ಪಶುಪಾಲನೆ

Dairy farming : ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ | ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

WhatsApp Group Join Now
Telegram Group Join Now

Dairy farming

ರಾಜ್ಯದ ಹೈನುಗಾರಿಕೆ ರೈತರು ನಂದಿನಿ ಬ್ರ್ಯಾಂಡ್ ನ ಕೆಎಂಫ್ ತೊರೆದು ಖಾಸಗಿ ಹಾಲಿನ ಡೈರಿಯತ್ತ ಚಿತ್ತ ಹರಿಸುತ್ತಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಹೈನುಗಾರಿಕೆಯಿಂದ ಹೈರಾಣಾಗುತ್ತಿರುವ ರೈತರು ಒಂದೆಡೆ ಮನೆ ಬಳಕೆಗೆ ಮಾತ್ರ ಸಾಕಾಗುವಷ್ಟು ಹೈನು ರಾಸುಗಳನ್ನು ಸಾಕುತ್ತಿದ್ದರೆ, ಮತ್ತೊಂದು ಕಡೆಗೆ ದೇಶದ ಎರಡನೇ ಅತಿದೊಡ್ಡ ಸಹಕಾರ ಸಂಸ್ಥೆ ಅನ್ನಿಸಿಕೊಂಡಿರುವ ‘ನಂದಿನಿ’ ಬ್ರ್ಯಾಂಡ್ ನ ಕೆಎಂಎಫ್ ತೊರೆದು ಖಾಸಗಿ ಹಾಲಿನ ಡೈರಿಯತ್ತ ವಾಲುತ್ತಿದ್ದಾರೆ. ಕೆಎಂಎಫ್‌ನ ಮಿತಿಮೀರಿದ ಹಾಲಿನ ಗುಣಮಟ್ಟದ ಟಾರ್ಗೆಟ್ ಮತ್ತು ಕನಿಷ್ಟ ಬೆಲೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಹಾಲಿನ ಪ್ರೋತ್ಸಾಹಧನ ನೀಡುವಲ್ಲಿ ರಾಜ್ಯ ಸರಕಾರ ತೋರುವ ವಿಳಂಬ ನೀತಿಯೂ ಕೂಡ ಹೈನು ರೈತರನ್ನು ಖಾಸಗಿ ಡೈರಿಗಳತ್ತ ಚಿತ್ತ ಹರಿಸುವಂತೆ ಮಾಡುತ್ತಿದೆ!

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಅತೀ ಕನಿಷ್ಟ ಬೆಲೆ

ಹಾಗೇ ನೋಡಿದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಬಹಳ ಕಡಿಮೆ ಇದೆ. ಬೇರೆ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ 46ರಿಂದ 55 ರೂಪಾಯಿ ಇದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಖಾಸಗಿ ಡೈರಿಗಳು ಪ್ರತಿ ಲೀಟರ್ ಹಾಲಿಗೆ 40ರಿಂದ 45 ರೂಪಾಯಿ ಕೊಟ್ಟು ಖರೀದಿಸುತ್ತಿವೆ.

ಇದರಿಂದ ನಂದಿನಿ ಡೈರಿಗೆ ಹಾಲು ಹಾಕುವ ರೈತರ ಸಂಖ್ಯೆಯಲ್ಲೂ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವೂ ಸೇರಿ ಪ್ರತಿ ಲೀಟರ್ ಹಾಲಿಗೆ ಕೇವಲ 37 ರೂಪಾಯಿ ಕೊಡಲಾಗುತ್ತಿದೆ. ಅದರಲ್ಲೂ ಪ್ರೋತ್ಸಾಹ ಧನವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ.

ಇದನ್ನೂ ಓದಿ: Ayushman card application in mobile : ಮೊಬೈಲ್‌ನಲ್ಲೇ ಪಡೆಯಿರಿ ₹5 ಲಕ್ಷ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಆರೋಗ್ಯ ಕಾರ್ಡ್

ಹಾಲಿನ ಗುಣಮಟ್ಟದ ಟಾರ್ಗೇಟ್

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರೈತರಿಂದ ಪಡೆಯುವ ಹಾಲು ಕನಿಷ್ಠ ಶೇ.4ರಷ್ಟು ಕೊಬ್ಬಿನ ಅಂಶ ಹಾಗೂ 8.5ರಷ್ಟು ಕೊಬ್ಬು, ಅಲ್ಲದೇ ಘನ ಪದಾರ್ಥಗಳನ್ನು ಹೊಂದಿರಬೇಕು. ನಾಟಿ ತಳಿಯ ಹಸುಗಳು ಹಾಗೂ ಎಮ್ಮೆಯ ಹಾಲು ಅಧಿಕ ಕೊಬ್ಬಿನ ಅಂಶ, ಕೊಬ್ಬು ಅಲ್ಲದ ಘನ ಪದಾರ್ಥಗಳನ್ನು ಹೊಂದಿರುತ್ತವೆ. ಆದರೆ ಇವುಗಳ ಹಾಲಿನ ಇಳುವರಿ ಕಡಿಮೆ. ಅವುಗಳಿಂದ ಹೈನುಗಾರಿಕೆಯಲ್ಲಿ ಲಾಭವೂ ಕಡಿಮೆ.

ಅಧಿಕ ಹಾಲು ಕೊಡುವ ಎಚ್‌ಎಫ್ ಮಿಶ್ರ ತಳಿಯ ರಾಸುಗಳಲ್ಲಿ ಹಾಲಿನ ಇಳುವರಿ ಜಾಸ್ತಿ ಇರುತ್ತದೆಯಾದರೂ ಅವುಗಳ ಹಾಲಿನ ಗುಣಮಟ್ಟ ಕಡಿಮೆ. ಕಡಿಮೆ ಹಾಲಿನ ಗುಣಮಟ್ಟಕ್ಕೆ ಬೆಲೆ ಇಲ್ಲ. ಇದರಿಂದಾಗಿ ಇಂದು ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಹಸುವಿನ ಹಾಲಿಗೆ ಶೇ.4 ಜಿಡ್ಡು (ಫ್ಯಾಟ್) ಮತ್ತು ಶೇ 8.5 ಜಿಡ್ಡೇತರ (ಎಸ್‌ಎನ್‌ಎಫ್) ಅಂಶ ಇದ್ದರೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರೋತ್ಸಾಹ ಧನ ಸಿಗುವುದಿಲ್ಲ. ಇದರಿಂದ ರೈತರು ಹೈನೋದ್ಯಮದ ಕುರಿತು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಬಾರದ ಪ್ರೋತ್ಸಾಹ ಧನ

ಈ ನಡುವೆ ರಾಜ್ಯ ಸರಕಾರ ನೀಡುವ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ಕೂಡ ಸಕಾಲಕ್ಕೆ ರೈತರ ಕೈ ತಲುಪುತ್ತಿಲ್ಲ. ಹಿಂದಿನ ಬಿಜೆಪಿ ಸರಕಾರ ಬರೋಬ್ಬರಿ ಏಳು ತಿಂಗಳ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಇದೀಗ ಪ್ರತೀ ಹೈನುಗಾರರಿಗೂ ಕನಿಷ್ಠ 5,000 ರೂಪಾಯಿಯಿಂದ 30,000 ರೂಪಾಯಿ ವರೆಗೂ ಪ್ರೋತ್ಸಾಹಧನ ಬಾಕಿ ಬರಬೇಕಿದೆ. ಒಟ್ಟು 669.59 ಕೋಟಿ ರೂಪಾಯಿ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಹಾಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ನಂತರ ಅತೀ ಹೆಚ್ಚು ಹೈನುಗಾರಿಕೆಯನ್ನೇ ನಂಬಿರುವ ಹಾಲು ಉತ್ಪಾದಕರು ಬ್ಯಾಂಕ್‌ಗಳು, ಕೈ ಸಾಲ, ಲೇವಾದೇವಿ ಸಾಲ ಮಾಡಿ ಹಸುಗಳನ್ನು ಖರೀದಿಸಿ ಸಾಕುವ ಮೂಲಕ ಡೇರಿಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಷ್ಟು ಆರ್ಥಿಕ ಚೇತರಿಕೆ ಕಂಡು ನೆಮ್ಮದಿಯಿಂದ ಕುಟುಂಬದ ನಿರ್ವಹಣೆ ನಡೆಯುತ್ತಿದೆ.

ಹೀಗಿದ್ದರೂ, ಸರ್ಕಾರ ಪ್ರೋತ್ಸಾಹಧನವನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದರಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡಿಗರ ಹೆಮ್ಮೆ ಅನ್ನಿಸಿಕೊಂಡಿರುವ ‘ನಂದಿನಿ’ಯನ್ನು ಸ್ವತಃ ಕನ್ನಡ ನೆಲದ ರೈತರೇ ತಿರಸ್ಕರಿಸುವ ದುಃಸ್ಥಿತಿ ಬರಬಹುದು ಎಂದು ಕೆಲವು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Mgnrega Personal Work Subsidy : ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಹಾಯಧನ | ₹5 ಲಕ್ಷದ ವರೆಗೆ ನೆರವು

WhatsApp Group Join Now
Telegram Group Join Now

Related Posts

error: Content is protected !!