AgricultureNews

Line 883 Onion : ಎಕರೆಗೆ 325 ಕ್ವಿಂಟಾಲ್ ಇಳುವರಿ ಕೊಡುವ ಹೊಸ ತಳಿ ಇರುಳ್ಳಿ

ಕಪ್ಪು ಒಣ ಭೂಮಿಯಲ್ಲ್ಲಿ ಸಮೃದ್ಧವಾಗಿ ಬೆಳೆಯುವ ಇರುಳ್ಳಿ ತಳಿ ಇದು...

ಕೇವಲ 85 ರಿಂದ 90 ದಿನಗಳಲ್ಲಿ ಒಂದು ಎಕರೆಗೆ ಬರೋಬ್ಬರಿ 325 ಕ್ವಿಂಟಾಲ್ ಇಳುವರಿ ಕೊಡುವ ಹೊಸ ತಳಿ ಇರುಳ್ಳಿ (New Breed Onion) ಅಭಿವೃದ್ಧಿಪಡಿಸಲಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಅತ್ಯಧಿಕ ಇಳುವರಿ ನೀಡುವ ಇರುಳ್ಳಿ ಇದಾಗಿದ್ದು; ಸಣ್ಣ ರೈತರಿಗೆ ವರದಾನವಾಗಿದೆ.

WhatsApp Group Join Now
Telegram Group Join Now

‘ಲೈನ್-883’ (Line-883 Onion Breed) ಹೆಸರಿನ ಈ ಇರುಳ್ಳಿ ತಳಿಯನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (National Horticultural Research and Development Foundation – NHRDF) ಈ ತಳಿಯನ್ನು ಹಲವು ವರ್ಷಗಳ ಸಂಶೋಧನೆಯಿ೦ದ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Murraya exotica : ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ ತರುವ ಬೆಳೆ

ಒಣ ಭೂಮಿಯಲ್ಲೂ ಸಮೃದ್ಧ ಬೆಳೆ

ವಿಶೇಷವೆಂದರೆ ಈ ತಳಿ ಇರುಳ್ಳಿ ಬೆಳೆಯಲು ನೀರಾವರಿ ಬೇಕಾಗಿಲ್ಲ. ಕಪ್ಪು ಒಣ ಭೂಮಿಯಲ್ಲೂ ಸಮೃದ್ಧವಾಗಿ ಬೆಳೆಯುತ್ತದೆ. ಉತ್ತರ ಕರ್ನಾಟಕದ ಎರೆಭೂಮಿಗೆ ಇದು ಹೇಳಿ ಮಾಡಿಸಿದ ಇರುಳ್ಳಿ ತಳಿಯಾಗಿದೆ.

ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಂದರೆ ಕೇವಲ ಮೂರು ತಿಂಗಳಲ್ಲಿ ಕಟಾವು ಮಾಡಿ ಮಾರಿಕಟ್ಟರ ಪೂರೈಸಬಹುದಾಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕೇಂದ್ರದ ತಾಂತ್ರಿಕ ಅಧಿಕಾರಿಗಳು.

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

325 ಕ್ವಿಂಟಲ್ ಇಳುವರಿ

ಸಾಮಾನ್ಯ ತಳಿ ಈರುಳ್ಳಿ ಹೆಚ್ಚೆಂದರೆ ಪ್ರತಿ ಹೆಕ್ಟೇರ್‌ಗೆ 200ರಿಂದ 250 ಕ್ವಿಂಟಲ್ ಇಳುವರಿ ನೀಡಬಹುದು. ಆದರೆ ಸದರಿ ಲೈನ್-883 ತಳಿಯು 300ರಿಂದ 325 ಕ್ವಿಂಟಲ್ ನೀಡುತ್ತದೆ. ಈ ತಳಿಯ ಪ್ರತಿ ಗಡ್ಡೆಯು 110ರಿಂದ 120 ಗ್ರಾಂ ವರೆಗೆ ತೂಕ ಹೊಂದಿರುತ್ತದೆ.

ಮಹತ್ವದ ಸಂಗತಿ ಎಂದರೆ ಶೇ.14ರಷ್ಟು ಸಿಹಿ ಅಂಶ ಹೊಂದಿರುವ ಈ ಇರುಳ್ಳಿ ಗೆಡ್ಡೆಯನ್ನು ಕತ್ತರಿಸುವಾಗ ಕಣ್ಣು ಉರಿ ಬಹಳ ಕಡಿಮೆ ಇರುತ್ತದೆ. ದಟ್ಟ ಕೆಂಪು ಬಣ್ಣ ಹೊಂದಿರುವ ಗೆಡ್ಡೆಗಳ ಒಳಪದರ ಬಿಗಿಯಾಗಿದ್ದು, ಇಡೀ ಗೆಡ್ಡೆ ಗಟ್ಟಿಯಾಗಿರುತ್ತದೆ.

ಇದನ್ನೂ ಓದಿ: ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು

ಸಣ್ಣ ರೈತರಿಗೆ ವರದಾನ

ಕರ್ನಾಟಕದಲ್ಲಿ ಈಗಾಗಲೇ ಲೈನ್-883 ತಳಿ ಇರುಳ್ಳಿಯನ್ನು ಹಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ಇದೀಗ ಮುಕ್ತವಾಗಿ ಬೆಳೆಯಲು ಪ್ರತಿ ಕೆ.ಜಿಗೆ ₹2,000 ರಂತೆ ಬಿತ್ತನೆ ಬೀಜಗಳನ್ನು ಮಾರಲಾಗುತ್ತಿದೆ.

ಆಸಕ್ತ ರೈತರು ಲೈನ್-883 ತಳಿ ಇರುಳ್ಳಿ ಬೀಜಗಳನ್ನು ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕೇಂದ್ರದ 82966 97152 ಅಥವಾ 0836-2225813 ನಂಬರ್‌ಗೆ ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!