ಉದ್ಯೋಗ

Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ₹47,650 ರೂಪಾಯಿ ಸಂಬಳ

WhatsApp Group Join Now
Telegram Group Join Now

Land Surveyor Recruitment 2024 : ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದ ಬೆನ್ನಲ್ಲೆ, ಖಾಲಿ ಇರುವ ಭೂಮಾಪಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಕೃತ ದಿನಾಚರಣೆ ಬಿಡುಗಡೆ ಮಾಡಿದ್ದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಪಿಯುಸಿ ಪಾಸಾದವರಿಗೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತಹ ಭೂಮಾಪಕರ ಹುದ್ದೆಗಳ ನೇಮಕಾತಿಗಾಗಿ ಕಂದಾಯ ಇಲಾಖೆ ಇದೀಗ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು, ಶೈಕ್ಷಣಿಕ ವಿದ್ಯಾರ್ಹತೆ ಏನು, ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ, ನೇಮಕಾತಿ ಹೇಗೆ ನಡೆಯಲಿದೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬುದು ಸೇರಿದಂತೆ ಇನ್ನೂ ಹೆಚ್ಚಿನ ಸಂಪೂರ್ಣ ಮತ್ತು ನಿಖರ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: Atal Pension Yojana-APY : ಪ್ರತಿ ತಿಂಗಳು ₹5000 ಪಿಂಚಣಿ ಪಡೆಯಬೇಕೆ? | ಕೂಡಲೇ ಅಟಲ್ ಪಿಂಚಣಿ ಯೋಜನೆಯಡಿ ಈ ಕೆಲಸ ಮಾಡಿ…

Land Surveyor Recruitment 2024 ಸಂಕ್ಷಿಪ್ತ ವಿವರ

 • ನೇಮಕಾತಿ ಇಲಾಖೆ : ಕರ್ನಾಟಕ ಲೋಕಸೇವಾ ಆಯೋಗ (KPSC)
 • ಹುದ್ದೆಗಳ ಹೆಸರು : ಭೂಮಾಪಕರು (Surveyor)
 • ಖಾಲಿ ಹುದ್ದೆಗಳ ಸಂಖ್ಯೆ : 364 ಹುದ್ದೆಗಳು
 • ಅರ್ಜಿ ಸಲ್ಲಿಕೆ : ಆನ್ ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಕರ್ನಾಟಕ ರಾಜ್ಯದಲ್ಲಿ

ಹುದ್ದೆಗಳ ವಿವರ

 • ಭೂಮಾಪಕರು (HK) : 100 ಹುದ್ದೆಗಳು
 • ಭೂಮಾಪಕರು (RPC) : 264 ಹುದ್ದೆಗಳು

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಶೈಕ್ಷಣಿಕ ವಿದ್ಯಾರ್ಹತೆ ಏನು?

Land Surveyor Recruitment 2024 ಸರ್ವೆಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಟ ಪದವಿ ಪೂರ್ವ ಶಿಕ್ಷಣ (PUC) ಮುಗಿಸಿರಬೇಕು ಹಾಗೂ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಪಡೆದು ಉತ್ತೀರ್ಣರಾಗಿರಬೇಕು.

ಸರ್ವೆಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ

ಮೊದಲಿಗೆ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ನಿಗದಿತ ಅವಧಿಯ ತರಬೇತಿಯ ಬಳಿಕ ಸರ್ವೆಯರ್ ಪರವಾನಗಿ (licence) ನೀಡಲಾಗುವುದು.

ಇದನ್ನೂ ಓದಿ: KPSC Recruitment 2024 : ತಹಶೀಲ್ದಾರ್ ಸೇರಿ 384 ಕೆಎಎಸ್ ಹುದ್ದೆಗಳಿಗೆ ಅರ್ಜಿ | ಕೆಪಿಎಸ್‌ಸಿ ಅಧಿಕೃತ ಅಧಿಸೂಚನೆ ಪ್ರಕಟಣೆ

ಮಾಸಿಕ ಸಂಬಳ ಎಷ್ಟು ಇರುತ್ತದೆ?

Land Surveyor Recruitment 2024 ಸರ್ವೆಯರ್ ಹುದ್ದೆಗಳಿಗೆ ಅಥವಾ ಭೂಮಾಪಕರ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಮಾಸಿಕ ₹23,500 ರಿಂದ ₹47,650 ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ವಯೋಮಿತಿ ವಿವರ

ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷದವರಾಗಿರಬೇಕು ಮತ್ತು ಗರಿಷ್ಟ ವಯೋಮಿತಿ ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷ
 • ಪ್ರವರ್ಗ 2ಏ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 38 ವರ್ಷ
 • ಪ್ರವರ್ಗ 1, ಪ. ಜಾತಿ, ಪ. ಪಂಗಡ ಅಭ್ಯರ್ಥಿಗಳಿಗೆ – 40 ವರ್ಷ

ಇದನ್ನೂ ಓದಿ: Village accountant recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಧಿಕೃತ ಅಧಿಸೂಚನೆ ಬಿಡುಗಡೆ | 1000 ಹುದ್ದೆಗಳು

ಅರ್ಜಿ ಶುಲ್ಕ

ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತಿದೆ.

 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 600 ರೂಪಾಯಿ
 • ಪ್ರವರ್ಗ 2ಏ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 300 ರೂಪಾಯಿ
 • ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 50 ರೂಪಾಯಿ
 • ಪ.ಜಾತಿ, ಪ.ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕ ಇರುವುದಿಲ್ಲ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 11-03-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10-04-2024

ಅಧಿಸೂಚನೆ (RPC) : Download
ಅಧಿಸೂಚನೆ (HK) : Download
ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ : Click here
ಸಹಾಯವಾಣಿ : 080-30574957

ಇದನ್ನೂ ಓದಿ: Apply for New Ration card : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!