Govt SchemesNews

New facilities for Govt employees : ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಸೌಲಭ್ಯಗಳು

ನೂತನ ಸೌಲಭ್ಯಗಳು ಹಾಗೂ ಹೊಸ ಬೇಡಿಕೆಗಳ ಪಟ್ಟಿ ಪ್ರಕಟಿಸಿದ ಷಡಕ್ಷರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Karnataka State Govt Employees Association) ಅಧ್ಯಕ್ಷರಾಗಿ ಪುನರ್ ಆಯ್ಕೆಯಾದ ಬೆನ್ನಲ್ಲೆ ಸಿ ಎಸ್ ಷಡಾಕ್ಷರಿ ಅವರು ಹೊಸ ವರ್ಷದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿರುವ ನೂತನ ಸೌಲಭ್ಯಗಳು ಹಾಗೂ ಹೊಸ ಬೇಡಿಕೆಗಳ ಪಟ್ಟಿ ಪ್ರಕಟಿಸಿದ್ದಾರೆ.

WhatsApp Group Join Now
Telegram Group Join Now

ಕಳೆದ ವರ್ಷ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗಾಗಿ ರಾಜ್ಯ ಸರ್ಕಾರದೊಂದಿಗೆ ರಚ್ಚೆ ಹಿಡಿದು ಹೋರಾಡಿ ಜಾರಿಯಾಗುವಂತೆ ಮಾಡಿದ್ದ ಸರ್ಕಾರಿ ನೌಕರರ ಸಂಘ ಇದೀಗ ಮತ್ತಷ್ಟು ಉತ್ಸಾಹದೊಂದಿಗೆ ಹೊಸ ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿದೆ.

ಇದನ್ನೂ ಓದಿ: Co-operative Central Bank Recruitment 2025 : ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

100 ರೂ. ಬಾಡಿಗೆಗೆ ಹೈಟೆಕ್ ವಸತಿ ಕೊಠಡಿ

ರಾಜ್ಯದ ವಿವಿಧ ಜಿಲ್ಲೆಗಳಿಂದ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಬರುವ ಸರಕಾರಿ ಅಧಿಕಾರಿ, ನೌಕರರಿಗಾಗಿ ಬೆಂಗಳೂರಿನಲ್ಲಿ 300 ಕೊಠಡಿಗಳ ಹೊಸ ಹೈಟೆಕ್ ವಸತಿ ಸಮುಚ್ಚಯ ನಿರ್ಮಾಣಕ್ಕೆ ಸಂಘ ನಿರ್ಧರಿಸಿದೆ. ಬೆಂಗಳೂರು ನಗರ ಕೇಂದ್ರ ಭಾಗದಲ್ಲಿ ನಿರ್ಮಾಣವಾಗಲಿರುವ ಈ ವಸತಿ ಸಮುಚ್ಛಯದಲ್ಲಿ ಕೇವಲ 100 ರೂ. ಬಾಡಿಗೆಗೆ ಹೈಟೆಕ್ ಸೌಲಭ್ಯಗಳ ಕೊಠಡಿಗಳು ಸಿಗಲಿವೆ.

ಈ ವಸತಿ ಸಮುಚ್ಚಯ ಆವರಣದಲ್ಲೇ ಸರಕಾರಿ ನೌಕರರ ಕುಟುಂಬದ ಸದಸ್ಯರ ಕೌಟುಂಬಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗುವಂತೆ ಕನ್ವೆರ್ಷನ್ ಹಾಲ್ ಕೂಡ ನಿರ್ಮಾಣ ಮಾಡಲಾಗುತ್ತಿದ್ದು; ನೌಕರರಿಂದ ಕೇವಲ ನಿರ್ವಹಣಾ ಶುಲ್ಕವನ್ನು ಮಾತ್ರ ಪಡೆದುಕೊಳ್ಳಲಾಗುತ್ತದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿ ತಿಂಗಳು ₹5000 ಪಿಂಚಣಿ ಪಡೆಯಬೇಕೆ? | ಕೂಡಲೇ ಅಟಲ್ ಪಿಂಚಣಿ ಯೋಜನೆಯಡಿ ಈ ಕೆಲಸ ಮಾಡಿ…

ಆರೋಗ್ಯ ಸಂಜೀವಿನಿ ಜಾರಿ

ಸರ್ಕಾರಿ ನೌಕರರ ಆರೋಗ್ಯ ಭದ್ರತೆಯ ಬಹುದಿನಗಳ ಬೇಡಿಕೆಯಾದ ಆರೋಗ್ಯ ಸಂಜೀವಿನಿ ಯೋಜನೆಯು ಇದೇ ಜನವರಿ 3ನೇ ವಾರದಲ್ಲಿ ಸಾಕಾರಗೊಳ್ಳಲಿದೆ. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ (Old Pension Scheme- OPS) ಕೂಡ ಮರು ಸ್ಥಾಪನೆಯಾಗಲಿದೆ.

2026ರಿಂದ ಕೇಂದ್ರ ಸರಕಾರಿ ನೌಕರರ ಮಾದರಿ ವೇತನ ಹಾಗೂ ಭತ್ಯೆಗಳನ್ನು ನೀಡಲು 7ನೇ ರಾಜ್ಯ ವೇತನ ಆಯೋಗ ಶಿಫಾರಸು ಮಾಡಿದೆ. ಸರಕಾರಿ ನೌಕರ ಆಕಸ್ಮಿಕವಾಗಿ ಮೃತಪಟ್ಟರೆ ಒಂದು ಕೋಟಿ ರೂ. ವಿಮಾ ಪರಿಹಾರ ಒದಗಿಸುವ ಯೋಜನೆ ಜಾರಿ ಸಂಬAಧ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಸಂಘದ ಅಧ್ಯಕ್ಷರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…

ಸರ್ಕಾರಿ ನೌಕರರ ಹೊಸ ಬೇಡಿಕೆಗಳ ಪಟ್ಟಿ

  • ಸರ್ಕಾರಿ ನೌಕರರ ಕೆಲಸದ ದಿನಗಳನ್ನು ವಾರದಲ್ಲಿ 5 ದಿನ ಮಾತ್ರ ನಿಗದಿಪಡಿಸಬೇಕು.
  • ಹಬ್ಬದ ಮುಂಗಡವನ್ನು 50,000 ರೂ.ಗೆ ಹಾಗೂ ನೌಕರರ ಶವಸಂಸ್ಕಾರ ವೆಚ್ಚವನ್ನು 25,000 ರೂ.ಗೆ ಹೆಚ್ಚಿಸಬೇಕು.
  • ಇಲಾಖಾ ವಿಚಾರಣೆಯನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಅಧಿಕೃತ ಆದೇಶ ಹೊರಡಿಸಬೇಕು. ನೌಕರರ ಗಳಿಕೆ ರಜೆಯನ್ನು 340ಕ್ಕೆ ಹೆಚ್ಚಿಸಬೇಕು.
  • ಎಲ್ಲ ಇಲಾಖೆಗಳಲ್ಲಿ A, B, C ಮತ್ತು D ವೃಂದಗಳ ಅಧಿಕಾರಿ, ನೌಕರರಿಗೆ ಕೌನ್ಸೆಲಿಂಗ್ ವರ್ಗಾವಣೆ ಕಾಯಿದೆ ಜಾರಿಗೆ ತರಬೇಕು.
  • ನೌಕರರ ವಿರುದ್ಧ ದೂರು ಆಧರಿಸಿ ತನಿಖೆಯಿಂದ ಆಪಾದನೆ ಸುಳ್ಳಾದರೆ, ದೂರುದಾರರ ವಿರುದ್ಧ ಪ್ರಕರಣ ದಾಖಲಿಸುವ ನಿಯಮ ಜಾರಿಯಾಗಬೇಕು.
  • 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಇನ್ನೂ ಬಾಕಿ ಇರುವ ನಾನಾ ಭತ್ಯೆ ಮತ್ತು ಸೌಲಭ್ಯಗಳ ಜಾರಿಗೆ ಆದೇಶ ಹೊರಡಿಸಬೇಕು.
  • ಶಿಕ್ಷಕರನ್ನು ಪತ್ಯೇತರ ಚಟುವಟಿಕೆಗಳ ಒತ್ತಡದಿಂದ ಮುಕ್ತಗೊಳಿಸಬೇಕು.
  • ಹಲವು ಇಲಾಖೆಗಳಲ್ಲಿ ಬಾಕಿ ಇರುವ ವೃಂದ ಮತ್ತು ನೇಮಕ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು.

ಇದನ್ನೂ ಓದಿ: ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ Village Map information

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!