FinanceNews

Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ

ಲೋನ್ ಪಡೆಯುವಾಗ ಗಮನಿಸಬೇಕಾದ ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ...

ಇಂದು ಬಹುತೇಕ ಸಂದರ್ಭದಲ್ಲಿ ‘ಸಾಲ (Loan) ಮಾಡುವುದು’ ಅನಿವಾರ್ಯವಾಗಿದೆ. ಯಾವುದೇ ದೊಡ್ಡ ಬಾಬತ್ತಿನ ಕೆಲಸಕ್ಕೆ ಕೈ ಹಾಕಿದರೆ ಸಾಲದ ಮೊರೆ ಹೋಗಬೇಕಾಗುತ್ತದೆ. ಅದರಲ್ಲೂ ಮನೆ ನಿರ್ಮಾಣದಂತಹ ಕಾರ್ಯವನ್ನು ಸಾಲವಿಲ್ಲದೇ ಪೂರೈಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇದೆ.

WhatsApp Group Join Now
Telegram Group Join Now

ಹಾಗಿದ್ದರೆ ಗೃಹ ಸಾಲ (Home loan) ಸೇರಿದಂತೆ ಯಾವುದೇ ಸಾಲ ಪಡೆಯುವ ಮುನ್ನ ಗಮನಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು? ಯಾವೆಲ್ಲ ಮಾಹಿತಿ ತಿಳಿದು ಸಾಲಕ್ಕೆ ಅರ್ಜಿ ಹಾಕಿದರೆ ಸುರಕ್ಷಿತ? ಎಂಬುವುದನ್ನು ತಿಳಿಯುವುದು ಅತ್ಯವಶ್ಯಕ.

ಇದನ್ನೂ ಓದಿ: HMPV New Virus : ಹೊಸ ವೈರಸ್ ಎಷ್ಟು ಡೇಂಜರಸ್?

ಸಾಲ ಪಡೆಯುವ ಮುನ್ನ ಇವುಗಳನ್ನು ಗಮನಹರಿಸಿ

ಸಾಲ ಪಡೆಯುವಾಗ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿ ಎಷ್ಟು? ಮಾಸಿಕ ಕಂತುಗಳೆಷ್ಟು? ಎಂಬುವುದನ್ನಷ್ಟೇ ತಿಳಿಯದೇ ಈ ಕೆಳಗಿನ ವಿವರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು:

  • ಬ್ಯಾಂಕ್‌ಗಳು ವಿಧಿಸುವ ಪ್ರೊಸೆಸಿಂಗ್ ಶುಲ್ಕವೆಷ್ಟು?
  • ಬಡ್ಡಿದರ ವಿಧಾನ (Floating ಅಥವಾ Fixed Interest)
  • ಅವಧಿಗೂ ಮೊದಲೇ ಸಾಲ ಮುಕ್ತಾಯಗೊಳಿಸುವುದಾದರೆ ತಗುಲುವ ಪ್ರೀಕ್ಲೋಷರ್ ಶುಲ್ಕ
  • ಪಾರ್ಷಿಯಲ್ ಪೇಮೆಂಟ್ ಮಾಡುವ ಅವಕಾಶ
  • EMI ಪಾವತಿ ತಡವಾದಲ್ಲಿ ವಿಧಿಸುವ ದಂಡ
  • ಹಿಡನ್ ಶುಲ್ಕಗಳ ಮಾಹಿತಿ

ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ

ಸಿಬಿಲ್ ಸ್ಕೋರ್ ಬಗ್ಗೆ ತಿಳಿಯಿರಿ

ಯಾವುದೇ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿ೦ದ ನೀವು ಸಾಲ ಪಡೆಯಬೇಕೆಂದರೆ ಮೊದಲು ಗಮನಿಸುವುದೇ ನಿಮ್ಮ ಸಾಲ ಪಡೆಯುವ ಸಾಮರ್ಥ್ಯವನ್ನು. ಅದನ್ನೇ ಬ್ಯಾಂಕಿ೦ಗ್ ಭಾಷೆಯಲ್ಲಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಎಂದು ಹೇಳಲಾಗುತ್ತದೆ. ಇದನ್ನು ಗರಿಷ್ಠ 300 ಹಾಗೂ ಕನಿಷ್ಠ 900 ಅಂಕ ಮೇಲೆ ಅಳೆಯಲಾಗುತ್ತದೆ.

CIBIL ಎಂದರೆ ಕ್ರೆಡಿಟ್ ಇನ್ಫಾರ್ಮಶನ್ ಬ್ಯುರೋ ಇಂಡಿಯಾ ಲಿಮಿಟೆಡ್ (Credit Information Bureau India Limited – CIBIL) ಎಂದರ್ಥ. ಇಸ್ವಿ 2000ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ವ್ಯಕ್ತಿಗಳು ಮತ್ತು ಸಂಸ್ಥೆಗಳ ಎಲ್ಲಾ ಕ್ರೆಡಿಟ್ ಸಂಬ೦ಧಿತ ಚಟುವಟಿಕೆಗಳ ದಾಖಲೆಗಳ ನಿರ್ವಹಣೆಯಲ್ಲಿ ತೊಡಗಿದೆ.

ನಿಮ್ಮ ಸಿಬಿಲ್ ಸ್ಕೋರ್ ಗರಿಷ್ಠ 900 ಹಾಗೂ ಕನಿಷ್ಠ 700 ಅಂಕ ಹೊಂದಿದ್ದರೆ, ಸಾಲ ನೀಡುವ ಸಂಸ್ಥೆಗಳು ಸಾಲದ ಅರ್ಜಿಗಳನ್ನು ಪರಿಗಣಿಸುತ್ತವೆ. 700ಕ್ಕೂ ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲದ ಸಿಗದೇ ಹೋಗಬುದು ಅಥವಾ ಸಾಲ ಸಿಕ್ಕರೂ ಹೆಚ್ಚು ಬಡ್ಡಿ ವಿಧಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: New facilities for Govt employees : ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಸೌಲಭ್ಯಗಳು

ಗೃಹಸಾಲ ಪಡೆಯಲು ಬೇಕಾಗುವ ದಾಖಲೆಗಳು

ಕ್ರಯ ಪತ್ರ, ದಾನ ಪತ್ರ, ಉಯಿಲು, ಮೂಲಪತ್ರ (ಮದರ್ ಡೀಡ್), ಹಂಚಿಕೆಯಾದ ನಿವೇಶನವಾಗಿದ್ದರೆ ಹಂಚಿಕೆ ಮಾಡಿದ ಸಂಸ್ಥೆಯ ವಿತರಣಾ ಪತ್ರ, ಇತ್ತೀಚಿನ ತೆರಿಗೆ ಪಾವತಿ ರಸೀದಿ, ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (Encumbrance Certificate – EC), ಖಾತೆ, ಕಟ್ಟಡ ನಿರ್ಮಾಣ ಮಾಡುವುದಿದ್ದರೆ ನಕ್ಷೆ ಹಾಗೂ ಅದಕ್ಕೆ ಸ್ಥಳೀಯ ಪ್ರಾಧಿಕಾರ ನೀಡಿದ ಅನುಮತಿ, ನಿರ್ಮಾಣ ವೆಚ್ಚದ ಅಂದಾಜು ಪಟ್ಟಿ, ಈಗಾಗಲೆ ಕಟ್ಟಿರುವ ಮನೆ ಆಗಿದ್ದರೆ ಕಟ್ಟಡ ನಕ್ಷೆ ಹಾಗೂ ಅದಕ್ಕೆ ಪಡೆದ ಅನುಮತಿ ಪತ್ರ ಸೇರಿ ಮನೆಗೆ ಸಂಬ೦ಧಿಸಿದ ಎಲ್ಲ ಕಾನೂನುಬದ್ದವಾದ ದಾಖಲೆಗಳಿರಬೇಕು.

ಸಾಲ ಪಡೆಯುವ ವ್ಯಕ್ತಿ ಉದ್ಯೋಗಸ್ಥರಾಗಿದ್ದರೆ ಇತ್ತೀಚಿನ ಸಂಬಳದ ಸ್ಲಿಪ್, ಫಾರ್ಮ್ 16ಎ, 2 ವರ್ಷದ ಐಟಿಆರ್, 6 ತಿಂಗಳ ಬ್ಯಾಂಕ್ ಸ್ಟೇಟ್’ಮೆಂಟ್, ವೇತನ ಹೊರತಾಗಿ ಆದಾಯ ಇದ್ದಲ್ಲಿ ಅದನ್ನು ಖಾತರಿಪಡಿಸುವ ದಾಖಲೆಗಳು, ಸ್ವಂತ ವ್ಯವಹಾರ, ಉದ್ಯಮ ನಡೆಸುತ್ತಿರುವವರು ತಮ್ಮ ಆದಾಯಕ್ಕೆ ಪೂರಕ ದಾಖಲೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಹೊಂದಿರಬೇಕು.

ಕಡಿಮೆ ಬಡ್ಡಿ ಇರುವ ಬ್ಯಾಂಕ್ ಆಯ್ಕೆ ಮಾಡಿ

ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬೇರೆ ಬೇರೆ ಬಡ್ಡಿ ದರಗಳಿರುತ್ತವೆ. ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಬಡ್ಡಿದರ ಹಾಗೂ ನಿಬಂಧನೆಗಳು ಭಿನ್ನವಾಗಿರುತ್ತವೆ. ಹೀಗಾಗಿ ಗೃಹಸಾಲಕ್ಕೆ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರ ಇದೆ ಎಂಬುವುದನ್ನು ವಿಚಾರಣೆ ಮಾಡಿಯೇ ಸಾಲಕ್ಜೆ ಕೈ ಹಾಕಬೇಕು.

ಇದರ ಜತೆಗೆ ಮಾಸಿಕ ಕಂತುಗಳ ಬಗ್ಗೆ (EMI) ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಸಾಲ ಮರುಪಾವತಿಸುವಾಗ ಎಷ್ಟು ಅಸಲಿಗೆ ಎಷ್ಟು ಬಡ್ಡಿ ಕಟ್ಟಬೇಕಾಗುತ್ತದೆ, ಡೌನ್‌ಪೇಮೆಂಟ್ ಎಷ್ಟು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಇದನ್ನೂ ಓದಿ:  ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Articles

Back to top button
error: Content is protected !!