ಸರಕಾರಿ ಯೋಜನೆ

Labour department scholarship 2024 : ಕಾರ್ಮಿಕ ಇಲಾಖೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಈ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಆರ್ಥಿಕ ನೆರವು

WhatsApp Group Join Now
Telegram Group Join Now

Labour department scholarship 2024 : 8ನೇ ತರಗತಿಯಿಂದ ವೃತ್ತಿಪರ ಪದವಿ ಶಿಕ್ಷಣದ ವರೆಗೂ ಕಲಿಯುತ್ತಿರುವ ಈ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ವಿದ್ಯಾರ್ಥಿವೇತನ (Education Assistance) ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು, ನೊಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ (Education) ಸಹಾಯವಾಗಲು ಹತ್ತು ಸಾವಿರ ರೂಪಾಯಿ ವರೆಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಯಾರಿಗೆ ಎಷ್ಟು ರೂಪಾಯಿ ವಿದ್ಯಾರ್ಥಿವೇತನ ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: Karnataka PDO Recruitment 2024 : ಕರ್ನಾಟಕ ಗ್ರಾಮ ಪಂಚಾಯತಿ PDO ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು (Labor Welfare Board) ವಿದ್ಯಾರ್ಥಿ ವೇತನದ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿವೇತನ ಪಡೆಯಲು ಎಲ್ಲಾ ನೊಂದಾಯಿತ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು 30ನೇ ಜೂನ್ 2024ರ ಒಳಗಾಗಿ ಬ್ಯಾಂಕ್ ಖಾತೆಯೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಿಸಿ NPCI (National Payments Corporation of India) ಮ್ಯಾಪಿಂಗ್ ಮಾಡಿಸಲು ಸೂಚಿಸಿದೆ.

ಕಾರ್ಮಿಕರ ಕಲ್ಯಾಣ ಮಂಡಳಿಯ ವಿದ್ಯಾರ್ಥಿ ವೇತನವನ್ನು ಕಾರ್ಮಿಕರ ಇಬ್ಬರು ಮಕ್ಕಳು ಮಾತ್ರ ಪಡೆಯಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ಲೇಬರ್ ಕಾರ್ಡ್ ಹೊಂದಿದ್ದು, ಅದರಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಹೆಸರು ನಮೂದಿಸಿರಬೇಕು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನೋಂದಾಯಿತ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸ ಪಡೆಯುತ್ತಿರಬೇಕು.

ಇದನ್ನೂ ಓದಿ: RTC aadhar card link : ರೈತರ ಮನೆ ಬಾಗಿಲಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ | ಕಂದಾಯ ಸಚಿವರ ಸೂಚನೆ

ಯಾರಿಗೆ ಎಷ್ಟು ವಿದ್ಯಾರ್ಥಿವೇತನ ಸಿಗಲಿದೆ?

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ವಿದ್ಯಾರ್ಥಿ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

  • 8ನೇ ತರಗತಿಯಿಂದ 10ನೇ ತರಗತಿ ಓದುತ್ತಿರುವವರಿಗೆ ವಿದ್ಯಾರ್ಥಿಗಳಿಗೆ – ₹3000
  • PUC / ITI / Diploma / TCHನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ – ₹4000
  • ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ – ₹5000
  • ಸ್ನಾತಕೋತ್ತರ ಪದವಿ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ – ₹6000
  • ವೃತ್ತಿಪರ ಪದವಿ ಶಿಕ್ಷಣ (Engineering / Medical) ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ – ₹10,000

ಇದನ್ನೂ ಓದಿ: KLA Recruitment 2024 : ಎಸ್ಸೆಎಸ್ಸೆಲ್ಸಿ ಪಾಸಾದವರಿಂದ ಕರ್ನಾಟಕ ವಿಧಾನ ಪರಿಷತ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 42,000 ರೂಪಾಯಿ ಸಂಬಳ

ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ

Labour department scholarship ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಶೈಕ್ಷಣಿಕ ಧನಸಹಾಯವನ್ನು ಪಡೆಯಲು ಎಲ್ಲಾ ಅರ್ಹ ಅಭ್ಯರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (State Scholarship Portal) ಮುಖಾಂತರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳೆ ಈಗಾಗಲೇ ವಿದ್ಯಾರ್ಥಿಗಳು 2023-24ನೇ ಸಾಲಿಗೆ SSP ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿದ್ದಲ್ಲಿ ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯವು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (state scholarship portal) ಮುಖಾಂತರ ನೀಡಲು ಸಹಾಯವಾಗುವಂತೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾಗಿರುವ ಎಲ್ಲಾ ಕಾರ್ಮಿಕರು ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೋಂದಣಿ ಸಂಖ್ಯೆ ಮತ್ತು ರೆಫೆರೆನ್ಸ್ ಸಂಖ್ಯೆಯನ್ನು ನಮೂದಿಸಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಸೂಚಿಸಲಾಗಿದೆ. ಈ ಪ್ರಕ್ರಿಯೆಯನ್ನು ನಾವು ಕೆಳಗೆ ನೀಡಿರುವ ಜಾಲತಾಣದ ಲಿಂಕ್’ನ ಮುಖಾಂತರ ಮಾಡಬಹುದು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2024

ಅರ್ಜಿ ಸಲ್ಲಿಕೆಯ ಪ್ರಮುಖ ಲಿಂಕುಗಳು

  • ಕಾರ್ಮಿಕ ಇಲಾಖೆಯ ಅಧಿಕೃತ ಜಾಲತಾಣ : Click here
  • SSP Portal/ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ : Click here 

ಇದನ್ನೂ ಓದಿ: Kisan Vikas Patra – KVP : ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ

WhatsApp Group Join Now
Telegram Group Join Now

Related Posts

error: Content is protected !!