ಉದ್ಯೋಗಸುದ್ದಿಗಳು

ಸಾರಿಗೆ ಇಲಾಖೆ ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಪಾಸಾಗಿದ್ರೆ ಅರ್ಜಿ ಹಾಕಿ KPSC Motor Vehicle Inspector Recruitment 2024

WhatsApp Group Join Now
Telegram Group Join Now

KPSC Motor Vehicle Inspector Recruitment 2024 : ಕರ್ನಾಟಕ ಲೋಕಸೇವಾ ಆಯೋಗವು (KPSC) ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವಿಭಾಗದ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳ ನೇಮಕಾತಿಯನ್ನು ಮುಂದೂಡಿ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹಲವು ಮೋಟರು ವಾಹನ ನಿರೀಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಕಳೆದ ಮಾರ್ಚ್ ತಿಂಗಳಿನಲ್ಲಿ ಅರ್ಜಿ ಆಹ್ವಾನಿಸಿತ್ತು. ಹಳೆಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 22-04-2024 ಹಾಗೂ ಕೊನೆಯ ದಿನಾಂಕ 21-05-2024 ಎಂದು ನಿಗದಿಪಡಿಸಲಾಗಿತ್ತು.

ರೈತರ ಬರ ಪರಿಹಾರದ ಹಣ ಸಾಲಕ್ಕೆ ಕಡಿತ ಮಾಡುವಂತಿಲ್ಲ | ಬ್ಯಾಂಕುಗಳಿಗೆ ಸರಕಾರದ ಕಟ್ಟೆಚ್ಚರ Drought relief money cannot be deducted for loans

ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವಾಗ ಹಲವು ತಾಂತ್ರಿಕ ಸಮಸ್ಯೆಗಳು ಉಂಟಾದ್ದರಿ೦ದ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದೂಡಿ ಆನ್‌ಲೈನ್ ಅರ್ಜಿ ಸಲ್ಲಿಸುವ ಕಾಲಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

 • ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ : 02-05-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 01-06-2024
 • ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ : 01-06-2024

ನೇಮಕಾತಿ ಸಂಕ್ಷಿಪ್ತ ವಿವರ

 • ನೇಮಕಾತಿ ಇಲಾಖೆ : ಕರ್ನಾಟಕ ಲೋಕಸೇವಾ ಆಯೋಗ (KPSC)
 • ಹುದ್ದೆಗಳ ಹೆಸರು : ಮೋಟಾರು ವಾಹನ ನಿರೀಕ್ಷಕರು
 • ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ : 76 ಹುದ್ದೆಗಳು
 • ಅರ್ಜಿ ಸಲ್ಲಿಕೆ : ಆನ್‌ಲೈನ್ ಮೂಲಕ
 • ಉದ್ಯೋಗ ಸ್ಥಳ : ಕರ್ನಾಟಕ

Drought Relief Farmers Account : ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ನಿಮಗೆ ಹಣ ಬಂತಾ? ಚೆಕ್ ಮಾಡಿ

ಶೈಕ್ಷಣಿಕ ವಿದ್ದಾರ್ಹತೆ ಏನು?

ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ SSLC ಪಾಸಾಗಿರಬೇಕು ಹಾಗೂ ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿ೦ಗ್ ವಿಭಾಗದಲ್ಲಿ ಡಿಪ್ಲೋಮಾ ಪದವಿ ಹೊಂದಿರಬೇಕು.

ವೇತನ ಶ್ರೇಣಿ : ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವು 33,450 ರೂ. ಯಿಂದ 62,600ರೂ. ವರೆಗೆ ಇರಲಿದೆ.

ವಯೋಮಿತಿ ಎಷ್ಟಿರಬೇಕು?

ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿಯು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 ವರ್ಷ
 • 2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ : 38 ವರ್ಷ
 • ಪ.ಜಾ / ಪ.ಪಂ / ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ : 40 ವರ್ಷ

Agricultural Loans : ಬರಗಾಲದಲ್ಲಿ ರೈತರ ಕೈ ಹಿಡಿಯುತ್ತಾ ಶೂನ್ಯಬಡ್ಡಿ ಕೃಷಿ ಸಾಲ? ನಿರೀಕ್ಷೆ ಹೆಚ್ಚಿಸಿದ ಸೊಸೈಟಿ ಲೋನ್

ಅರ್ಜಿ ಶುಲ್ಕವೆಷ್ಟು?

ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತಿದೆ:

 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರೂ. 600
 • ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ : ರೂ. 300
 • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 50
 • ಪ.ಜಾ / ಪ.ಪಂ / ಪ್ರವರ್ಗ 1 ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು

 • ಅರ್ಜಿ ಸಲ್ಲಿಸುವ ಲಿಂಕ್ : kpsconline.karnataka.gov.in
 • ದಿನಾಂಕ ವಿಸ್ತರಣೆ ಅಧಿಸೂಚನೆ : Download
 • ಅಧಿಕೃತ ಅಧಿಸೂಚನೆ : Download

BMTC Conductor Recruitment 2024 : ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಹೀಗೆ ಅರ್ಜಿ ಸಲ್ಲಿಸಿ | ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಲಿಂಕ್ ಬಿಡುಗಡೆ

WhatsApp Group Join Now
Telegram Group Join Now

Related Posts

error: Content is protected !!