ಸರಕಾರಿ ಯೋಜನೆಸುದ್ದಿಗಳುಹಣಕಾಸು

Kisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ

WhatsApp Group Join Now
Telegram Group Join Now

ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು ಸಿಗಲಿದೆ…

2019-20ನೇ ಸಾಲಿನಿಂದ ಭಾರತ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card- KCC) ಸೌಲಭ್ಯವನ್ನು ಪಶುಪಾಲಕರಿಗೂ ವಿಸ್ತರಿಸಿದೆ. ಈ ಕಾರ್ಯಕ್ರಮವು ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳ (working capital) ನೀಡುವ ಸದುದ್ದೇಶ ಹೊಂದಿದೆ.
ಈ ಯೋಜನೆಯಡಿ ಅವರ ಅಗತ್ಯತೆಗೆ ತಕ್ಕಂತೆ ದುಡಿಯುವ ಬಂಡವಾಳಕ್ಕೆ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆಯಬಹುದಾಗಿದ್ದು, 2 ಲಕ್ಷ ರೂಪಾಯಿ ವರೆಗಿನ ಸಾಲದ ಮೊತ್ತಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಅಲ್ಲದೇ ಸದರಿ ಸಾಲವನ್ನು ನಿಗಧಿತ ಅವಧಿಯಲ್ಲಿ ಮರು ಪಾವತಿ ಮಾಡಿದ್ದಲ್ಲಿ ವಾರ್ಷಿಕ ಶೇ.3ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ.
ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಈ ಸೌಲಭ್ಯಕ್ಕೆ ಯಾರೆಲ್ಲ ಅರ್ಹರು?

ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೊಲ ಸಾಕಾಣಿಕೆ ಸೇರಿದಂತೆ ವಿವಿಧ ರೀತಿಯ ಪಶುಪಾಲಕರು, ಸ್ವಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಮತ್ತು ಮಹಿಳಾ ಸಂಘಗಳು ಈ ಸೌಲಭ್ಯ ಪಡೆಯಬಹುದಾಗಿದೆ.

ವಿವಿಧ ಚಟುವಟಿಕೆಗಳಿಗೆ ನಿಗಧಿಪಡಿಸಿದ ದುಡಿಯುವ ಬಂಡವಾಳದ ವಿವರ

ಇದನ್ನೂ ಓದಿ: Drought relief Release : 25 ಲಕ್ಷ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಸಬೇಕಾದ ದಾಖಲಾತಿಗಳು

ಬ್ಯಾಂಕ್ ಕೆ.ಸಿ.ಸಿ ಖಾತೆಯ ವಿವರ, ಬ್ಯಾಂಕಿನ ಹೆಸರು, ಗುರುತಿನ ಪುರಾವೆ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ / ಪಾನ್ ಕಾರ್ಡ್/ಆಧಾರ್ ಕಾರ್ಡ್ ಇತ್ಯಾದಿ. ವಾಸದ ದೃಢೀಕರಣ ಪತ್ರ, ಅರ್ಜಿದಾರರ ಭಾವಚಿತ್ರ, ದುಡಿಯುವ ಬಂಡವಾಳಕ್ಕೆ ಅಗತ್ಯವಿರುವ ಸಾಲ ಪಡೆಯಲು ಉದ್ದೇಶಿಸಿರುವ ಪಶುಪಾಲನಾ ಚಟುವಟಿಕೆಗಳ ವಿವರವನ್ನು ಅರ್ಜಿಯೊಂದಿಗೆ ಲಗತಿಸಬೇಕು.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಪಡೆಯಲು ಆಸಕ್ತಿಯುಳ್ಳ ಪಶುಪಾಲಕರು ತಮ್ಮ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರನ್ನು ಸಂಪರ್ಕಿಸಿ, ನಿಗದಿತ ನಮೂನೆಯ ಅರ್ಜಿ ಪಡೆದು ಪೂರ್ಣ ವಿವರಗಳೊಂದಿಗೆ ಕೆಳಕಾಣಿಸಿದ ದಾಖಲಾತಿಗಳನ್ನು ಒದಗಿಸಬೇಕಾಗಿದೆ.
ಇದನ್ನೂ ಓದಿ: NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಈ ಕೆಳಕಂಡ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳನ್ನು (ಆಡಳಿತ) ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರಾದ (ಆಡಳಿತ) ಡಾ. ಜಿ ಎಂ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆಲಮಂಗಲ 9845637387
ದೇವನಹಳ್ಳಿ 9480910509
ದೊಡ್ಡಬಳ್ಳಾಪುರ 9845305839
ಹೊಸಕೋಟೆ 9448988649
WhatsApp Group Join Now
Telegram Group Join Now

Related Posts

error: Content is protected !!