ಉದ್ಯೋಗಸರಕಾರಿ ಯೋಜನೆ

Karnataka One Franchisee Registration :135 ಕರ್ನಾಟಕ ಒನ್ ಆನ್‌ಲೈನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ | ಸ್ವಂತ ಉದ್ಯಮ ಆರಂಭಿಸಲು ಉತ್ತಮ ಅವಕಾಶ

WhatsApp Group Join Now
Telegram Group Join Now

Karnataka One Franchisee Registration

ಕರ್ನಾಟಕ ಒನ್ ಆನ್‌ಲೈನ್ ಸೇವಾ ಕೇಂದ್ರ ತೆರೆದು ಸ್ವಂತ ಉದ್ಯಮ ಆರಂಭಿಸಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯಾದ್ಯಂತ ಆಯ್ದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಜನ ಸಾಮಾನ್ಯರಿಗೆ ಒಂದೇ ಸೂರಿನಡಿ ಸರ್ಕಾರದ ಎಲ್ಲಾ ರೀತಿಯ ನಾಗರಿಕ ಸೇವೆ ಪೂರೈಸಲು ಕರ್ನಾಟಕ ಒನ್ ಕೇಂದ್ರಗಳನ್ನು ಫ್ರಾಂಚೈಸಿ ಆಧಾರದ ಮೇಲೆ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ‘ಗ್ರಾಮ ಒನ್’ (GramaOne) ಮಾದರಿಯಲ್ಲಿ ಸಣ್ಣ ಪಟ್ಟಣ, ಶಹರಗಳಲ್ಲಿ ‘ಕರ್ನಾಟಕ ಒನ್’ (KarnatakaOne) ಕೇಂದ್ರಗಳಿವೆ. ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಂತ ಊರಿನಲ್ಲಿಯೇ ‘ಸ್ವಯಂ ಉದ್ಯೋಗ’ ಆರಂಭಿಸಲು ಇದು ಉತ್ತಮ ಅವಕಾಶವಾಗಿದೆ. ‘ಕರ್ನಾಟಕ ಒನ್’ ಫ್ರ‍್ಯಾಂಚೈಸ್ ಪಡೆಯುವುದು ಹೇಗೆ? ಅರ್ಹತೆಗಳೇನು? ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಇದನ್ನೂ ಓದಿ: Home Guards jobs : ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ

‘ಕರ್ನಾಟಕ ಒನ್’ ಫ್ರ‍್ಯಾಂಚೈಸ್ ಪಡೆಯಲು ಅರ್ಹತೆಗಳು (Karnataka one franchise eligibilities)

ಅರ್ಜಿ ಸಲ್ಲಿಸುವ ಅರ್ಜಿದಾರನು ಕರ್ನಾಟಕದ ನಿವಾಸಿಯಾಗಿರಬೇಕು.ಅರ್ಜಿದಾರನು ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು ಮತ್ತು ತಾಂತ್ರಿಕ ವಿಷಯದ ಜ್ಞಾನ ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಅರ್ಜಿದಾರನಿಗೆ ಕನ್ನಡ ಭಾಷೆಯನ್ನು ಮಾತನಾಡಲು ಬರೆಯಲು ಮತ್ತು ಓದಲು ಬರಬೇಕು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ಟೈಪಿಂಗ್ ಮಾಡುವ ಜ್ಞಾನ ಹೊಂದಿರಬೇಕು.

ಅರ್ಜಿದಾರನ ಮೇಲೆ ಯಾವುದೇ ಸಾಮಾಜಿಕ ಮತ್ತು ಕ್ರಿಮಿನಲ್ ಅಪರಾಧ ಇರಬಾರದು ಹಾಗೂ ಇದಕ್ಕೆ ಸಾಕ್ಷಿಯಾಗಿ ಪೋಲಿಸ್ ದೃಢೀಕರಣ ಪತ್ರವನ್ನು ಹೊಂದಿರಬೇಕು.

ಇದನ್ನೂ ಓದಿ: RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಅಗತ್ಯವಿರುವ ಜಾಗ, ಐಟಿ ಮತ್ತು ಐಟಿಯೇತರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡಲು ಸಿದ್ದರಿರಬೇಕು. ‘ಕರ್ನಾಟಕ ಒನ್’ ಕೇಂದ್ರ ಸ್ಥಾಪಿಸಲು ಅಗತ್ಯ ಇಂಟೆರ್ ನೆಟ್ ಸೌಲಭ್ಯ, ಕಂಪ್ಯೂಟರ್, ಪ್ರಿಂಟರ್, ಫಿಂಗರ್ ಪ್ರಿಂಟ್ ಸ್ಕ್ಯಾನರ್, ವೆಬ್ ಕ್ಯಾಮರಾ, ವಿದ್ಯುತ್ ಸೇರಿದಂತೆ ಇತರೆ ಸೌಕರ್ಯಗಳೊಂದಿಗೆ ಪ್ರಮುಖ ಸ್ಥಳ ಹೊಂದಿರಬೇಕು.

ವಿಶೇಷ ಸೂಚನೆ : ಯಾವ ಜಿಲ್ಲೆಗಳಲ್ಲಿ ಎಷ್ಟು ಫ್ರ‍್ಯಾಂಚೈಸ್’ಗಳು ಲಭ್ಯವಿವೆ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ಮಾರ್ಗಸೂಚಿಗಳ ಪಿಡಿಎಫ್ ಅನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಿದ್ದು, ಡೌನ್ಲೋಡ್ ಮಾಡಿಕೊಂಡು ಮತ್ತೊಮ್ಮೆ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಪಾನ್ ಕಾರ್ಡ್ (Pan card)
  • ಆಧಾರ್ ಕಾರ್ಡ್ (Aadhar card)
  • ಮೊಬೈಲ್ ನಂಬರ್ (Mobile Number)
  • ಇಮೇಲ್ (E mail)
  • ಬ್ಯಾಂಕ್ ಪಾಸ್ ಬುಕ್
  • ವಿದ್ಯಾರ್ಹತೆಯ ಪ್ರಮಾಣಪತ್ರ
  • ಅರ್ಜಿ ಶುಲ್ಕ 100 ರೂಪಾಯಿ

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-02-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-02-2024

ಇದನ್ನೂ ಓದಿ: PMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

ಅರ್ಜಿ ಸಲ್ಲಿಸುವುದು ಹೇಗೆ?

ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿ ಕೇಳಲಾದ ಅಭ್ಯರ್ಥಿಯ ಹೆಸರು, ನಿಮ್ಮ ಜಿಲ್ಲೆ, ತಾಲ್ಲೂಕು, ನಗರ, ಪಟ್ಟಣ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿಬೇಕು.

ಮಾರ್ಗಸೂಚಿ ಪಿಡಿಎಫ್ : ಡೌನ್‌ಲೋಡ್
ಖಾಲಿ ಫ್ರ‍್ಯಾಂಚೈಸ್’ಗಳ ವಿವರ : ಡೌನ್‌ಲೋಡ್
ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಸಹಾಯವಾಣಿ : 080-49203888, 8904085030

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

State Level Big Job Fair 2024 : ಸರಕಾರಿ ಉದ್ಯೋಗ ಮೇಳ ನೋಂದಣಿಗೆ ಅರ್ಜಿ | ಇಲ್ಲಿ ನೋಂದಣಿಯಾದರೆ ಉದ್ಯೋಗ ಖಚಿತ | ಎಲ್ಲಾ ರೀತಿ ವಿದ್ಯಾರ್ಹತೆಯವರಿಗೂ ಅವಕಾಶ

WhatsApp Group Join Now
Telegram Group Join Now

Related Posts

error: Content is protected !!