ಪಶುಪಾಲನೆಸರಕಾರಿ ಯೋಜನೆ

karnataka Sheep Board facilities : ಕುರಿಮೇಕೆ ಸಾಕಾಣಿಕೆದಾರರ ಸಬ್ಸಿಡಿ ಯೋಜನೆಗಳು | ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸೌಲಭ್ಯಗಳು

WhatsApp Group Join Now
Telegram Group Join Now

karnataka Sheep Board facilities

ಆಡು-ಕುರಿ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸೌಲಭ್ಯಗಳೇನು? ಅವುಗಳನ್ನು ಪಡೆಯುವುದು ಹೇಗೆ? ಯಾರೆಲ್ಲ ಅರ್ಹರು? ಇಲ್ಲಿದೆ ಸಂಪೂರ್ಣ ಮಾಹಿತಿ… 

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತವು ಕುರಿ ಮತ್ತು ಮೇಕೆ ಸಾಕಣೆದಾರರ ಹಿತರಕ್ಷಣೆಗಾಗಿ ಸ್ಥಾಪನೆಯಾಗಿದ್ದು; ನಿಗಮದ ವತಿಯಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕುರಿ ಮತ್ತು ಮೇಕೆ ಮಾಂಸದ ಬೇಡಿಕೆಗೆ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನೂ ಉತ್ತೇಜಿಸುವ ಹಿನ್ನಲೆಯಲ್ಲಿ ಸರಕಾರ ಕುರಿಗಾರರನ್ನು ಉತ್ತೇಜಿಸಲು ಹಲವಾರು ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಕುರಿ ನಿಗಮದಲ್ಲಿ ಸಿಗುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಇದನ್ನೂ ಓದಿ: Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

ಕುರಿ-ಮೇಕೆ ಸೊಸೈಟಿ ಸ್ಥಾಪನೆಗೆ 5 ಲಕ್ಷ ಪ್ರೋತ್ಸಾಹಧನ

ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು.

‘ಕುರಿ-ಮೇಕೆ ಸೊಸೈಟಿ’ ಸ್ಥಾಪಿಸಲು ನಿಗಮವು ಪ್ರೋತ್ಸಾಹಿಸುತ್ತ ಬಂದಿದ್ದು; ಈಗಾಗಲೇ ರಚನೆಯಾಗಿ ಅನುಮೋದನೆಗೊಂಡ ಸಂಘಗಳಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದು. ಇದರ ಜೊತೆಗೆ ಕುರಿ ಸೊಸೈಟಿಯಲ್ಲಿ ಸದಸ್ಯರಾಗಿದ್ದಲ್ಲಿ ವಿವಿಧ ಯೋಜನೆಗ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: bara parihara release : ಈ ರೈತರಿಗೆ ಬರ ಪರಿಹಾರ ಹಣ ಜಮಾ | ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…

ಸತ್ತ ಕುರಿ-ಮೇಕೆಗಳಿಗೆ ಪರಿಹಾರದ ಅನುಗ್ರಹ

ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬದವರನ್ನು ಆರ್ಥಿಕ ಸಂಕಷ್ಟದಿAದ ಪಾರು ಮಾಡಲು ಕುರಿಗಾಹಿಗಳಿಗೆ 5 ಲಕ್ಷ ರೂಪಾಯಿ ವಿಮಾ ಸೌಲಭ್ಯ.

ಆರು ತಿಂಗಳು ಮೇಲ್ಪಟ್ಟ ಕುರಿ ಮತ್ತು ಮೇಕೆ ಆಕಸ್ಮಿಕ ಅಥವಾ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಅನುಗ್ರಹ ಯೋಜನೆಯಡಿ ಕುರಿ-ಮೇಕೆಗೆ 5000 ರೂಪಾಯಿ ಪರಿಹಾರ ಧನ ಹಾಗೂ 3-6 ತಿಂಗಳ ವಯಸ್ಸಿನ ಕುರಿ-ಮೇಕೆಗಳಿಗೆ 3500 ರೂಪಾಯಿ ಪರಿಹಾರ ಧನವನ್ನು ನೀಡಲಾಗುವುದು.

ಇದನ್ನೂ ಓದಿ: PM Vishwakarma Scheme free tool kit : ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ

ಉಚಿತ ಔಷಧಿ, ತರಬೇತಿ

ಸಂಘದ ಎಲ್ಲಾ ಸದಸ್ಯರಿಗೆ ಕುರಿ ಸಾಕಾಣಿಕೆ ವೈಜ್ಞಾನಿಕ ತರಬೇತಿ ಮತ್ತು ಕುರಿಗಳಿಗೆ ನಿಗಮದಿಂದ ಉಚಿತವಾಗಿ ಜಂತುನಾಶಕ ಔಷಧಿ ವಿತರಣೆ. ಕುರಿ ತಳಿ ಅಭಿವೃದ್ಧಿ ಯೋಜನೆ ಅನುಸಾರ ಮಿಶ್ರತಳಿ ಟಗರುಗಳನ್ನು ಲಭ್ಯತೆಯ ಮೇರೆಗೆ ಸಹಾಯ ಧನ ಮತ್ತು ಆಧುನಿಕ ಕುರಿ ತೂಕದ ಯಂತ್ರಗಳನ್ನು ಅವಶ್ಯಕತೆ ಮೇರೆಗೆ ನಿಗಮದಿಂದ ವಿತರಣೆ.

ಸಂಘದ ಸದಸ್ಯರ ಕುರಿಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲು ಸ್ವಯಂಚಾಲಿತ ಯಂತ್ರಗಳ ಮೂಲಕ ಆ ಸಂಘದ ವ್ಯಾಪ್ತಿಯಲ್ಲಿ ಬರುವ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಉಚಿತವಾಗಿ ನೀಡಲಾಗುವುದು. ಇದರ ಉಪಯೋಗವನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕು.

ಇದನ್ನೂ ಓದಿ: Dorper Sheep Farming: Local Sheep Breeding Method : ಡಾರ್ಪರ್ ಕುರಿ ತಳಿ ಅಭಿವೃದ್ಧಿ ವಿಧಾನ | ಲೋಕಲ್ ಕುರಿಗೆ ಕ್ರಾಸ್ ಮಾಡಿ ಗಳಿಸಿ ಕೋಟ್ಯಾಂತರ ಆದಾಯ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸಹಾಯಧನ

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ/ ಪರಿಶಿಷ್ಟ ಜಾತಿ (6+1) ಕುರಿ-ಮೇಕೆ ಘಟಕ ವಿತರಣೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 10+1 ಕುರಿ-ಮೇಕೆ ಸಾಕಾಣಿಕೆ ಸಹಾಯಧನ.

ಕುರಿ ಹಿಂಡಿನೊ೦ದಿಗೆ ಊರಿಂದ ಊರಿಗೆ ಅಲೆಯುವ ಸಂಚಾರಿ ಕುರಿಗಾಗರಿಗೆ ರಬ್ಬರ್ ಪ್ಲೂರ್ ಮ್ಯಾಟ್ ಮತ್ತು ರೇನ್ ಕೋಟ್, ಟೆಂಟ್, ಸೋಲಾರ್ ಟಾರ್ಚ್ ಸೇರಿದಂತೆ ಪರಿಕರಗಳ ಕಿಟ್‌ಗಳ ವಿತರಣೆ.

ಇದನ್ನೂ ಓದಿ: Bagar Hukum land : ಈ ರೈತರ ಬಗರ್ ಹುಕುಂ ಜಮೀನು ಸರಕಾರದ ಸ್ವಾಧೀನ | ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಅಮೃತ ಸ್ವಾಭಿಮಾನಿ ಯೋಜನೆಯಡಿ ಆರ್ಥಿಕ ನೆರವು

‘ಅಮೃತ ಸ್ವಾಭಿಮಾನಿ ಯೋಜನೆ’ಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗೆ 1.75 ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 20,000 ಅರ್ಹ ಸದಸ್ಯರಿಗೆ ಅಮೃತ ಸ್ವಾಭಿಮಾನಿ ಯೋಜನೆ ಅನ್ವಯವಾಗಿದ್ದು; ಕುರಿ ಸೊಸೈಟಿಯಲ್ಲಿ ಸದಸ್ಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಸದರಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿಗಾಹಿ ಸದಸ್ಯರಿಗೆ ನೀಡಲಾಗುವ ಘಟಕ ವೆಚ್ಚ 1.75 ಲಕ್ಷ ರೂಪಾಯಿ ಪೈಕಿ ಶೇ.50ರಷ್ಟನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ಶೇ.25ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನವಾಗಿ ಸಿಗಲಿದೆ. ಉಳಿಕೆ ಶೇ.25 ಫಲಾನುಭವಿ ವಂತಿಕೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ.

ಇದನ್ನೂ ಓದಿ: Animal Husbandry Success formulas : ಹೊಸದಾಗಿ ಪಶುಪಾಲನೆ ಮಾಡುವವರಿಗೆ ಕಿವಿಮಾತು | ಪಶುಪಾಲನೆಯಲ್ಲಿ ಹೆಚ್ಚಿನ ಆದಾಯ ಗಳಿಕೆಗೆ ಪಾಲಿಸಬೇಕಾದ ಸೂತ್ರಗಳು…

ಯಾರೆಲ್ಲ ಅರ್ಹರು?

ಈ ಎಲ್ಲ ಸೌಲಭ್ಯ ಪಡೆಯಲು ಫಲಾನುಭವಿಗಳು ಮುಖ್ಯವಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು.

ನಿಗಮವು ಸರಕಾರಿ ಯೋಜನೆಗಳನ್ನು ತಲುಪಿಸಲು ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ಗಳನ್ನು ಸ್ಥಾಪಿಸಿದೆ. ಈ ಸಹಕಾರ ಸಂಘಗಳು ಜನರಿಗೆ ನಿಗಮದ ಸೌಲಭ್ಯಗಳನ್ನು ತಲುಪಿಸುವ ಏಕೈಕ ಮಾರ್ಗಗಳಾಗಿವೆ.

ಈ `ಸೊಸೈಟಿ’ಗಳ ಮೂಲಕ ಎಲ್ಲರಿಗೂ ಕುರಿ/ಮೇಕೆ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹೋಬಳಿ ಮಟ್ಟದಲ್ಲಿ ಪ್ರತಿ 15,000 ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದAತೆ ರಾಜ್ಯದಲ್ಲಿ ಒಟ್ಟು 625 ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ. ಈ ಸಹಕಾರ ಸಂಘಗಳೇ ನಿಗಮದ ಕೇಂದ್ರ ಬಿಂದುವಾಗಿದ್ದು; ನಿಗಮದ ಪ್ರತಿ ಕಾರ್ಯಕ್ರಮಗಳನ್ನು ಇವುಗಳ ಮೂಲಕ ತಲುಪಿಸಲಾಗುತ್ತಿದೆ.

Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!