ಸರಕಾರಿ ಯೋಜನೆ

Legal fight for drought relief : ಬರ ಪರಿಹಾರ ಕಾನೂನು ಹೋರಾಟ | ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

WhatsApp Group Join Now
Telegram Group Join Now

Legal fight for drought relief : ಒಂದೆಡೆ ಚುನಾವಣೆ ಕಾವು, ಮತ್ತೊಂದೆಡೆ ಬರ-ರಣ ಬೇಸಿಗೆಯ ರೌರವ.ರಾಜಕೀಯ ಪಕ್ಷಗಳ ಚೆಲ್ಲಾಟಕ್ಕೆ ನಾಡಿನ ರೈತರು ಪ್ರಾಣ ಸಂಕಟದಿ೦ದ ತತ್ತರಿಸುವಂತಾಗಿದೆ. ಹೌದು, ಕೇಂದ್ರ ಬರ ಪರಿಹಾರ ಸಂಬ೦ಧ ರಾಜ್ಯ ಸರಕಾರ (karnataka government) ಸುರ್ಪ್ರಿಂ ಕೋರ್ಟ್ (Supreme Court) ಮೆಟ್ಟಿಲೇರಿದೆ. ನಿನ್ನೆ ಮಾರ್ಚ್ 23ರ ಶನಿವಾರ ಬೆಳಗ್ಗೆ ಕೋರ್ಟ್’ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaia) ಅವರು ‘ಕಳೆದ ಐದು ತಿಂಗಳಿ೦ದ ಪದೇಪದೆ ಮನವಿ ಮಾಡಿದರೂ, ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಸಂವಿಧಾನದ ವಿಧಿ 32ರಡಿ ನಮ್ಮ ಕಾನೂನುಬದ್ಧ ಹಕ್ಕು ಚಲಾಯಿಸಿದ್ದೇವೆ’ ಎಂದು ಹೇಳಿದರು.

ಇದನ್ನೂ ಓದಿ: Forest and Revenue Joint Survey : ರೈತರಿಗೆ ಅರಣ್ಯ ಭೂಮಿ ಮಂಜೂರಾತಿ | ಈ ಜಿಲ್ಲೆಗಳ ರೈತರಿಗೆ ಹಕ್ಕುಪತ್ರ?

ಬರ ಪರಿಹಾರಕ್ಕಾಗಿ ನಿರಂತರ ಹೋರಾಟ

ರಾಜ್ಯದ 223 ತಾಲ್ಲೂಕುಗಳು ಬರ ಪೀಡಿತವೆಂದು (Drought prone) ಘೋಷಣೆಯಾದ ನಂತರ ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಾರ ಕೇಂದ್ರದ ನೆರವು ಕೋರಿ ಸತತವಾಗಿ ಮನವಿ ಸಲ್ಲಿಸುತ್ತ ಬಂದಿದೆ. ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (National Disaster Response Fund-NDRF) ಬರ ಪರಿಹಾರ ವಿತರಿಸುವಂತೆ ರಾಜ್ಯ ಸರಕಾರ ನಡೆಸಿದ ವಿನಂತಿ, ಮನವಿಗಳ ಹಾದಿ ಈ ಕೆಳಗಿನಂತಿದೆ:

  • ಆರಂಭದಲ್ಲಿ ಕೇಂದ್ರದ ಜತೆ ರಾಜ್ಯ ಸರ್ಕಾರ ಪತ್ರ ವ್ಯವಹಾರ ನಡೆಸಿತ್ತು. ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಿಗೆ ಬರ ಪರಿಹಾರ ಕೋರಿ ವಿಸ್ತಾರವಾದ ಪತ್ರವನ್ನು ಬರೆದಿದ್ದರು.
  • ಪತ್ರಕ್ಕೆ ಪ್ರತ್ಯುತ್ತರ ಬಾರದೇ ಹೋದಾಗ ರಾಜ್ಯ ಸಚಿವರ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ರಾಜ್ಯ ಸರ್ಕಾರದಿಂದ ಮನವಿಯನ್ನೂ ಸಲ್ಲಿಸಲಾಗಿತ್ತು.
  • ಇದಕ್ಕೂ ಸ್ಪಂದನೆ ಸಿಗದಿದ್ದಾಗ ಅಂತಿಮವಾಗಿ ರಾಜ್ಯ ಸರ್ಕಾರದ ಸಚಿವರು, ಶಾಸಕರು ಸಾಮೂಹಿಕವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿಯನ್ನೂ ನಡೆಸಿ ದೇಶದ ಗಮನ ಸೆಳೆಯಲಾಗಿತ್ತು.

…ಹೀಗೆ ನಿರಂತರ ಮನವಿ, ವಿನಂತಿ, ಧರಣಿಗಳ ನಂತರ ಇದೀಗ ರಾಜ್ಯ ಸರಕಾರವು ನಮಗೆ ನ್ಯಾಯವಾಗಿ ಸಲ್ಲಬೇಕಾದ ಬರ ಪರಿಹಾರ ನೀಡಬೇಕೆಂದು ಕೋರಿ ಸುಪ್ರಿಂ ಕೋರ್ಟ್ ಮೊರೆ ಹೋಗಿದೆ. ಭರ್ತಿ ಐದು ತಿಂಗಳ ನಂತರ ಆರಂಭವಾಗಿರುವ ಈ ಕಾನೂನು ಸಮರವನ್ನು ‘ರಾಜಕೀಯ’ ಪ್ರೇರಿತ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: Summer sun danger to dairy farming : ಹೈನುಗಾರಿಕೆಗೆ ಆಪತ್ತು ತಂದ ರಣಬಿಸಿಲು | ಹಾಲಿನ ಫ್ಯಾಟು, ಡಿಗ್ರಿ ಕುಸಿತ, ಹೈನುಗಾರರ ಸ್ಥಿತಿ ಅಧೋಗತಿ

ಇದೆಲ್ಲ ರಾಜಕೀಯ ಪ್ರೇರಿತವೇ?

ನಿಜಕ್ಕೂ ರಾಜ್ಯ ಸರಕಾರದ ‘ಬರ ಪರಿಹಾರ ಆಗ್ರಹ’ ರಾಜಕೀಯ ಪ್ರೇರಿತವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇಡೀ ರಾಜ್ಯ ಬರದ ದವಡೆಗೆ ಸಿಲುಕಿದೆ. ನೀರು, ಮೇವಿಗಾಗಿ ಹಾಹಾಕಾರ ಶುರುವಾಗಿದೆ. ಆರು ತಿಂಗಳ ಹಿಂದೆಯೆ ರಾಜ್ಯ ಸರಕಾರ 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ಘೋಷಣೆ ಮಾಡಿದೆ.

ಬರ ಘೋಷಣೆಯ ನಂತರ ರಾಜ್ಯದಲ್ಲಿ ನಾಲ್ಕು ಬಾರಿ ಬೆಳೆ ನಷ್ಟದ ಮೌಲ್ಯಮಾಪನ (Assessment of crop loss) ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು; ಸತತವಾಗಿ ಕೇಂದ್ರಕ್ಕೆ ಬರ ಪರಿಹಾರ ಕೋರಿ ಮನವಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: Solar Power for Agricultural Pumpsets : 40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ | ಯಾವೆಲ್ಲ ರೈತರಿಗೆ ಸಿಗಲಿದೆ ಸೋಲಾರ್ ಭಾಗ್ಯ?

ನಾಡಿನ ರೈತರ ಗತಿ ಏನು?

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹೀಗೆ ರಾಜಕೀಯ ಜಿದ್ದು ಸಾಧಿಸುತ್ತಾ ಹೋದರೆ ನಾಡಿನ ಅನ್ನದಾತ ಗತಿ ಏನು? ನಿಯಮಾವಳಿ ಪ್ರಕಾರ ರಾಜ್ಯ ಸರಕಾರ ಮನವಿ ಮಾಡಿದ ವಾರದೊಳಗೆ ಪರಿಸ್ಥಿತಿ ಅವಲೋಕನ ಮಾಡಲು ಕೇಂದ್ರದ ತಂಡ ಬರಬೇಕು. ಆ ಪ್ರಕಾರ ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯದಲ್ಲಿ ಬರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. ವರದಿ ತಲುಪಿ ಐದು ತಿಂಗಳಾದರೂ ಕೇಂದ್ರ ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡದೇ ಇರುವುದು ಶೋಚನೀಯ.

ಕುಡಿಯುವ ನೀರು, ಇನ್‌ಫುಟ್ ಸಬ್ಸಿಡಿ (Input subsidy) ಹಾಗೂ ರೈತರಿಗೆ ತಾತ್ಕಾಲಿಕ ಬರ ಪರಿಹಾರವಾಗಿ ತಲಾ 2000 ವಿತರಣೆ ಸೇರಿದಂತೆ ರಾಜ್ಯ ಸರಕಾರ ತಕ್ಕ ಮಟ್ಟಿಗಿನ ನೆರವು ಕಲ್ಪಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (NDRF) ಬರ ಪರಿಹಾರ ಪರಿಹಾರವಾಗಿ ಕೇಂದ್ರವನ್ನು ಕೋರಿರುವ 18,171 ರೂಪಾಯಿ ಮೊತ್ತ ಬಿಡುಗಡೆಯಾದರೆ ರಾಜ್ಯದ ರೈತರ ಸಂಕಷ್ಟಕ್ಕೆ ನೆರವಾಗಬಹುದು ಎಂಬ ನಿರೀಕ್ಷೆ ಬುಡಮೇಲಾಗುತ್ತಿದೆ. ಅನ್ನದಾತರ ಆಕ್ರಂದನದ ನಡುವೆಯೇ ಇದೀಗ ಕಾನೂನು ಹೋರಾಟ ಶುರುವಾಗಿದೆ.

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

WhatsApp Group Join Now
Telegram Group Join Now

Related Posts

error: Content is protected !!