ಹವಾಮಾನ

Karnataka Heat Waves : ಕರ್ನಾಟಕದಲ್ಲಿ ‘ಶಾಖದ ಅಲೆ’ ಮುನ್ಸೂಚನೆ : ಹೇಗಿರಲಿವೆ ಮುಂದಿನ ದಿನಗಳು?

WhatsApp Group Join Now
Telegram Group Join Now

Karnataka Heat Waves : ರಾಜ್ಯಾದ್ಯಂತ ಬೆಂಕಿ ಬಿಸಿಲು ಸುರಿಯತೊಡಗಿದೆ. ಬರದ ಬೆಗೆಯಲ್ಲಿ ಬಸವಳಿದ ರಾಜ್ಯಕ್ಕೆ ಇದೀಗ ಬಿಸಿಲ ಧಗೆ ಕಂಗಾಲು ಮಾಡಿದೆ. ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟ ಹಿನ್ನಲೆಯಲ್ಲಿ ರಾಜ್ಯ ಸರಕಾರವೇ 223 ತಾಲ್ಲೂಕುಗಳನ್ನು ಬರ (Drought) ಪೀಡಿತವೆಂದು ಘೋಷಿಸಿದೆ. ಈ ಎಲ್ಲ ತಾಲ್ಲೂಕುಗಳಲ್ಲಿ ಈಗ ಕೃಷಿ ಬಳಕೆಯ ನೀರಿನ ಕತೆ ಹಾಗಿರಲಿ, ಕುಡಿಯುವ ನೀರಿಗೂ ತತ್ವಾರ ತಲೆದೋರಿದೆ.

ಹವಾಮಾನ ಇಲಾಖೆ ಮುನ್ಸೂಚನೆ (Meteorological department forecast) ಪ್ರಕಾರ, ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಲಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಡಿಕೆಯ ತಾಪಮಾನಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ಕಂಡು ಬರುತ್ತಿದೆ. ಇದು ‘ಶಾಖದ ಅಲೆ’ಯ (Heat wave) ಮುನ್ಸೂಚನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Akrama Sakrama : ಸರಕಾರಿ ಜಾಗದಲ್ಲಿ ಕಟ್ಟಿದ ಅನಧಿಕೃತ ಮನೆಗಳು ಸಕ್ರಮ? ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

ಏನಿದು ಶಾಖದ ಅಲೆ? What is a heat wave?

ಸಾಮಾನ್ಯವಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಡಿಕೆಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ವಾರಗಟ್ಟಲೆ ಮುಂದುವರೆದರೆ ಅದನ್ನು ‘ಶಾಖದ ಅಲೆ’ ಎಂದು ವ್ಯಾಖ್ಯಾನಿಸಲಾಗುತ್ತದೆ. ದಿನನಿತ್ಯದ ಗರಿಷ್ಠ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ (9 Degrees Fahrenheit) ತಾಪಮಾನ ಸತತ 5 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಮುಂದುವರೆದರೆ ಅದನ್ನ ಅಧಿಕೃತವಾಗಿ ‘ಶಾಖದ ಅಲೆ’ ಎಂದು ಘೋಷಿಸಲಾಗುತ್ತದೆ.

ಸದ್ಯಕ್ಕೆ ರಾಜ್ಯದಲ್ಲಿ ವಾಡಿಕೆ ತಾಪಮಾನಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ಕಂಡು ಬರುತ್ತಿದೆ. ಈ ಬಾರಿ ಬೇಸಿಗೆಯ ಮುನ್ನ ಫೆಬ್ರವರಿಯಲ್ಲಿಯೇ ಬಿಸಿಲು ಏರಿಕೆಯಾಗಿದೆ. ಬೇಸಿಗೆಯ ಆರಂಭಿಕ ಹಂತದಲ್ಲಿಯೇ ಹೀಗೆ ರಣ ಬಿಸಿಲು ಸುರಿಯತೊಡಗಿದರೆ, ಮುಂದಿನ ಜೂನ್ ವರೆಗೆ ಜನರ ಸ್ಥಿತಿ ಏನು? ಎಂಬ ಆತಂಕ ಎದುರಾಗಿದೆ.

ಇದನ್ನೂ ಓದಿ: Dairy Farming loan Interest subsidy : ಹಸು, ಎಮ್ಮೆ ಖರೀದಿ ಸಾಲಕ್ಕೆ ಬಡ್ಡಿ ಸಬ್ಸಿಡಿ | ಹೈನುಗಾರಿಕೆ ಉತ್ತೇಜನಕ್ಕೆ ಹೊಸ ಯೋಜನೆ

ಒಣ ಹವೆ-ಬಿಸಿ ಅಲೆ

ರಾಜ್ಯದಲ್ಲಿ ಬರಗಾಲದ ಪರಿಣಾಮ (Effect of drought) ಈಗೀಗ ರೈತರಿಗಷ್ಟೇ ಅಲ್ಲದೇ ಎಲ್ಲ ವರ್ಗದ ಜನರಿಗೂ ತಟ್ಟುತ್ತಿದೆ. ಅಂತರ್ಜಲ ಬತ್ತಿ ನೀರಿನ ಅಭಾವ ತಲೆದೋರಿರುವುದರಿಂದ ನಗರ-ಪಟ್ಟಣದ ಜನರಲ್ಲೂ ಗಲಿಬಿಲಿ ಶುರುವಾಗಿದೆ. ಶಕೆ, ಶಾಖದ ಹೊಡೆತಕ್ಕೆ ಬಸವಳಿಯುವಂತಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚು ಬಿಸಿಲು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದೇ ವಾತವರಣ ಮುಂದುವರಿಯಲಿದೆ.

ಬೆಳಗ್ಗೆ 8 ಗಂಟೆಯಿ೦ದಲೇ ಬಿಸಿಲಿನ ಶಾಖ ಕಂಡು ಬರುತ್ತಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ತಾಪಮಾನ ಕಂಡು ಬಂದರೆ, ಇದಕ್ಕಿಂತಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿ ಗಾಳಿಯ (Heat Wave) ಅನುಭವವಾಗುತ್ತಿದೆ. ಇದು ಜನರ ಆರೋಗ್ಯದ ಮೇಲೂ ಅತ್ಯಂತ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: Village accountant recruitment 2024 :1000 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಪ್ರಕಟಣೆ | ಕಂದಾಯ ಸಚಿವರಿಂದ ಅಧಿಕೃತ ಮಾಹಿತಿ

ಬಿಸಿಲ ಧಗೆ ಎಲ್ಲೆಲ್ಲಿ ಹೇಗಿದೆ?

ನಿನ್ನೆ (ಫೆಬ್ರವರಿ 23) ಬಾಗಲಕೋಟೆ, ರಾಯಚೂರು, ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ (Maximum temperature) ಅಂದರೆ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಪರೀತ ಬಿಸಿಲು ಸುರಿಯುತ್ತಿದೆ.

ಇತ್ತ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಹಳೇ ಮೈಸೂರು ಭಾಗದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಮಂಡ್ಯ, ತಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಡುಬಿಸಿಲು ದಾಖಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಭಾಗದಲ್ಲಿ ಮಾತ್ರ ಒಂಚೂರು ಸಾಧಾರಣ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ (Weather forecast report) ತಿಳಿಸಿದೆ.

ಇದನ್ನೂ ಓದಿ: Dairy farming : ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ | ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

WhatsApp Group Join Now
Telegram Group Join Now

Related Posts

error: Content is protected !!