ಕೃಷಿಸುದ್ದಿಗಳು

Maintenance of Arecanut plantation in Summer : ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಯ ಬಿಸಿಲು ತಡೆಯಲು ತಪ್ಪದೇ ಅನುಸರಿಸಿ ಈ ವಿಧಾನ

WhatsApp Group Join Now
Telegram Group Join Now

ರಾಜ್ಯದಲ್ಲಿ ಈ ಬಾರೀ ಭಯಂಕರ ಬೇಸಿಗೆಯ ಮುನ್ಸೂಚನೆ ಕಾಣಿಸಿಕೊಂಡಿದೆ. ಬಹವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಇಂಥ ಸಂದರ್ಭದಲ್ಲಿ ಅಡಿಕೆ ತೋಟಕ್ಕೆ ಜೀವಾಮೃತ ಎಷ್ಟು ಉಪಕಾರಿ ಎಂಬ ಮಾಹಿತಿ ಇಲ್ಲಿದೆ…

Maintenance of Arecanut plantation in Summer : ಈ ಬಾರೀ ಭಯಂಕರ ಬೇಸಿಗೆಯ ಮುನ್ಸೂಚನೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ವಾಡಿಕೆಗೆ ಮುನ್ನವೇ ಬಿಸಿಲು ತೀವ್ರಗೊಂಡಿದ್ದು, ಕೆಲ ಜಿಲ್ಲೆಗಳಲ್ಲಿ ಶಾಖ ತರಂಗ ಆತಂಕ ಎದುರಾಗಿದೆ. ತಾಪಮಾನದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ತರಂಗ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಶಾಖ ತರಂಗ ಸ್ಥಿತಿ ಎದುರಾದರೆ ಬಿಸಿಲಿನ ಝುಳದ ಜತೆಗೆ ಸೆಖೆಯೂ ಹೆಚ್ಚುತ್ತದೆ. ಈ ಸ್ಥಿತಿ ಮನುಷ್ಯರಿಗಷ್ಟೇ ಅಲ್ಲ ಕಾಡು ಮತ್ತು ತೋಟಗಾರಿಕೆ ಬೆಳೆಗಳಿಗೂ ಅಪಾಯಕಾರಿ.

ಇದನ್ನೂ ಓದಿVillage Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಬೇಸಿಗೆಯಲ್ಲಿ ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಅಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45-46 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸರಾಸರಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಗೆಯಾಗುವ ಸಾಧ್ಯತೆಯೂ ಇದೆ. ನಿಧಾನವಾಗಿ ಬಿಸಿಲು ಬೇಗೆ ಹೆಚ್ಚಾಗುತ್ತಿದೆ.

ಪ್ರತಿ ವರ್ಷ ಜನವರಿಯಿಂದ ಮೇ ವರೆಗೆ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ. ಬೇಸಿಗೆಯಲ್ಲಿ ಆಕಸ್ಮಿಕ ಬೆಂಕಿ, ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಅಷ್ಟೇ ದೊಡ್ಡ ಸವಾಲನ್ನು ಬಹವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವುದಾಗಿದೆ. ವಿಶೇಷವಾಗಿ ಬಿಸಿಲಿನ ಪ್ರಕೋಪ ತಡೆಯಲಾಗದ ಅಡಿಕೆ ತೋಟಗಳಿಗೆ ಇದು ಇನ್ನೂ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಅಡಿಕೆ ತೋಟದ ನಿರ್ವಹಣೆ ಬಹಳ ಮುಖ್ಯ.

ಇದನ್ನೂ ಓದಿHorticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ

ಹೌದು, ಸಮೃದ್ಧವಾದ ಅಡಿಕೆ ಬೆಳೆಯ ಗುಟ್ಟೇ ಜೀವಾಮೃತ. ಅಡಿಕೆ ತೋಟಕ್ಕೆ ಹಾಕಿದ ಗೊಬ್ಬರ ಮತ್ತು ಮಣ್ಣಿನ ಪೋಷಕಾಂಶಗಳನ್ನು ಸರಿಯಾಗಿ ಅಡಿಕೆ ಮರಗಳಿಗೆ ತಲುಪಬೇಕೆಂದರೆ ಜೀವಾಮೃತ ಬೇಕೇ ಬೇಕು. ಈ ಜೀವಾಮೃತವು ಗೊಬ್ಬರದಲ್ಲಿನ ಸತ್ವಗಳನ್ನು ಹೀರಿಕೊಳ್ಳಲು ಅಡಿಕೆ ಮರಗಳಿಗೆ ಸಹಾಯ ಮಾಡುತ್ತದೆ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಜೀವಾಮೃತವನ್ನು ಮಾಡಿ ಹಾಕಬೇಕು. ಇದರಿಂದ ಅಡಿಕೆ ಮರಗಳಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಕ್ಕು, ಮರಗಳು ಚೆನ್ನಾಗಿ ಫಸಲು ಕಟ್ಟುತ್ತದೆ. ಒಣಗುವುದಿಲ್ಲ ಮತ್ತು ಯಾವುದೇ ರೋಗಗಳಿಗೆ ತುತ್ತಾಗುವುದಿಲ್ಲ. ಇದರಿಂದ ಇಳುವರಿ ಚೆನ್ನಾಗಿ ಬರುತ್ತದೆ.

ಒಂದು ಬ್ಯಾರಲ್‌ನಲ್ಲಿ ನೀರು, ನಾಟಿ ಹಸುವಿನ ಸಗಣಿ, ಗೋಮೂತ್ರ, ಮಜ್ಜಿಗೆ ಜೊತೆ ದ್ವಿದಳ ಧಾನ್ಯದ ಹಿಟ್ಟು, ಅಂಟು ಬೆಲ್ಲ ಹಾಗೂ ಜಮೀನಿನ ಬದುವಿನ ಬೊಗಸೆ ಮಣ್ಣನ್ನು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ, ನೆರಳಿನಲ್ಲಿ ನೆನೆ ಇಟ್ಟು ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ದ್ರಾವಣವನ್ನು ಚೆನ್ನಾಗಿ ಕಲಕುತ್ತಿದ್ದರೆ ಏಳು ದಿನಗಳಲ್ಲಿ ಜೀವಾಮೃತ ತಯಾರಾಗುತ್ತದೆ. ಏಳು ದಿನಗಳ ನಂತರ ತಯಾರಾದ ಜೀವಾಮೃತವನ್ನು ಫಿಲ್ಟರ್ ಯಂತ್ರದ ಸಹಾಯದಿಂದ ಇನ್ನೊಂದು ಬ್ಯಾರಲ್‌ಗೆ ಶಿಫ್ಟ್ ಮಾಡಿ, ಅಲ್ಲಿಂದ ಪೈಪ್ ಮೂಲಕ ಡ್ರಿಪ್‌ಗೆ ಜೀವಾಮೃತ ಸೇರ್ಪಡೆಯಾಗಿ ಅಡಿಕೆ ತೋಟದ ಎಲ್ಲಾ ಮರಗಳಿಗೂ ಜೀವಾಮೃತ ರವಾನಿಸಬೇಕು.

ಇದನ್ನೂ ಓದಿKisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ

ಒಂದು ಎಕರೆಗೆ 200 ಲೀಟರ್ ಸಾಕು

ಒಂದು ಎಕರೆ ಅಡಿಕೆ ತೋಟಕ್ಕೆ 200 ಲೀಟರ್ ಜೀವಾಮೃತ ಸಾಕಾಗುತ್ತದೆ. ಜೀವಾಮೃತ ಒಂದು ಸೂಕ್ಷ್ಮಜೀವಿಯ ಸಂಸ್ಕರಣೆಯಾಗಿದ್ದು, ಇದು ಪೋಷಕಾಂಶಗಳನ್ನು ಒದಗಿಸುತ್ತದೆ. ಮುಖ್ಯವಾಗಿ ಜೀವಾಮೃತವು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸಸ್ಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಜೀವಾಮೃತವನ್ನು ನೆರಳಿರುವ ಸ್ಥಳದಲ್ಲಿ ಮಾಡುವುದು ಸೂಕ್ತ. ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿ, ಕ್ರಮಬದ್ಧವಾಗಿ ಅಡಿಕೆ ತೋಟ ಮಾಡಿದರೆ ಉತ್ತಮ ರೀತಿಯ ಫಸಲು ಪಡೆಯಬಹುದು. ಸಾವಯವ ಕೃಷಿಯಲ್ಲಿ ರೈತರು ಮನೆಯಲ್ಲಿಯೇ ಸುಲಭವಾಗಿ ಜೀವಾಮೃತವನ್ನು ತಯಾರಿಸಬಹುದು. ಹನಿ ನೀರಾವರಿ ಮೂಲಕವೇ ಜೀವಾಮೃತವನ್ನು ಪ್ರತಿ ಅಡಿಕೆ ಗಿಡಗಳಿಗೂ ನೀಡಬಹುದು.

Maintenance of Arecanut plantation in Summer

Pension Schemes New Rules : ಇನ್ಮುಂದೆ ವಾರ್ಷಿಕ 32,000 ರೂಪಾಯಿ ಆದಾಯ ಇರುವವರಿಗಷ್ಟೇ ವೃದ್ಧಾಪ್ಯ ವೇತನ , ವಿಧವಾ ವೇತನ ಸಿಗಲಿದೆ | ಸರಕಾರದ ಹೊಸ ರೂಲ್ಸ್

WhatsApp Group Join Now
Telegram Group Join Now

Related Posts

error: Content is protected !!