FinanceNews

Legal protection for Loan Repayment : ಬ್ಯಾಂಕ್ ಮತ್ತು ಫೈನಾನ್ಸ್’ಗಳಿಂದ ಪಡೆದ ಸಾಲ ಕಟ್ಟದಿದ್ದರೆ ಏನಾಗುತ್ತದೆ?

ಸಾಲಗಾರರಿಗೆ ಕಾನೂನು ರಕ್ಷಣೆ ಎಷ್ಟಿದೆ? ಆರ್‌ಬಿಐ ಮಾರ್ಗಸೂಚಿಗಳೇನು?

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್’ಗಳ ಕಿರುಕುಳ ಕುರಿತು ಸುದ್ದಿಗಳು ಸದ್ದು ಮಾಡುತ್ತಿವೆ. ಸಾಲ ಕೊಟ್ಟವರ ಕಿರುಕುಳ ತಾಳಲಾರದೇ ಊರು ತೊರೆಯುವ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹಲವು ಪ್ರಕರಣಗಳು ನಡೆಯುತ್ತಿವೆ.

WhatsApp Group Join Now
Telegram Group Join Now

ಹಾಗಿದ್ದರೆ ಮಾಡಿದ ಸಾಲ ತೀರಿಸಲಾಗದೇ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು? ಸಾಲ ತೀರಿಸದಿದ್ದರೆ ಏನಾಗುತ್ತದೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ನಿಜಕ್ಕೂ ಸಾಲ ತೀರಸದೇ ಇರುವುದು ಅಪರಾಧವೇ? ಈ ಬಗ್ಗೆ ಈ ಲೇಖನದಲ್ಲಿ ನೋಡೋಣ…

ಇದನ್ನೂ ಓದಿ: UPI Payment Advice : ಗೂಗಲ್ ಪೇ, ಫೋನ್ ಪೇ ಬಳಸುವವರಿಗೆ ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ

ಇದು ಕ್ರಿಮಿನಲ್ ಅಪರಾಧವಲ್ಲ Not a criminal offence

ಮರುಪಾವತಿಸುತ್ತೇವೆಂಬ ಉದ್ದೇಶ ಇಟ್ಟುಕೊಂಡೇ ಬಹಳಷ್ಟು ಜನ ಸಾಲ ಮಾಡುತ್ತಾರೆ. ಆದರೆ ವಿವಿಧ ಕಾರಣಾಂತರಗಳಿ೦ದ ಮರುಪಾವತಿ ಕಷ್ಟವಾಗಬಹುದು. ಆಗ ಸಾಲ ಕೊಟ್ಟ ಹಣಕಾಸು ಸಂಸ್ಥೆಯವರು (financial institutions) ಮನೆ ಬಾಗಿಲಿಗೆ ಬಂದು ಗಲಾಟೆ ಮಾಡಬಹುದು, ಮನೆ-ಆಸ್ತಿ ಜೊತೆಗೆ ಮಾನ-ಮರ್ಯಾದೆ ಕೂಡ ಹರಾಜಾಗಬಹುದು ಎಂಬ ಭಯ ಇದ್ದೇ ಇರುತ್ತದೆ.

ಸಾಲ ಪಡೆದು ಪ್ರಾಮಾಣಿಕವಾಗಿ ತೀರಿಸದೇ ಇರುವುದು ತಪ್ಪೇ ಹೌದಾದರೂ ಅದು ಖಂಡಿತವಾಗಿಯೂ ಕ್ರಿಮಿನಲ್ ಅಪರಾಧವಲ್ಲ. ಸಾಲ ವಸೂಲಿಗೂ ರೀತಿ-ರಿವಾಜುಗಳಿವೆ. ಸಾಲ ತೀರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದಾಗ ಭರವಸೆ ಕೈಚೆಲ್ಲುವ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ಏನೇನಾಗಬಹುದು ಎಂಬುದನ್ನು ತಿಳಿದಿಯುವುದು ಉತ್ತಮ.

ಚೆಕ್ ಬೌನ್ಸ್ (Check Bounce) ಪ್ರಕರಣವನ್ನು ಮಾತ್ರವೇ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆಯೇ ವಿನಃ ಸಾಲ ಮರುಪಾವತಿ ಮಾಡದೇ ಇರುವುದು ಕ್ರಿಮಿನಲ್ ಅಪರಾಧವಲ್ಲ. ಈ ಕಾರಣಕ್ಕೆ ಜೈಲುಶಿಕ್ಷೆ ಇರುವುದಿಲ್ಲ. ನಿಗದಿತ ಇಎಂಐ (Equated Monthly Instalment) ಕಟ್ಟದಿರುವುದು, ಪಡೆದ ಸಾಲವನ್ನು ಪೂರ್ಣ ತೀರಿಸದೇ ಇರುವುದು ಕ್ರಿಮಿನಲ್ ಅಫೆನ್ಸ್ ಅಲ್ಲವೇ ಅಲ್ಲ ಎಂಬುವುದನ್ನು ಮೊದಲು ತಿಳಿಯಿರಿ.

ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ

ಸಾಲ ವಸೂಲಾತಿಗೆ ಆರ್‌ಬಿಐ ಮಾರ್ಗಸೂಚಿಗಳೇನು? RBI Guidelines for Loan Recovery

Reserve Bank of India (RBI) ಇತ್ತೀಚಿನ ಮಾರ್ಗಸೂಚಿ ಪ್ರಕಾರ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ:

  • ಪಡೆದ ಸಾಲವನ್ನು ಸಂಪೂರ್ಣವಾಗಿ ಸಾಲ ಮರುಪಾವತಿ ಮಾಡಲಾಗದ ಗ್ರಾಹಕರಿಗೆ ಬೆದರಿಕೆ ಹಾಕುವಂತಿಲ್ಲ. ಸಾರ್ವಜನಿಕವಾಗಿ ಅವಮಾನ ಮಾಡುವಂತಿಲ್ಲ.
  • ಸಾಲ ವಸೂಲಿಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಮೊದಲು 60 ದಿನ ಮುಂಚಿತವಾಗಿ ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರವಾದ ನೋಟಿಸ್ ನೀಡಬೇಕು.
  • ಸಾಲ ವಸೂಲಿಗೆ ಅಪವೇಳೆಗಳಲ್ಲಿ ಫೋನ್ ಕರೆ ಮಾಡುವುದಾಗಲಿ, ಮನೆಗೆ ಬಂದು ಪೀಡಿಸುವುದಾಗಲಿ ಮಾಡುವಂತಿಲ್ಲ. ಗೌರವಯುತವಾಗಿ ನಡೆಸಿಕೊಳ್ಳಬೇಕು.
  • ಸಾಲ ಪಡೆಯುವಾಗ ಅಡ ಇಟ್ಟಿರುವ ಚಿನ್ನವನ್ನೋ, ಮನೆಪತ್ರವನ್ನೋ, ವಾಹನವನ್ನೋ ಹರಾಜು ಹಾಕುವಾಗ, ಆಸ್ತಿಯ ಸರಿಯಾದ ಮೌಲ್ಯ ನಿಗದಿ ಮಾಡಬೇಕು.
  • ಸಾಲ ಮರುಪಾವತಿಗಾಗಿ ಗ್ರಾಹಕರ ಆಸ್ತಿ ಮಾರಿದ ಬಳಿಕ ಬಾಕಿ ಸಾಲದ ಮೊತ್ತವನ್ನು ಮಾತ್ರವೇ ಮುರಿದುಕೊಂಡು ಉಳಿದ ಹಣವನ್ನು ಗ್ರಾಹಕರಿಗೆ ನೀಡಬೇಕು.

ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ

ಕಾನೂನು ರಕ್ಷಣೆ ಎಷ್ಟಿದೆ?

ಪಡೆದ ಸಾಲ ತೀರಿಸಲು ಆಗದಿದ್ದಾಗ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ನೋಟಿಸ್ ಕಳಿಸುತ್ತವೆ. ಅವರದೇ ಆದ ರೀತಿಯಲ್ಲಿ ವಸೂಲಿಗೆ ಮುಂದಾಗುತ್ತವೆ. ಆದರೆ ಯಾವುದಕ್ಕೂ ಕಾನೂನು ಚೌಕಟ್ಟು ಮೀರುವಂತಿಲ್ಲ. ಕಾನೂನು ನೋಟಿಸ್ ಕೊಟ್ಟಿದ್ದರೆ ಅದನ್ನು ಪ್ರಶ್ನಿಸಿ ಸೂಕ್ತ ಉತ್ತರ ಕೊಡಬಹುದು.

ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಮ್ಯಾನೇಜರ್ ಭೇಟಿಯಾಗಿ ಮರುಪಾವತಿ ವಿಳಂಬಕ್ಕೆ ಕಾರಣವನ್ನು ಹೇಳಿ ಕಾಲಾವಕಾಶ ಕೇಳಿಕೊಳ್ಳಬಹುದು. ಹಣಕಾಸು ಸಂಸ್ಥೆಗಳಿಗೆ ಸಾಲ ವಸೂಲಾತಿ ಮುಖ್ಯವಾಗಿರುವುದರಿಂದ ನಿಮಗೆ ಮತ್ತಷ್ಟು ಕಾಲಾವಕಾಶ ನೀಡಬಹುದು. ಸಾಧ್ಯವಾದಷ್ಟು ಸಾಲ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡುವುದು ಉತ್ತಮ.

Google pay instant loan: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!