ಹವಾಮಾನ

Karnataka Rain Report 2024 : ಈ ವರ್ಷ ಭರ್ಜರಿ ಮುಂಗಾರು ಮಳೆ | ಬೇಸಿಗೆ ಮಳೆ ನೀಡಿದ ಮುನ್ಸೂಚನೆ

WhatsApp Group Join Now
Telegram Group Join Now

Karnataka Rain Report 2024 : ಬರಗಾಲದ ಪ್ರಯುಕ್ತ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬಿಸಿಲಿನ ಧಗೆ ತೀವ್ರವಾಗಿದೆ. ಒಂದು ತಿಂಗಳು ಮುಂಚಿತವಾಗಿಯೇ ಬೇಸಿಗೆಯ ಶಖೆ ಆವರಿಸಿದ್ದು; ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ದಾಖಲಾಗಿದೆ. ಸಮಾಧಾನದ ಸಂಗತಿ ಎಂದರೆ ಇಂತಹ ಧಗೆಯ ನಡುವೆಯೇ ರಾಜ್ಯದಲ್ಲಿ ಮಳೆ ಸಿಂಚನವಾಗತೊಡಗಿದೆ. ಇದು ಈ ವರ್ಷದ ಭರ್ಜರಿ ಮುಂಗಾರು ಮಳೆಯ ಮುನೂಚನೆ (Monsoon forecast) ಎನ್ನಲಾಗುತ್ತಿದೆ.

ಇದನ್ನೂ ಓದಿ: Summer sun danger to dairy farming : ಹೈನುಗಾರಿಕೆಗೆ ಆಪತ್ತು ತಂದ ರಣಬಿಸಿಲು | ಹಾಲಿನ ಫ್ಯಾಟು, ಡಿಗ್ರಿ ಕುಸಿತ, ಹೈನುಗಾರರ ಸ್ಥಿತಿ ಅಧೋಗತಿ

ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಬಿಸಿಲಿನ ಧಗೆಯಿಂದ ಬಸವಳಿದಿದ್ದ ರಾಜ್ಯಕ್ಕೆ ಮಳೆ ಮೋಡಗಳ ಭರವಸೆ ಮೂಡತೊಡಗಿದೆ. ಈ ವಾರದಲ್ಲಿ ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಳಗಾವಿ, ಬೀದರ್, ಧಾರವಾಡ, ರಾಯಚೂರು, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಗೆ ಮುಂದುವರೆಯಲಿದೆ. ಅದೇ ರೀತಿ ಉತ್ತರ ಒಳನಾಡಿನ ಜಿಲ್ಲೆಗಲಾಧ ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಬಾಗೊಲಕೋಟೆ, ಬೆಳಗಾವಿ, ಬೀದರ್, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲಿಯೂ ಸಹ ಬಿಸಿಲಿನ ತಾಪ ಯಥಾಪ್ರಕಾರ ಮುಂದುವರೆಯಲಿದೆ.

ಇದನ್ನೂ ಓದಿ: karnataka Heat Wave : ರಾಜ್ಯದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬೆಂಕಿ ಬಿಸಿಲು | ಅಧಿಕ ಉಷ್ಣಾಂಶದ ಜಿಲ್ಲೆಗಳ ಪಟ್ಟಿ ಬಿಡುಗಡೆ

ಹೇಗಿದೆ ಈ ವರ್ಷದ ಮಳೆ?

ಬೇಸಿಗೆಯ ಈ ಮಳೆ ಮುಂದಿನ ಮುಂಗಾರು ಮಳೆಯ ಮೇಲೆ ಪ್ರಭಾವ ಬೀರಲಿದ್ದು; ಈ ವರ್ಷದ ಮುಂಗಾರು ಮಳೆ ಭರ್ಜರಿಯಾಗುವ ಭರವಸೆ ವ್ಯಕ್ತವಾಗಿದೆ. ಹಾಗಿದ್ದರೆ, 2024ನೇ ಸಾಲಿನ ಯಾವ್ಯಾವ ಮಳೆ ನಕ್ಷತ್ರಗಳ ಸ್ಥಿತಿಗತಿ ಹೇಗಿದೆ? ವರ್ಷದ ಮೊದಲ ಮಳೆ ಅಶ್ವಿನಿಯಿಂದ ಕೊನೆಯ ಮಳೆ ವಿಶಾಖ ಮಳೆ ವರೆಗಿನ ಮಾಹಿತಿಯನ್ನು ಇಲ್ಲಿ ನೋಡೋಣ…

 • ಅಶ್ವಿನಿ ಮಳೆ: ದಿನಾಂಕ-13-4-2024 ಸಾಮಾನ್ಯ ಮಳೆ
 • ಭರಣಿ ಮಳೆ: ದಿನಾಂಕ-27-4-2024 ಸಾಮಾನ್ಯ ಮಳೆ
 • ಕೃತಿಕಾ ಮಳೆ: ದಿನಾಂಕ-11-5-2024 ಉತ್ತಮ ಮಳೆ
 • ರೋಹಿಣಿ ಮಳೆ: ದಿನಾಂಕ-24-5-2024 ಸಾಮಾನ್ಯ ಮಳೆ
 • ಮೃಗಶಿರ ಮಳೆ: ದಿನಾಂಕ 07-06-2024 ಸಾಮಾನ್ಯ ಮಳೆ
 • ಆರಿದ್ರಾ ಮಳೆ: ದಿನಾಂಕ 21-06-2024 ಸಾಮಾನ್ಯ ಮಳೆ
 • ಪುನರ್ವಸು ಮಳೆ: ದಿನಾಂಕ 05-7-2024 ಸಾಮಾನ್ಯ ಮಳೆ
 • ಪುಷ್ಯ ಮಳೆ: ದಿನಾಂಕ-19-7-2024 ಉತ್ತಮ ಮಳೆ
 • ಆಶ್ಲೇಷ ಮಳೆ: ದಿನಾಂಕ-02-08-2024 ಸಾಮಾನ್ಯ ಮಳೆ
 • ಮಘ ಮಳೆ: ದಿನಾಂಕ 16-08-2024 ಉತ್ತಮ ಮಳೆ
 • ಹುಬ್ಬ ಮಳೆ: ದಿನಾಂಕ-30-8-2024 ಸಾಮಾನ್ಯ ಮಳೆ
 • ಉತ್ತರ ಮಳೆ: ದಿನಾಂಕ-13-09-2024 ಸಾಮಾನ್ಯ ಮಳೆ
 • ಹಸ್ತ ಮಳೆ: ದಿನಾಂಕ-26-09-2024 ಉತ್ತಮ ಮಳೆ
 • ಚಿತ್ತ ಮಳೆ: ದಿನಾಂಕ-10-10-2024 ಉತ್ತಮ ಮಳೆ
 • ಸ್ವಾತಿ ಮಳೆ: ದಿನಾಂಕ-23-10-2024 ಸಾಮಾನ್ಯ ಮಳೆ
 • ವಿಶಾಖ ಮಳೆ: ದಿನಾಂಕ-6-11-2024 ಸಾಮಾನ್ಯ ಮಳೆ

ಹೀಗೆ ಮೇಲ್ಕಾಣಿಸಿದ ದಿನಾಂಕಗಳAದು ಆಯಾಯ ಮಳೆ ನಕ್ಷತ್ರಗಳು ಆರಂಭವಾಗಲಿದ್ದು; ಈ ಮಳೆಗಳು ಸುರಿಯುವ ಪ್ರಮಾಣದಲ್ಲಿ ಏರಿಳಿತವಾಗಬಹುದು ಎಂದು ಪಂಚಾAಗದಲ್ಲಿ ನಮೂದಿಸಲಾಗಿದೆ.

ಇದನ್ನೂ ಓದಿ: Solar Power for Agricultural Pumpsets : 40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ | ಯಾವೆಲ್ಲ ರೈತರಿಗೆ ಸಿಗಲಿದೆ ಸೋಲಾರ್ ಭಾಗ್ಯ?

ಹವಾಮಾನ ವರದಿಗಳು ಏನು ಹೇಳುತ್ತವೆ?

ಇನ್ನು ಹವಾಮಾನ ಇಲಾಖೆಯ ವರದಿಗಳು ಕೂಡ ಈ ವರ್ಷ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ ಖಚಿತ ಮಾಹಿತಿಯನ್ನು ನೀಡುತ್ತ ಬಂದಿವೆ. ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಯ ಯೂರೋಪಿಯನ್ ಕೇಂದ್ರವು (European Centre for Medium-Range Weather Forecasts -ECMWF) ಕರ್ನಾಟಕ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ECMWF ಮಾಹಿತಿ ಪ್ರಕಾರ, ಜೂನ್‌ನಿಂದ ಸೆಪ್ಟೆಂಬರ್ ವರೆಗೂ ಸುರಿಯುವ ‘ನೈಋತ್ಯ ಮಾನ್ಸೂನ್’ (Southwest Monsoon) ಮಳೆಯ ಮಾರುತಗಳು ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಸುವ ಸಂಭವವಿದೆ. ಮುಖ್ಯವಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಈ ಮಾಹಿತಿಯನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು (KSMDNC) ‘ಈ ಬಾರಿಯ ಮುಂಗಾರು ಮುನ್ನೋಟ ಚೆನ್ನಾಗಿದೆ. ಕರ್ನಾಟಕದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ’ ಎಂದು ವಾರದ ಹಿಂದೆಯೇ ಮಾಹಿತಿ ಹಂಚಿಕೊ೦ಡಿತ್ತು.

ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rain Information 2024 : ಮಾರ್ಚ್’ನಿಂದ ಮೇ ವರೆಗೂ ರಣ ಬಿಸಿಲು; ಜೂನ್‌ನಿಂದ ಭರ್ಜರಿ ಮುಂಗಾರು ಮಳೆ | ಸಿಹಿಕಹಿ ಸುದ್ದಿಕೊಟ್ಟ ಹವಾಮಾನ ಇಲಾಖೆ

WhatsApp Group Join Now
Telegram Group Join Now

Related Posts

error: Content is protected !!