ಸರಕಾರಿ ಯೋಜನೆಸಾಲ ಯೋಜನೆ

ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಣೆಗೆ ಕಡಿಮೆ ಬಡ್ಡಿ ₹3 ಲಕ್ಷ ಸಾಲ | ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಅಭಿಯಾನ Kisan Credit Card Loan

WhatsApp Group Join Now
Telegram Group Join Now

Kisan Credit Card Loan : ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card-KCC) ಯೋಜನೆಯಡಿ ಅರ್ಹ ರೈತರಿಗೆ ಪಶುಸಂಗೋಪನೆ ಚಟವಟಿಕೆಗಳಿಗೆ ಅಂದರೆ ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆಗೆ ಆರ್ಥಿಕ ನೆರವು ಒದಗಿಸಲು ಸಾಲ ಅಭಿಯಾನ ಆರಂಭಿಸಿದೆ. ಆಸಕ್ತ ರೈತರು ಸದರಿ ಯೋಜನೆಯ ಲಾಭ ಪಡೆದು ಪಶುಪಾಲನೆ ಕೈಗೊಳ್ಳುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಳ್ಳಬಹುದಾಗಿದೆ.

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ?

ಕೇಂದ್ರ ಸರಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card Yojana-KCC) ಯೋಜನೆಯು ದೇಶದ ಎಲ್ಲ ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿದೆ. ಈ ಯೋಜನೆಯಡಿ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕೋಳಿ, ಮೊಲ ಸಾಕಾಣಿಕೆಗೆ ರೈತರಿಗೆ ಸಾಲ ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು 3 ಲಕ್ಷ ರೂಪಾಯಿಗಳ ವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ 1.60 ರೂಪಾಯಿ ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಪಡೆಯುವ ಸಾಲಕ್ಕೆ ಶೇ.2ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ.3ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ. ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿ೦ದ ಪಡೆಯುವ ಸಾಲದ ಬಡ್ಡಿದರಕ್ಕೆ ಒಟ್ಟಾರೆ ಶೇ.5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿದೆ.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಕಾಲುದಾರಿ, ಬಂಡಿದಾರಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… | ಜಮೀನು ದಾರಿ ಸರಕಾರದ ಆದೇಶವೇನು? Agriculture Land Way Revenue Maps Online

Kisan Credit Card Loan

ಸಾಲ ನೀಡುವ ಬ್ಯಾಂಕುಗಳು ಯಾವುವು?

ಪಶು ಸಂಗೋಪನೆ ರೈತರು, ಜಾನುವಾರು ಮಾಲೀಕರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಎಸ್‌ಬಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಹಲವು ಉನ್ನತ ಬ್ಯಾಂಕ್‌ಗಳು ಕಿಸಾನ್ ಕ್ರೆಡಿಟ್ ಕಾರ್ಡ್’ಗಳನ್ನು ನೀಡುತ್ತವೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು, ರೈತರು ಮೊದಲು ಸ್ಥಳೀಯ ಬ್ಯಾಂಕ್‌ಗೆ ಭೇಟಿ ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬೇಕು. ನೀವು ಸಂಪರ್ಕಿಸಿದ ಬ್ಯಾಂಕ್ ಸದರಿ ಯೋಜನೆಯಡಿ ಸಾಲ ಸೌಲಭ್ಯ ಒದಗಿಸುತ್ತಿದ್ದರೆ, ಅರ್ಜಿ ನಮೂನೆಯನ್ನು ಪಡೆದು ಕೆಲವು Kyc ದಾಖಲೆಗಳೊಂದಿಗೆ ಸಲ್ಲಿಸಬೇಕು.

ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸಲು ಭೂ ದಾಖಲೆಗಳು, ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ, ಪಾಸ್​​ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರದಂತಹ ಕೆಲವು ದಾಖಲೆಗಳು ಬೇಕಾಗುತ್ತದೆ. ನೀವು ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎಂಬುವುದನ್ನು ಬ್ಯಾಂಕ್ ಅಧಿಕಾರಿಗಳು ತಿಳಿಸುತ್ತಾರೆ. ಯೋಜನೆ ಅಥವಾ ಕೆಲಸದ ಆರ್ಥಿಕ ಪ್ರಮಾಣದ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಯಾವುದಕ್ಕೆ ಎಷ್ಟು ಸಾಲ ಸಿಗಲಿದೆ?

ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ, ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಘಟಕಗಳ ವಿವರ ಈ ಕೆಳಗಿನಂತಿದೆ…

1 ಹೈನುಗಾರಿಕೆ

ಮಿಶ್ರತಳಿ ದನಗಳ ನಿರ್ವಹಣೆಗೆ (1+1) ಪ್ರತಿ ಹಸುವಿಗೆ ಗರಿಷ್ಠ 18,000/- ರೂಪಾಯಿಯಂತೆ ಒಟ್ಟು ಎರಡು ಹಸುಗಳಿಗೆ 36,000/- ರೂಪಾಯಿ ಸಾಲ ಸೌಲಭ್ಯ ಸಿಗಲಿದೆ.

ಸುಧಾರಿತ ಎಮ್ಮೆಗಳ ನಿರ್ವಹಣೆಗೆ (1+1) ಪ್ರತಿ ಎಮ್ಮೆ ಗರಿಷ್ಠ 21,000/- ರೂಪಾಯಿಯಂತೆ ಒಟ್ಟು ಎರಡು ಎಮ್ಮೆಗಳಿಗೆ 42,000/- ರೂಪಾಯಿ ಸಾಲ ಸೌಲಭ್ಯ ಸಿಗಲಿದೆ.

ಇದನ್ನೂ ಓದಿ: Rajiv Gandhi Housing Scheme 2024 : ರಾಜೀವ್ ಗಾಂಧಿ ವಸತಿ ನಿಗಮದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

2 ಕುರಿ ಸಾಕಾಣಿಕೆ

8 ತಿಂಗಳ ಸಾಕಾಣಿಕೆ ಅವಧಿಗೆ 10+1 ಕುರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 29,950/- ರೂಪಾಯಿಯಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,700/- ರೂಪಾಯಿಯಂತೆ ಸಾಲ ಸೌಲಭ್ಯ ಸಿಗಲಿದೆ.

8 ತಿಂಗಳ ಸಾಕಾಣಿಕೆ ಅವಧಿಗೆ 20+1 ಕುರಿಮರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 57,200/- ರೂಪಾಯಿಯಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 28,200/- ರೂಪಾಯಿಯಂತೆ ಸಾಲ ಸೌಲಭ್ಯ ಸಿಗಲಿದೆ.

ಇನ್ನು 10 ಕುರಿಮರಿಗಳ ಕೊಬ್ಬಿಸುವಿಕೆಗೆ 13,120 ರೂಪಾಯಿಯಂತೆ ಹಾಗೂ 20 ಕುರಿಮರಿಗಳ ಕೊಬ್ಬಿಸುವಿಕೆಗೆ 26,200 ರೂಪಾಯಿಯಂತೆ ಸಾಲ ಸೌಲಭ್ಯ ಸಿಗಲಿದೆ.

3 ಮೇಕೆ ಸಾಕಾಣಿಕೆ

8 ತಿಂಗಳ ಸಾಕಾಣಿಕೆ ಅವಧಿಗೆ 10+1 ಮೇಕೆಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ 29,950/- ರೂಪಾಯಿಯಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 14,700/- ರೂಪಾಯಿಯಂತೆ ಸಾಲ ಸೌಲಭ್ಯ ಸಿಗಲಿದೆ.

8 ತಿಂಗಳ ಸಾಕಾಣಿಕೆ ಅವಧಿಗೆ 20+1 ಮೇಕೆಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ 57,200 ರೂಪಾಯಿಯಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 28,200/- ರೂಪಾಯಿಯಂತೆ ಸಾಲ ಸೌಲಭ್ಯ ಸಿಗಲಿದೆ.

ಇದನ್ನೂ ಓದಿ: PM – Surya Ghar Muft Bijli Jojana : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

4 ಹಂದಿ ಸಾಕಣೆ

8 ತಿಂಗಳ ಸಾಕಾಣಿಕೆ ಅವಧಿಗೆ 10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ 60,000/- ರೂಪಾಯಿಯಂತೆ ಸಾಲ ಸೌಲಭ್ಯ ಸಿಗಲಿದೆ.

5 ಕೋಳಿ ಸಾಕಾಣಿಕೆ

ಮಾಂಸದ ಕೋಳಿ ಸಾಕಾಣಿಕೆಗೆ ತಲಾ ಒಂದು ಕೋಳಿಗೆ 80 ರೂಪಾಯಿಯಂತೆ 1,000 ಕೋಳಿಗಳಿಗೆ ಗರಿಷ್ಠ 80,000/- ರೂಪಾಯಿ ವರೆಗೆ ಸಾಲ ಸೌಲಭ್ಯ ಸಿಗಲಿದೆ.

ಮೊಟ್ಟೆ ಕೋಳಿ ಸಾಕಾಣಿಕೆಗೆ ತಲಾ ಒಂದು ಕೋಳಿಗೆ 180 ರೂಪಾಯಿಯಂತೆ 1,000 ಕೋಳಿಗಳಿಗೆ ಗರಿಷ್ಠ 1,80,000/- ರೂಪಾಯಿ ವರೆಗೆ ಸಾಲ ಸೌಲಭ್ಯ ಸಿಗಲಿದೆ.

6 ಮೊಲ ಸಾಕಾಣಿಕೆ

50+10 ಮೊಲ ಸಾಕಾಣಿಕೆಗೆ 50,000/- ರೂಪಾಯಿ ವರೆಗೆ ಗರಿಷ್ಠ ಸಾಲ ಸೌಲಭ್ಯ ಸಿಗಲಿದೆ.

ರೈತರು, ರೈತ ಮಹಿಳೆಯರು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಬಲ್ಲ ರೈತರ ಮಕ್ಕಳು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಮೇಲ್ಕಾಣಿಸಿದ ವಿವಿಧ ಜಾನುವಾರು ಘಟಕಗಳಿಗೆ ಸಾಲ ಸೌಲಭ್ಯ ಪಡೆದು ಪಶುಪಾಲನೆ ಕೈಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277 100 200 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: Bara Parihara 2024 : ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗದೇ ಇರುವುದಕ್ಕೆ ಕಾರಣಗಳು ಇಲ್ಲಿವೆ…

WhatsApp Group Join Now
Telegram Group Join Now

Related Posts

error: Content is protected !!