ಸರಕಾರಿ ಯೋಜನೆಸುದ್ದಿಗಳು

LPG cylinder prices cut : ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 100 ರೂಪಾಯಿ ಇಳಿಕೆ | ಪ್ರಧಾನಿ ಮೋದಿ ಅಧಿಕೃತ ಮಾಹಿತಿ

WhatsApp Group Join Now
Telegram Group Join Now

LPG cylinder prices cut : ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ಹೋಗಿದ್ದ ದೇಶದ ಜನತೆಗೆ ಕೇಂದ್ರ ಸರಕಾರ ಬಿರುಬೇಸಿಗೆಯಲ್ಲಿಯೇ ತಂಪುಗರೆದಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪವಾಡ ಸದೃಶ್ಯವೆಂಬ೦ತೆ ಅನೇಕ ದಿನಬಳಕೆ ವಸ್ತುಗಳ ರೇಟು ಯಥಾಸ್ಥಿತಿಗೆ ಬರುತ್ತಿದ್ದು; ವಿಶೇಷವಾಗಿ ಜನರನ್ನು ಆಕ್ರೋಶಕ್ಕೆ ಎಡೆಮಾಡಿದ್ದ ಅಡುಗೆ ಅನಿಲ ಬೆಲೆಯ ಏರಿಳಿತಕ್ಕೆ ಕೇಂದ್ರ ಸರಕಾರ ತಾತ್ಕಾಲಿಕ ಪರಿಹಾರ ನೀಡಿದೆ.

ಹೌದು, ಇಷ್ಟು ದಿನ ಪೈಸೆ ಲೆಕ್ಕದಲ್ಲಿ ಅಥವಾ 1-2 ರೂಪಾಯಿ ಲೆಕ್ಕದಲ್ಲಿ ಏರಿಳಿಕೆಯಾಗುತ್ತಿದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ ಇದೀಗ ಭರ್ತಿ ನೂರು ರೂಪಾಯಿ ಲೆಕ್ಕದಲ್ಲಿ ಕಡಿತಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 100 ರೂಪಾಯಿ ಕಡಿತಗೊಳಿಸಿದ್ದಾರೆ.

ಇದನ್ನೂ ಓದಿ: New Ration Card Application : ಹೊಸ ರೇಷನ್ ಕಾರ್ಡ್’ಗೆ ಕೂಡಲೇ ಅರ್ಜಿ ಸಲ್ಲಿಸಿ: ಎರಡು ದಿನ ಮಾತ್ರ ಅವಕಾಶ

805 ರೂಪಾಯಿಗೆ ಸಿಲಿಂಡರ್

ಮಹಿಳಾ ದಿನಾಚರಣೆ ಹಾಗೂ ಮಹಾಶಿವರಾತ್ರಿ ದಿನವಾದ ನಿನ್ನೆ (ಮಾರ್ಚ್ 8) ಪ್ರಧಾನಿ ಸಿಲಿಂಡರ್ ಬೆಲೆ ಕಡಿತಗೊಳಿಸಿ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಕಡಿತದ ನಿರ್ಧಾರದಿಂದ 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 805 ರೂಪಾಯಿಗೆ ಇಳಿಕೆಯಾಗಿದೆ. ಉಜ್ವಲ ಫಲಾನುಭವಿಗಳಿಗೆ ಕೇವಲ 505 ರೂಪಾಯಿಗೆ 14.2 ಕೆ.ಜಿ ಸಿಲಿಂಡರ್ ಸಿಗಲಿದೆ.

ಮೇಲುನೋಟಕ್ಕೆ ಲೋಕಸಭಾ ಚುನಾವಣೆಯ (Lok Sabha Elections) ಹಿನ್ನಲೆಯಲ್ಲಿ ಈ ‘ಕಡಿತ’ದ ಗಿಫ್ಟ್ ಸಿಕ್ಕಿದೆ ಅನ್ನಿಸಿದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ದರ ಕಡಿತ ನಿರ್ಧಾರ ಪ್ರಕಟಿಸಿದೆ ಎಂಬ ಸಂದೇಶವನ್ನು ಕೇಂದ್ರ ಸರಕಾರ ರವಾನಿಸಿದೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ಪ್ರಧಾನಿ ಮೋದಿ X ಸಂದೇಶ

ಪ್ರಧಾನಿ ಮೋದಿ ಅವರು 100 ರೂಪಾಯಿ ಇಳಿಕೆಯಾದ ಸಿಲಿಂಡರ್ ಬೆಲೆಯ (LPG cylinder price) ಕುರಿತ ಅಧಿಕೃತ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ‘X’ನಲ್ಲಿ ಹಂಚಿಕೊ೦ಡಿದ್ದಾರೆ. ನಮ್ಮ ಬದ್ಧತೆಗೆ ಪೂರಕವಾಗಿ ದೇಶದ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಇದರಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಹೊರೆ ತಗ್ಗಲಿದೆ. ವಿಶೇಷವಾಗಿ ನಾರಿಶಕ್ತಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

‘ನಮ್ಮ ಸರ್ಕಾರವು ಮಹಿಳಾ ದಿನದಂದು ಎಲ್​ಪಿಜಿ ಸಿಲಿಂಡರ್ ದರವನ್ನು 100 ರೂಪಾಯಿ ಕಡಿಮೆ ಮಾಡುತ್ತಿದೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಈ ನಿರ್ಧಾರವು ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ (Nari Shalti) ಪ್ರಯೋಜನವನ್ನು ನೀಡಲಿದೆ’ ಎಂಬ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

WhatsApp Group Join Now
Telegram Group Join Now

Related Posts

error: Content is protected !!