
2025ರ ಮಳೆಗಾಲ ಯಾವಾಗ ಶುರುವಾಗಲಿದೆ? ಪಂಚಾ೦ಗ ಶಾಸ್ತ್ರದ ಪ್ರಕಾರ ಮಳೆ ನಕ್ಷತ್ರಗಳು (Male nakshatragalu 2025) ಹೇಗಿವೆ? ಹೀಗಿದೆ ಈ ವರ್ಷದ ಮಳೆಗಾಲ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಎಲ್ಲೆಡೆ ರಣ ಬಿಸಿಲು ಜನ-ಜಾನುವಾರುಗಳ ಜೀವ ಹಿಂಡುತ್ತಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರಾಜ್ಯದ ಅಲ್ಲಲ್ಲಿ ಮುಂಗಾರು ಪೂರ್ವ ಮಳೆ ಹನಿಯುತ್ತಿದೆಯಾದರೂ ತಾಪಮಾನ ಮಾತ್ರ 42 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದೆ.
ಹಾಗಿದ್ದರೆ, ಮಳೆಗಾಲ ಯಾವಾಗ ಆರಂಭವಾದೀತು? ಬಿಸಿಲಿನ ಆರ್ಭಟಕ್ಕೆ ಬಾಯಿ ತೆರೆದಿರುವ ಭೂಮಿಯ ಒಡಲು ಯಾವಾಗ ತಂಪುಗೊAಡೀತು? ನೀರಿನ ಹಾಹಾಕಾರಕ್ಕೆ ಕೊನೆ ಯಾವಾಗ? ಎಂಬ ಹಲವು ಪ್ರಶ್ನೆಗಳು ಜನಮನದಲ್ಲಿ ಚರ್ಚೆಯಾಗುತ್ತಿವೆ.
ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಸಿಗಲಿದೆ ಇ-ಸ್ವತ್ತು
ಭರ್ಜರಿ ಮುಂಗಾರು ಮಳೆ ಮುನ್ಸೂಚನೆ
ವರ್ಷದ ಮೊದಲ ಮಳೆ ‘ಅಶ್ವಿನಿ’ ಮಳೆಯಾದರೂ ಪಕ್ಕಾ ಮಳೆಗಾಲ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ. ‘ಆರಿದ್ರಾ’ ಮಳೆಯಿಂದ ಮುಂಗಾರು ಮಳೆ ಶುರುವಾಗುತ್ತದೆ. ಆರಿದ್ರಾದಿಂದ ವಿಶಾಖದ ವರೆಗೂ ಮಳೆಗಾಲವಿರುತ್ತದೆ. ಈ ವರ್ಷದ ಮುಂಗಾರು ಮಳೆ ಉತ್ತಮವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜ್ಯೋತಿಷ್ಯಶಾಸ್ತ್ರ ಕೂಡ ಈ ವರ್ಷದ ಮಳೆ ಉತ್ತಮವಾಗಿರಲಿದೆ ಎಂದು ಅಂದಾಜಿಸಿದೆ.
ಮಳೆ ನಕ್ಷತ್ರಗಳ ಮಾಹಿತಿ
ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಪಂಚಾ೦ಗದ ಆಧಾರದ ಮೇಲೆ ಮಳೆ ನಕ್ಷತ್ರಗಳನ್ನು ಈ ವರ್ಷ ಹೀಗ್ಹೀಗೆ ಮಳೆ ಆಗಬಹುದು ಎಂದು ಅಂದಾಜಿಸುತ್ತ ಬಂದಿದ್ದಾರೆ. ನಮ್ಮ ಪಂಚಾ೦ಗಗಳಲ್ಲಿ ಮಳೆ ನಕ್ಷತ್ರಗಳ ಉಲ್ಲೇಖವಿದೆ. ಜ್ಯೋತಿಷ್ಯಶಾಸ್ತ್ರವು 16 ಮಳೆ ನಕ್ಷತ್ರಗಳನ್ನು ಗುರುತಿಸಿದೆ. ಇದರಲ್ಲಿ ಮೊದಲ 5 ನಕ್ಷತ್ರಗಳು ಬೇಸಿಗೆ ಮಳೆಗಳಾಗಿದ್ದು; ಮಳೆ ಬರುವ ಸಾಧ್ಯತೆ ಅಷ್ಟಾಗಿ ಇರುವುದಿಲ್ಲ.
ಪಂಚಾAಗದ ಪ್ರಕಾರ ಜೂನ್ ತಿಂಗಳ ಮೊದಲ ವಾರ ಅಪ್ಪಟ ಮಳೆಗಾಲ ಆರಂಭವಾಗುತ್ತದೆ. ಇನ್ನುಳಿದ ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ ನಕ್ಷತ್ರಗಳು ಅಪ್ಪಟ ಮಳೆ ನಕ್ಷತ್ರಗಳೆಂದು ಗುರುತಿಸಲ್ಪಟ್ಟಿವೆ.
ಇದನ್ನೂ ಓದಿ: Sashakt Panchayat Netri Abhiyan- ಗ್ರಾಮ ಪಂಚಾಯತಿಗಳಲ್ಲಿ ಇನ್ನು ಗಂಡಂದಿರ ದರ್ಬಾರ್ ಬಂದ್

2025ರ ಮಳೆ ನಕ್ಷತ್ರಗಳು
2025ನೇ ಸಾಲಿನಲ್ಲಿ 16 ಮಳೆ ನಕ್ಷತ್ರಗಳ ಪೈಕಿ ಯಾವ್ಯಾವ ಮಳೆ ಯಾವ್ಯಾವ ದಿನಾಂಕಗಳ೦ದು ಆರಂಭವಾಗುತ್ತದೆ. ಯಾವ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂಬ ಮಾಹಿತಿ ಇಲ್ಲಿದೆ…
ಬೇಸಿಗೆ ಮಳೆ ನಕ್ಷತ್ರಗಳು
- ಅಶ್ವಿನಿ ಮಳೆ: ಏಪ್ರಿಲ್ 13 ರಿಂದ 26ರ ವರೆಗೆ – ಸಾಮಾನ್ಯ ಮಳೆ
- ಭರಣಿ ಮಳೆ: ಏಪ್ರಿಲ್ 27 ರಿಂದ ಮೇ 10ರ ವರೆಗೆ – ಸಾಮಾನ್ಯ ಮಳೆ
- ಕೃತಿಕಾ ಮಳೆ: ಮೇ 11 ರಿಂದ 23ರ ವರೆಗೆ – ಸಾಮಾನ್ಯ ಮಳೆ
- ರೋಹಿಣಿ ಮಳೆ: ಮೇ 24 ರಿಂದ ಜೂನ್ 06ರ ವರೆಗೆ – ಉತ್ತಮ ಮಳೆ
- ಮೃಗಶಿರ ಮಳೆ: ದಿನಾಂಕ ಜೂನ್ 07 ರಿಂದ 20ರ ವರೆಗೆ – ಉತ್ತಮ ಮಳೆ
ಇದನ್ನೂ ಓದಿ: Rover survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ
ಅಪ್ಪಟ ಮಳೆ ನಕ್ಷತ್ರಗಳು
- ಆರಿದ್ರಾ ಮಳೆ: ಜೂನ್ 21 ರಿಂದ ಜುಲೈ 04ರ ವರೆಗೆ – ಉತ್ತಮ ಮಳೆ
- ಪುನರ್ವಸು ಮಳೆ: ಜುಲೈ 05 ರಿಂದ 19ರ ವರೆಗೆ – ಉತ್ತಮ ಮಳೆ
- ಪುಷ್ಯ ಮಳೆ: ಜುಲೈ 20 ರಿಂದ ಆಗಸ್ಟ್ 02ರ ವರೆಗೆ – ಉತ್ತಮ ಮಳೆ
- ಆಶ್ಲೇಷ ಮಳೆ: ಆಗಸ್ಟ್ 03 ರಿಂದ 16ರ ವರೆಗೆ – ಸಾಮಾನ್ಯ ಮಳೆ
- ಮಘೆ ಮಳೆ: ಆಗಸ್ಟ್ 17 ರಿಂದ 29ರ ವರೆಗೆ – ಉತ್ತಮ ಮಳೆ
- ಹುಬ್ಬ ಮಳೆ: ಆಗಸ್ಟ್ 30 ರಿಂದ ಸೆಪ್ಟೆಂಬರ್ 12ರ ವರೆಗೆ – ಉತ್ತಮ ಮಳೆ
- ಉತ್ತರ ಮಳೆ: ಸೆಪ್ಟೆಂಬರ್ 13 ರಿಂದ 26ರ ವರೆಗೆ – ಉತ್ತಮ ಮಳೆ
- ಹಸ್ತ ಮಳೆ: ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 09ರ ವರೆಗೆ – ಉತ್ತಮ ಮಳೆ
- ಚಿತ್ತ ಮಳೆ: ಅಕ್ಟೋಬರ್ 10 ರಿಂದ 24ರ ವರೆಗೆ – ಉತ್ತಮ ಮಳೆ
- ಸ್ವಾತಿ ಮಳೆ: ಅಕ್ಟೋಬರ್ 25 ರಿಂದ ನವೆಂಬರ್ 06ರ ವರೆಗೆ – ಉತ್ತಮ ಮಳೆ
- ವಿಶಾಖ ಮಳೆ: ನವೆಂಬರ್ 07 ರಿಂದ 18ರ ವರೆಗೆ – ಉತ್ತಮ ಮಳೆ
ಹೀಗೆ ಮೇಲ್ಕಾಣಿಸಿದ ದಿನಾಂಕಗಳ೦ದು ಆಯಾಯ ಮಳೆ ನಕ್ಷತ್ರಗಳು ಆರಂಭವಾಗಲಿದ್ದು; ಈ ಮಳೆಗಳು ಸುರಿಯುವ ಪ್ರಮಾಣದಲ್ಲಿ ಏರಿಳಿತವಾಗಬಹುದು ಎಂದು ಪಂಚಾ೦ಗದಲ್ಲಿ ನಮೂದಿಸಲಾಗಿದೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ