಾದಗಿರಿ, ಕೊಪ್ಪಳ, ಗದಗ ಮುಂತಾದ ಜಿಲ್ಲೆಗಳಲ್ಲಿ ‘ಉಷ್ಣ ಅಲೆ’ ಭೀತಿ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿ ನೀಡಿದ್ದಾರೆ.

ಪ್ರತೀ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ ತಾಪ ತೀವ್ರವಾಗಿ, ಉಷ್ಣ ಅಲೆಯ ಸ್ವರೂಪ ತಾಳುತ್ತಿತ್ತು. ಹಿಂದಿನ ವರ್ಷ ಮತ್ತು ಈ ವರ್ಷ ಮಾರ್ಚ್ ತಿಂಗಳಲ್ಲಿಯೇ ಉಷ್ಣ ಅಲೆ ಎದುರಾಗುವ ಮುನ್ಸೂಚನೆ ಲಭ್ಯವಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಹಾಗೂ ಅಸುಪಾಸಿನಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: Solar Power for Agricultural Pumpsets : 40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ | ಯಾವೆಲ್ಲ ರೈತರಿಗೆ ಸಿಗಲಿದೆ ಸೋಲಾರ್ ಭಾಗ್ಯ?

ಏನಿದು ಉಷ್ಣ ಅಲೆ?

ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಡಿಕೆಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ವಾರಗಟ್ಟಲೆ ಮುಂದುವರೆದರೆ ಅದನ್ನು ‘ಉಷ್ಣ ಅಲೆ’ ಎಂದು ಕರೆಯಲಾಗುತ್ತದೆ. ದಿನನಿತ್ಯದ ಗರಿಷ್ಠ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ (9 ಡಿಗ್ರಿ ಫ್ಯಾರನ್‌ಹೀಟ್) ತಾಪಮಾನ ಸತತ 5 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಮುಂದುವರೆದರೆ ಅದನ್ನು ಅಧಿಕೃತವಾಗಿ ‘ಉಷ್ಣ ಅಲೆ’ ಎಂದು ಹವಾಮಾನ ಇಲಾಖೆ ಘೋಷಿಸುತ್ತದೆ.

ಸದ್ಯಕ್ಕೆ ರಾಜ್ಯದಲ್ಲಿ ಸತತವಾಗಿ ನಾಲ್ಕು ಕೇಂದ್ರದಲ್ಲಿ ವಾಡಿಕೆಗಿಂತ 4ರಿಂದ 5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ಕಂಡು ಬರುತ್ತಿದೆ. ದಿನನಿತ್ಯ ಉಷ್ಣಾಂಶದ ಅಂಕಿ-ಅAಶಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು; ಮೂರು ಜಿಲ್ಲೆಗಳಲ್ಲಿ ಈ ರೀತಿ ಕಂಡು ಬಂದರೆ ಮಾತ್ರ ಉಷ್ಣ ಅಲೆಯನ್ನು ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಲಿದೆ.

ಇದನ್ನೂ ಓದಿ: Rain Information 2024 : ಮಾರ್ಚ್’ನಿಂದ ಮೇ ವರೆಗೂ ರಣ ಬಿಸಿಲು; ಜೂನ್‌ನಿಂದ ಭರ್ಜರಿ ಮುಂಗಾರು ಮಳೆ | ಸಿಹಿಕಹಿ ಸುದ್ದಿಕೊಟ್ಟ ಹವಾಮಾನ ಇಲಾಖೆ

ಗರಿಷ್ಠ ಉಷ್ಣಾಂಶ ದಾಖಲಾಗುತ್ತಿರುವ ಜಿಲ್ಲೆಗಳು

  • ಕಲಬುರಗಿ: 40.2 – 2.7
  • ಬಾಗಲಕೋಟೆ: 39.3 – 4.2
  • ರಾಯಚೂರು: 39.0 – 1.5
  • ಕೊಪ್ಪಳ: 37.8 – 2.3
  • ವಿಜಯಪುರ: 37.5 – 1.3
  • ಬೀದರ್: 37.0 – 1.2
  • ಗದಗ: 37.0 – 1.7

ಇದನ್ನೂ ಓದಿ: Karnataka Heat Waves : ಕರ್ನಾಟಕದಲ್ಲಿ ‘ಶಾಖದ ಅಲೆ’ ಮುನ್ಸೂಚನೆ : ಹೇಗಿರಲಿವೆ ಮುಂದಿನ ದಿನಗಳು?

WhatsApp Group Join Now
Telegram Group Join Now

Related Posts

error: Content is protected !!