ಕೃಷಿಸರಕಾರಿ ಯೋಜನೆ

krushi bhagya scheme 2023 : ಮಳೆಯಾಶ್ರಿತ ರೈತರಿಗೆ ನೀರಾವರಿ ಭಾಗ್ಯ | ಅರ್ಹ ರೈತರ ತಾಲ್ಲೂಕುವಾರು ಪಟ್ಟಿ ಇಲ್ಲಿದೆ… | ಕೂಡಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

krushi bhagya scheme : 2023-24ರ ಸಾಲಿನ ಬಜೆಟ್’ನಲ್ಲಿ (ಕಂಡಿಕೆ-39) ಘೋಷಣೆಯಾದ ‘ಕೃಷಿಭಾಗ್ಯ ಯೋಜನೆ’ಯನ್ನು (krushi bhagya scheme) ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರಕಾರ ಅಧಿಕೃತ ಅನುಮೋದನೆ ನೀಡಿದೆ. ಬದು ನಿರ್ಮಾಣ, ಕೃಷಿ ಹೊಂಡ, ಪಂಪ್ ಸೆಟ್, ಹನಿ/ತುಂತುರು ನೀರಾವರಿ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಳೆಯನ್ನೇ ನೆಚ್ಚಿ ಬೇಸಾಯ ಮಾಡುವ ಒಣ ಪ್ರದೇಶದ ರೈತರಿಗೆ ನೀರು ಸಂಗ್ರಹಣೆ, ಸಂಗ್ರಹಿಸಿದ ನೀರನ್ನು ಸೂಕ್ಷ್ಮ ನೀರಾವರಿ ಮೂಲಕ ಬೆಳೆಗಳಿಗೆ ಹಾಯಿಸಿ ಸುಸ್ಥಿರ ಆದಾಯ ಪಡೆಯಲು ಈ ಯೋಜನೆ ಸಹಕಾರಿಯಾಗಿದೆ. ಬರೋಬ್ಬರಿ 200 ಕೋಟಿ ರೂಪಾಯಿಗಳ ಅನುದಾನದಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳ ಮಳೆಯಾಶ್ರಿತ ಕೃಷಿಕರಿಗೆ ಈ ಯೋಜನೆ ವರದಾನವಾಗಲಿದೆ.

ಇದನ್ನೂ ಓದಿ: PMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳು

ಈ ಯೋಜನೆಯು 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು ಎಲ್ಲಾ ಘಟಕಗಳನ್ನು ಫಲಾನುಭವಿ ರೈತರು ತಪ್ಪದೇ ಅಳವಡಿಸಿಕೊಳ್ಳಲು ಕೋರಲಾಗಿದೆ. ಎಲ್ಲಾ ಘಟಕಗಳನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಿದರೆ ಯೋಜನೆಯ ಉದ್ದೇಶ ನೇರವೇರುತ್ತದೆ. ಹೀಗಾಗಿ ರೈತರಿಗೆ ಈ ಕೆಳಗಿನ ಎಲ್ಲಾ ಘಟಕಗಳನ್ನು ಅಳವಡಿಕೆ ಮಾಡಿಕೊಳ್ಳಲು ಮನವರಿಕೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ.

ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದ೦ತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing), ಹೊಂಡದಿ೦ದ ನೀರು ಎತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್‌ಸೆಟ್, ನೀರನ್ನು ಬೆಳೆಗೆ ಹಾಯಿಸಲು ಹನಿ / ತುಂತುರು ನೀರಾವರಿ ಘಟಕಗಳ ಪರಿಕರಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Mgnrega Personal Work Subsidy : ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಹಾಯಧನ | ₹5 ಲಕ್ಷದ ವರೆಗೆ ನೆರವು

ಯಾವುದಕ್ಕೆ ಎಷ್ಟು ಸಹಾಯಧನ ಸಿಗಲಿದೆ?

 

ರೈತರಿಗೆ ಹಣ ಸಂದಾಯ ಹೇಗೆ?

ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿಹೊಂಡ : ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿಹೊಂಡ ಪೂರ್ಣಗೊಂಡ ನಂತರ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಳ್ಳುವ ಬಗ್ಗೆ ರೈತರಿಂದ ದೃಢೀಕರಣ ಪತ್ರ ಪಡೆದುಕೊಂಡು, ಕ್ಷೇತ್ರ ಬದು ಹಾಗೂ ಕೃಷಿಹೊಂಡ ಘಟಕಗಳಿಗೆ ಸಂಬ೦ಧಿಸಿದ ಒಟ್ಟು ಸಹಾಯಧನದ ಶೇ.75ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ಪಾಲಿಥೀನ್ ಹೊದಿಕೆ : ಪಾಲಿಥೀನ್ ಹೊದಿಕೆಗೆ ರೈತರ ವಂತಿಕೆ ಪಾವತಿಸಿ, ಕೃಷಿಹೊಂಡದಲ್ಲಿ ಪಾಲಿಥೀನ್ ಹೊದಿಕೆಯ ಅಳವಡಿಕೆಯ ನಂತರ ಸರಬರಾಜು ಸಂಸ್ಥೆಗೆ ಸಹಾಯಧನವನ್ನು ಪಾವತಿಸಲಾಗುತ್ತದೆ.

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ತಂತಿ ಬೇಲಿ : ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿದ ನಂತರ ಮಾರ್ಗಸೂಚಿಯನ್ವಯ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.

ಪಂಪ್‌ಸೆಟ್ ಮತ್ತು ನೀರಾವರಿ ಘಟಕ : ಡೀಸೆಲ್/ ಪೆಟ್ರೋಲ್ ಪಂಪ್‌ಸೆಟ್ ಮತ್ತು ಲಘು ನೀರಾವರಿ ಘಟಕಗಳಿಗೆ ಸಂಬ೦ಧಿಸಿದ ಸಹಾಯಧನವನ್ನು ಸರಬರಾಜು ಸಂಸ್ಥೆಗೆ ಪಾವತಿಸಲಾಗುತ್ತದೆ.

ಸೋಲಾರ್ ಪಂಪ್‌ಸೆಟ್ : ಡೀಸೆಲ್/ ಪೆಟ್ರೋಲ್ ಪಂಪ್‌ಸೆಟ್ ಬದಲಾಗಿ, ಸೋಲಾರ್ ಪಂಪ್‌ಸೆಟ್ ಅನ್ನು ಇತರೆ ಇಲಾಖೆಗಳ ಚಾಲ್ತಿ ಯೋಜನೆಗಳಿಂದ ಪಡೆದು ಅಳವಡಿಸಿಕೊಂಡಿದ್ದಲ್ಲಿ ಪ್ರೋತ್ಸಾಹಧನವಾಗಿ 30,000 ರೂಪಾಯಿಗಳನ್ನು ಪ್ರತಿ ಘಟಕಕ್ಕೆ ಕೃಷಿ ಭಾಗ್ಯ ಯೋಜನೆಯಡಿ ವೆಚ್ಚ ಭರಿಸಲಾಗುತ್ತದೆ.

ಉಳಿಕೆ ಸಹಾಯಧನ : ಕೃಷಿ ಭಾಗ್ಯ ಯೋಜನೆ (krushi bhagya scheme) ಪ್ಯಾಕೇಜ್ ಅಡಿ ಬರುವ ಆರು ಘಟಕಗಳ ಅನುಷ್ಠಾನ ಮತ್ತು K-KISAN Mobile Appನಲ್ಲಿ ದಾಖಲೀಕರಿಸಿದ ನಂತರ ಉಳಿಕೆ ಶೇ.25ರಷ್ಟು ಸಹಾಯಧನದ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ಇದನ್ನೂ ಓದಿ: Co-operative Societies Agricultural Loan : 19 ಲಕ್ಷ ರೈತರಿಗೆ ₹15,841.48 ಕೋಟಿ ಬಡ್ಡಿ ಇಲ್ಲದ ಸಾಲ ವಿತರಣೆ | ಕಾಂಗ್ರೆಸ್ ಅವಧಿಯಲ್ಲಿ ವಿತರಣೆಯಾದ ಸಾಲದ ವಿವರ ಇಲ್ಲಿದೆ…

ಯಾವೆಲ್ಲ ಜಿಲ್ಲೆಯ ರೈತರಿಗೆ ಈ ಅವಕಾಶ?

ಮಳೆಯಾಶ್ರಿತ ಕೃಷಿನೀತಿ 2014ರ ಅನ್ವಯ ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಹಾಗೂ ಗಣಿಗಾರಿಕೆಯಿಂದ ಬಾಧಿತ ಪ್ರದೇಶದಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನದ ಗುರಿಯನ್ನು ಹೊಂದಿರುತ್ತದೆ. ಈ ಕೆಳಗಿನ 24 ಜಿಲ್ಲೆಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ, ಗದಗ, ಹಾಸನ, ಕಲಬುರಗಿ, ಕೋಲಾರ, ಕೊಪ್ಪಳ ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ, ವಿಜಯನಗರ, ಯಾದಗಿರಿ ಜಿಲ್ಲೆಗಳ 106 ಆಯ್ದ ತಾಲ್ಲೂಕುಗಳ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

2023-24ನೇ ಸಾಲಿನಲ್ಲಿ ಕೃಷಿಭಾಗ್ಯ ಯೋಜನೆ ಅನ್ವಯವಾಗುವ 106 ತಾಲ್ಲೂಕುಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಅರ್ಹತಾ ಮಾನದಂಡಗಳೇನು?

ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್’ನಲ್ಲಿ ಕನಿಷ್ಠ 1 ಎಕರೆ ಇರಬೇಕು. ಅಥವಾ ರೈತರ 1 ಎಕರೆ ಸಾಗುವಳಿ ಕ್ಷೇತ್ರವು ಒಂದಕ್ಕಿ೦ತ ಹೆಚ್ಚು ಸರ್ವೆ ನಂಬರ್’ನಲ್ಲಿ ಒಂದೇ ಪ್ರದೇಶದಲ್ಲಿ ಇರುಬೇಕು. ಇದು ಕನಿಷ್ಠ ಐದು ಎಕರೆ ಪ್ರದೇಶದಿಂದ ನೀರು ಶೇಖರಣೆಯಾಗುವಂತಿರಬೇಕು. ಈಗಾಗಲೇ ಈ ಯೋಜನೆ, ಇತರೆ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ.

ಫಲಾನುಭವಿಯು ಒಂದೇ ಇಲಾಖೆಯಿಂದ ಹಾಗೂ ಒಂದೇ ಯೋಜನೆಯಿಂದ ಸಹಾಯಧನವನ್ನು ಪಡೆಯುವುದನ್ನು ಖಾತ್ರಿಪಡಿಸಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳಿಂದ ದೃಢೀಕರಣ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.

ಕೃಷಿಭಾಗ್ಯ ಯೋಜನೆ ಕುರಿತ ಸರಕಾದ ನಡಾವಳಿ ಹಾಗೂ ಯೋಜನೆಯ ಸಮಗ್ರ ಮಾರ್ಗಸೂಚಿ ಓದಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: Weather Report 2023 : ಸರಾಸರಿ ಮಳೆಯಾದರೂ ಬರಗಾಲ ಹೇಗೆ ಬಂತು? ಹವಾಮಾನ ಇಲಾಖೆ ರಿಪೋರ್ಟ್ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!