ಸರಕಾರಿ ಯೋಜನೆಸುದ್ದಿಗಳು

Mgnrega Personal Work Subsidy : ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಹಾಯಧನ | ₹5 ಲಕ್ಷದ ವರೆಗೆ ನೆರವು

WhatsApp Group Join Now
Telegram Group Join Now

ನರೇಗಾ ಯೋಜನೆಯಡಿ ಕುರಿ ಶೆಡ್, ಮೇಕೆ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ಬದು ನಿರ್ಮಾಣ, ಬಚ್ಚಲು ಗುಂಡಿ ಮತ್ತು ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

Mgnrega Personal Work Subsidy : ರಾಜ್ಯದಲ್ಲಿ ಬರಗಾಲ (drought) ದಿನೇ ದಿನೆ ಭೀಕರ ಸ್ವರೂಪ ತಳೆಯುತ್ತಿದೆ. ಮುಂಗಾರು ಸಂಪೂರ್ಣ ಕೈ ಕೊಟ್ಟಿದ್ದು; ಹಿಂಗಾರು ಹಂಗಾಮ ಕೂಡ ಅದೇ ಹಾದಿಯಲ್ಲಿ ಮುನ್ನೆಡೆದಿದೆ. ಜಾನುವಾರಗಳ ಮೇವು (Cattle fodder), ನೀರಿಗೂ ತತ್ವಾರ ಎದುರಾಗುವ ದುಃಸ್ಥಿತಿ ನಿರ್ಮಾಣವಾಗಿದೆ. ಜನ ಮನೆ-ಮಠ, ಊರುಕೇರಿ ತೊರೆದು ಕೇವಲ ಹೊಟ್ಟೆಪಾಡಿಗಾಗಿ ಗುಳೆ ಹೋಗುವ ಕರುಣಾಜನ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗದಿರಲಿ ಎಂದು ಸರಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು; ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನ ಸದ್ಭಳಕೆ ಮಾಡಿಕೊಂಡರೆ ‘ನರೇಗಾ ಯೋಜನೆ’ (Narega Scheme) ವರವಾಗಲಿದೆ.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಕೈ ಹಿಡಿಯುವ ಉದ್ಯೋಗ ಖಾತರಿ

ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂಪಾಯಿಗಳ (5 lakh rupees) ವರಗೆ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ (Mahatma Gandhi Narega Scheme) ಮೂಲಕ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಬರಗಾಲದಲ್ಲಿ ನರೇಗಾ ಯೋಜನೆ ಸದ್ಭಳಕೆ ಮಾಡಿಕೊಳ್ಳಲು ಹಳ್ಳಿಹಳ್ಳಿಗಳಲ್ಲಿ ಜನಜಾಗೃತಿ (public awareness) ಮೂಡಿಸಲಾಗುತ್ತಿದೆ. ಈ ಸಂಬ೦ಧ ಆಯಾಯ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮ ಮಟ್ಟಗಳಲ್ಲಿ ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡಿಗೆ’ ಎಂಬ ವಿಶೇಷ ರೋಜಗಾರ್ ದಿವಸ ಅಭಿಯಾನ ನಡೆಸಲಾಗುತ್ತಿದೆ.
ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ 2024-25ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ವೈಯಕ್ತಿಕ ಕಾಮಗಾರಿಗಳ ಸೌಲಭ್ಯ (Facility of personal works) ಪಡೆಯಲು ಇಚ್ಛಿಸುವ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ (Gram Panchayat) ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ (Rural area) ಜನರು ತಮಗೆ ಬೇಕಾದ ವೈಯಕ್ತಿಕ ಕಾಮಗಾರಿ ಪಡೆಯಲು ಸಂಬ೦ಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ವೈಯಕ್ತಿಕ ಕಾಮಗಾರಿಯ ಹೆಸರು ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಯಾವುದಕ್ಕೆಲ್ಲ ಸಿಗಲಿದೆ ನೆರವು?

ರೈತರು (Farmers) ಹಾಗೂ ಭೂರಹಿತ ಕೃಷಿ ಕೂಲಿಕಾರರು (Landless agricultural labourers) ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ (Self Employed) ಮಾಡಲಿಚ್ಛಿಸುವವರು ಶೆಡ್ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿ, ರೈತರು ಕೃಷಿ ಹೊಂಡ (agricultural pit), ಕ್ಷೇತ್ರ ಬದು, ತೋಟಗಾರಿಕೆ ಬೆಳೆ (Horticulture crop), ರೇಷ್ಮೆ ಹಾಗೂ ಅರಣ್ಯ ಬೆಳೆಗಳು (Forest crops) ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆಯಬಹುದು. ಇನ್ನೊಂದೆಡೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ಕಾಮಗಾರಿಗಳಿಗಾಗಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ವೈಯಕ್ತಿಕ ಕಾಮಗಾರಿ ಹಾಗೂ ಅವುಗಳಿಗೆ ಲಭ್ಯವಾಗುವ ಅಂದಾಜು ಮೊತ್ತದ ವಿವರ (Details of estimated amount) ಈ ಕೆಳಗಿನಂತಿದೆ:
 • ಕೃಷಿ ಹೊಂಡ : 15x15x3 ಮೀಟರ್ ₹1,49,000, 12x12x3 ಮೀಟರ್ ₹92,000, 10x10x3 ಮೀಟರ್ ₹63,000, 9x9x3 ಮೀಟರ್ ₹52,000
 • ತೆರೆದ ಬಾವಿ : ₹1,50,000
 • ಕೊಳವೆ ಬಾವಿ ಮರುಪೂರಣ : ₹27,000
 • ಜಮೀನು ಸಮತಟ್ಟು : ₹10,00
 • ಕಂದಕ ಬದು ನಿರ್ಮಾಣ : ₹35,000 ದಿಂದ ₹84,000
 • ಬಚ್ಚಲು ಗುಂಡಿ : ₹11,000
 • ಪೌಷ್ಠಿಕ ತೋಟ : ₹4,915
 • ದನದ ದೊಡ್ಡಿ : ₹57,000
 • ಕುರಿ ದೊಡ್ಡಿ : ₹70,000
 • ಮೇಕೆ ಶೆಡ್ : ₹70,000
 • ಹಂದಿ ಶೆಡ್ : ₹87,000
 • ಕೋಳಿ ಶೆಡ್ : ₹60,000
 • ಇರುಳ್ಳಿ ಉಗ್ರಾಣ : ಮನರೇಗಾ ₹37,138, ತೋಟಗಾರಿಕೆ ಇಲಾಖೆ ₹35,000, ಫಲಾನುಭವಿ ₹25,862, ಒಟ್ಟು ₹98,000
 • ಎರೆ ಹುಳು ಗೊಬ್ಬರ ತೊಟ್ಟಿ : ₹20,000

ಇದನ್ನೂ ಓದಿ: Weather Report 2023 : ಸರಾಸರಿ ಮಳೆಯಾದರೂ ಬರಗಾಲ ಹೇಗೆ ಬಂತು? ಹವಾಮಾನ ಇಲಾಖೆ ರಿಪೋರ್ಟ್ ಇಲ್ಲಿದೆ…

ನರೇಗಾ ನೆರವು ಪಡೆಯುವುದು ಹೇಗೆ?

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (Employment Guarantee Scheme) ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಜಾಬ್ ಕಾರ್ಡ್ (Job card) ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ (Bank Account Number), ಆಧಾರ್ ಸಂಖ್ಯೆ (Aadhaar Number) ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು. ಉದ್ಯೋಗ ಚೀಟಿ ಪಡೆಯಲು ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ (Form-6) ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯಿರಿ ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ ಆ್ಯಪ್ (Kayaka Mitra Mobile App) ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಬರಗಾಲದ ಸಮಯದಲ್ಲಿ ನಿಜಕ್ಕೂ ನರೆಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ದೊಡ್ಡ ವರದಾನವಾಗಿದೆ.

ಇದನ್ನೂ ಓದಿ: Kisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ

ಯಾರಿಗೆಲ್ಲ ಸಿಗಲಿದೆ ಈ ನೆರವು?

ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (100 days) ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳು ಉದ್ಯೋಗ ಖಾತರಿ ನೀಡಲಾಗುತ್ತಿದೆ. ಮಹಿಳೆ ಮತ್ತು ಪುರುಷರು ಮಾತ್ರವಲ್ಲದೇ ವಿಶೇಷ ಚೇತನರು ಮತ್ತು 65 ವರ್ಷ ಮೇಲ್ಪಟ್ಟ ವೃದ್ಧರಿಗೂ ಇಲ್ಲಿ ವಿನಾಯಿತಿ ಸಹಿತ ಅವಕಾಶಗಳಿವೆ. ಈ ಯೋಜನೆಯಡಿ ನೋಂದಾಯಿತ ಒಂದು ಅರ್ಹ ಕುಟುಂಬ ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರೂಪಾಯಿ (Maximum Rs 5 Lakhs in lifetime) ವರೆಗೆ ನೀಡಲಾಗುವ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಬರಗಾಲದಿಂದ ಕಂಗಾಲಾಗಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ (Small and very small farmers) ಈ ನೆರವು ಅತ್ಯಂತ ಸಹಕಾರಿಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು (Female headed households), ವಿಕಲಚೇತನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು (Land Reform Beneficiaries), ವಸತಿ ಯೋಜನೆಯ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ (Forest Rights Act 2006) ಫಲಾನುಭವಿಗಳು ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸರಕಾರ ಈಚೆಗೆ ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.
SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024
WhatsApp Group Join Now
Telegram Group Join Now

Related Posts

error: Content is protected !!