ಸರಕಾರಿ ಯೋಜನೆ

New Ration Card Application : ಹೊಸ ರೇಷನ್ ಕಾರ್ಡ್’ಗೆ ಕೂಡಲೇ ಅರ್ಜಿ ಸಲ್ಲಿಸಿ: ಎರಡು ದಿನ ಮಾತ್ರ ಅವಕಾಶ

WhatsApp Group Join Now
Telegram Group Join Now

New Ration Card Application  : ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎರಡು ಮಾತ್ರ ಅವಕಾಶವಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕಾಯ್ದು ಕೂತ ಅರ್ಹ ಫಲಾನುಭವಿಗಳಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ (Food, Civil Supplies Department) ದಿಡೀರ್ ಸಿಹಿಸುದ್ದಿ ನೀಡಿದ್ದು; ಸದ್ಯಕ್ಕೆ ಕೇವಲ ಎರಡು ದಿನಗಳ ಮಟ್ಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಇದರ ಜೊತೆಗೆ ಸರಕಾರದ ವಿವಿಧ ಯೋಜನೆಗಳಿಗೂ ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ. ಆದರೆ ವರ್ಷಗಳಿಂದ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು; ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಮೇಲಿಂದ ಮೇಲೆ ಆಗ್ರಹಗಳು ಕೇಳಿ ಬರುತ್ತಲೇ ಇದ್ದವು.

ಇದನ್ನೂ ಓದಿ: Solar Power for Agricultural Pumpsets : 40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ | ಯಾವೆಲ್ಲ ರೈತರಿಗೆ ಸಿಗಲಿದೆ ಸೋಲಾರ್ ಭಾಗ್ಯ?

ಎರಡು ದಿನ ಮಾತ್ರ ಅವಕಾಶ

ಈಚೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಾಶಾಸ್ತ್ರ ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ (K H Muniyappa) ಅವರು ಇದೇ ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದರು. ಆದರೆ ಇದೀಗ ಆಹಾರ ಇಲಾಖೆಯು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಎರಡು ದಿನ ತಾತ್ಕಾಲಿಕ ಅವಕಾಶ ಕಲ್ಪಿಸಿದೆ.

ಹೊಸದಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್’ಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದರ ಜೊತೆಗೆ ಪಡಿತರ ಚೀಟಿ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಇದೇ ಮಾರ್ಚ್ 8ರ ಶುಕ್ರವಾರ ಮತ್ತು ಮಾರ್ಚ್ 9ರ ಶನಿವಾರ ದಂದು (March 8 and March 9, 2024) ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಎರಡು ದಿನಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಕೂಡ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

ಹೊಸ ರೇಷನ್ ಕಾರ್ಡ್ ಪಡೆಯಲು ಆನ್‌ಲೈನ್ ವಿಧಾನದಲ್ಲಿ ಹೊಸ ಅರ್ಜಿ ಸಲ್ಲಿಸಬಹುದು. ಹೊಸದಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಈ ಕೆಳಗಿನ ದಾಖಲಾತಿಗಳು ಬೇಕು…

  • ವಾಸಸ್ಥಳದ ಪುರಾವೆ (ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್)
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ
  • ವಾರ್ಡ್ ಕೌನ್ಸಿಲರ್ ನೀಡಿದ ಸ್ವಯಂ ಘೋಷಣೆ ಪ್ರಮಾಣಪತ್ರ

ಅರ್ಜಿ ಎಲ್ಲಿ ಸಲ್ಲಿಸಬೇಕು?

ಮೇಲ್ಕಾಣಿಸಿದ ಈ ಎಲ್ಲಾ ದಾಖಲಾತಿಗಳೊಂದಿಗೆ Secugen ಬಯೋಮೆಟ್ರಿಕ್ ಸೌಲಭ್ಯವಿರುವ ನಿಮ್ಮ ಹತ್ತಿರದ CSC ಸೆಂಟರ್ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಸೈಬರ್ ಸೆಂಟರ್‌ಗಳಿಗೆ ಹೋಗಿ ದಾಖಲೆ ನೀಡಿ, ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಅಧಿಕೃತ ವೆಬ್‌ಸೈಟ್ : ahara.kar.nic.in

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

WhatsApp Group Join Now
Telegram Group Join Now

Related Posts

error: Content is protected !!