ಸರಕಾರಿ ಯೋಜನೆ

Labour card Registration 2024 : ಲೇಬರ್ ಕಾರ್ಡ್ ನೋಂದಣಿ ಆರಂಭ | ಈ ಕಾರ್ಡ್ ಇದ್ರೆ ಕುಟುಂಬದ ಎಲ್ಲರಿಗೂ ಉಚಿತ ಸೌಲಭ್ಯ

WhatsApp Group Join Now
Telegram Group Join Now

Labour card Registration 2024 : ಕಾರ್ಮಿಕರಿಗೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಲವಾರು ರೀತಿಯ ಯೋಜನೆಗಳು ಲಭ್ಯವಿವೆ. ಎಲ್ಲಾ ಯೋಜನೆಗಳ ಲಾಭ ಪಡೆಯಲು ಅತೀ ಮುಖ್ಯವಾಗಿ ಬೇಕಾಗಿರುವುದು ಲೇಬರ್ ಕಾರ್ಡ್. ಈ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಈ ವರ್ಷದ ‘ಲೇಬರ್ ಕಾರ್ಡ್’ (Labour card) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯ ಸರ್ಕಾರದ ಅದೀನದ ‘ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ’ (Karnataka Labor Welfare Board)  ನೋಂದಾಯಿತ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಮಕ್ಕಳಿಗೆ ಹಲವಾರು ರೀತಿಯ ಉಚಿತ ಸೌಲಭ್ಯಗಳನ್ನು ನೀಡುತ್ತಿದೆ. ಈ ಎಲ್ಲಾ ಸೌಲಭ್ಯಗಳ ಲಾಭ ಪಡೆಯಲು ಲೇಬರ್ ಕಾರ್ಡ ಅವಶ್ಯವಾಗಿ ಬೇಕು. ಇದೀಗ ಲೇಬರ್ ಕಾರ್ಡ್ ನೋಂದಣಿ ಮಾಡಿಸಲು ಕಾರ್ಮಿಕ ಇಲಾಖೆಯು ಅರ್ಹ ಕಾರ್ಮಿಕರಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Home Guards Recruitment 2024 : ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಹೋಮ್ ಗಾರ್ಡ್ ಹುದ್ದೆಗಳು | ಪುರುಷರು ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನ

ಕಾರ್ಮಿಕ ಕಾರ್ಡ್ ನೋಂದಣಿಗೆ ಯಾರು ಅರ್ಹರು? (Eligibility for labour card application)

 • ಕಾರ್ಮಿಕ ಕಾರ್ಡ್’ಗಾಗಿ ಅರ್ಜಿ ಸಲ್ಲಿಸುವ ಕಾರ್ಮಿಕರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
 • ಅರ್ಜಿ ಸಲ್ಲಿಸುವ ದಿನಾಂಕದ ಒಳಗಾಗಿ 12 ತಿಂಗಳ ಅವಧಿಯಲ್ಲಿ ಕನಿಷ್ಠ 90 ದಿನಗಳ ಕಾಲವಾದರೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿರಬೇಕು.
 • ಅರ್ಜಿದಾರನ ವಯೋಮಿತಿ 18 ರಿಂದ 60 ವರ್ಷದ ಒಳಗಿರಬೇಕು.

ಬೇಕಾಗುವ ದಾಖಲಾತಿಗಳು (Required documents for Labour card)

 • ಕನಿಷ್ಠ 90 ದಿನಗಳು ಕೆಲಸ ಮಾಡಿದ ಉದ್ಯೋಗ ದೃಢೀಕರಣ ಪತ್ರ
 • ಅರ್ಜಿದಾರನ ಮತ್ತು ಅವರ ಅವಲಂಬಿತರ ಆಧಾರ್ ಕಾರ್ಡ್
 • ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ
 • ಅರ್ಜಿದಾರನ ಆಧಾರ್ ಕಾರ್ಡ್’ಗೆ ಲಿಂಕ್ ಇರುವ ಮೊಬೈಲ್ ನಂಬರ್

ಇದನ್ನೂ ಓದಿ: Self Employment Govt Loan-Subsidy Scheme 2024 : ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂಪಾಯಿ ಸಹಾಯಧನ | ಈಗಲೇ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸುವುದು ಹೇಗೆ?

ಲೇಬರ್ ಕಾರ್ಡ್ (Labour card) ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಸೆಂಟರ್, ಕರ್ನಾಟಕ ಒನ್ ಸೆಂಟರ್ ಅಥವಾ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸುವುದಾದರೆ ನಿಮ್ಮ ತಾಲ್ಲೂಕಿನ ಕಾರ್ಮಿಕ ಇಲಾಖೆಗೆ (Labour Department) ಬೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವೆಲ್ಲ ಸೌಲಭ್ಯಗಳು ಸಿಗಲಿವೆ? (Facilities for Labour Card Holders)

ಲೇಬರ್ ಕಾರ್ಡ್ ಹೊಂದಿದ ಅರ್ಹ ಫಲಾನುಭವಿಗಳಿಗೆ ಮತ್ತು ಅವರ ಮಕ್ಕಳಿಗೆ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ (Karnataka Building and Other Construction Workers Welfare Board) ವತಿಯಿಂದ ಹಲವಾರು ರೀತಿಯ ಉಚಿತ ಸೌಲಭ್ಯಗಳು ಲಭ್ಯವಿದ್ದು ಅವುಗಳ ಪಟ್ಟಿ ಕೆಳಗಿನಂತಿದೆ:

ಪಿಂಚಣಿ ಸೌಲಭ್ಯ : ಮೂರು ವರ್ಷ ಸದಸ್ಯತ್ವ ಹೊಂದಿ 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ಅಂದರೆ ಪ್ರತಿ ತಿಂಗಳು ಮಾಶಾಸನ ಸಿಗಲಿದೆ.

ಮಕ್ಕಳಿಗೆ ವಿದ್ಯಾರ್ಥಿ ವೇತನ : ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗಲಿದ್ದು; ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಥಿವೇತನ ಸೌಲಭ್ಯ ಸಿಗುತ್ತದೆ:

 • 8 ರಿಂದ 10ನೇ ತರಗತಿ ವರೆಗೆ 6,000 ರೂಪಾಯಿ
 • ಪಿಯುಸಿ / ಡಿಪ್ಲೊಮಾ /ಐಟಿಐ/ ಟಿಸಿಹೆಚ್ 8,000 ರೂಪಾಯಿ
 • ಪದವಿ ಶಿಕ್ಷಣಕ್ಕಾಗಿ 10,000 ರೂಪಾಯಿ
 • ಸ್ನಾತಕೋತ್ತರ ಶಿಕ್ಷಣಕ್ಕಾಗಿ 12,000
 • ಇಂಜಿನೀಯರಿ೦ಗ್/ ವೈದ್ಯಕೀಯ ಶಿಕ್ಷಣಕ್ಕಾಗಿ 20,000 ರೂಪಾಯಿ

ಇದನ್ನೂ ಓದಿ: Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

ವೈದ್ಯಕೀಯ ನೆರವು : ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೋಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ ಕನಿಷ್ಠ 1,000/-ದಿಂದ ಗರಿಷ್ಠ 25,000/- ರೂಪಾಯಿ ವರೆಗೆ ಮತ್ತು ಆರೋಗ್ಯ ತಪಾಸಣೆಗೆ 500/-ರಿಂದ 1000/- ರೂಪಾಯಿ ವರೆಗೆ ಧನ ಸಹಾಯ ಸಿಗಲಿದೆ.

ಅಪಘಾತ ಧನ ಸಹಾಯ : ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಅಪಘಾತವಾಗಿದ್ದಲ್ಲಿ ಕನಿಷ್ಠ 1,000 ರಿಂದ ಗರಿಷ್ಟ 10,000 ರೂಪಾಯಿ ವರೆಗೆ ಹಣ ನೀಡಲಾಗುವುದು. ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಪಘಾತವಾದ ಮೂರು ತಿಂಗಳ ಒಳಗಾಗಿ ಮಾತ್ರ ಅರ್ಜಿ ಸಲ್ಲಿಸಬೇಕು.

ಹೆರಿಗೆ ಭತ್ಯೆ ಸೌಲಭ್ಯ : ಮಹಿಳಾ ಕಾರ್ಮಿಕರಿಗೆ ಮೊದಲ 2 ಮಕ್ಕಳ ಹೆರಿಗೆಗೆ ಹೆರಿಗೆ ಭತ್ಯೆ ಸೌಲಭ್ಯ ನೀಡಲಾಗುವುದು. ಹೆರಿಗೆ ಸೌಲಭ್ಯವು ತಲಾ ಒಂದು ಮಗುವಿಗೆ 10,000 ರೂಪಾಯಿ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಮಗು ಜನಿಸಿದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.

ಇದೆ ರೀತಿ ಅಂತ್ಯ ಸಂಸ್ಕಾರ ಸಹಾಯಧನ, ದುರ್ಬಲತೆ ಪಿಂಚಣಿ, ಟೂಲ್‌ಕಿಟ್ ಸೌಲಭ್ಯ, ಮದುವೆ ಸಹಾಯಧನ, ತಾಯಿ ಮಗುವಿಗೆ ಸಹಾಯ ಹಸ್ತ ಸೇರಿದಂತೆ ಇನ್ನೂ ಹಲವಾರು ಸೌಲಭ್ಯಗಳು ಲಭ್ಯವಿದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಕಡ್ಡಾಯವಾಗಿರುತ್ತದೆ. ಆದ್ದರಿಂದ ಈ ಲೇಬರ್ ಕಾರ್ಡ್ ಪಡೆಯಲು ಈಗಲೇ ನೋಂದಣಿ ಮಾಡುವ ಮೂಲಕ ಮೇಲ್ಕಾಣಿಸಿದ ಎಲ್ಲಾ ಉಚಿತ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Ayushman card application in mobile : ಮೊಬೈಲ್‌ನಲ್ಲೇ ಪಡೆಯಿರಿ ₹5 ಲಕ್ಷ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಆರೋಗ್ಯ ಕಾರ್ಡ್

ಕಾರ್ಮಿಕ ಕಾರ್ಡ್ ನೋಂದಣಿ ಪ್ರಮುಖ ದಿನಾಂಕಗಳು

ನೋಂದಣಿ ಆರಂಭ ದಿನಾಂಕ : 30-12-2023
ನೋಂದಣಿ ಕೊನೆಯ ದಿನಾಂಕ : 31-03-2024

ಇದನ್ನೂ ಓದಿ: Rajiv Gandhi Housing Scheme 2024 : ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ | ರಾಜೀವ್ ಗಾಂಧಿ ವಸತಿ ನಿಗಮದಿಂದ ಅರ್ಜಿ ಆಹ್ವಾನ

Apply for New Ration card : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

Related Posts

error: Content is protected !!