ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ (NatioNal HealtH Mission – NHM) ವಿವಿಧ ವೃಂದದ ನರ್ಸ್ (Nurse Recruitment) ಹಾಗೂ ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆಯ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Railway Teacher Recruitment 2025 : ರೈಲ್ವೆ ಇಲಾಖೆ ಶಿಕ್ಷಕರ ನೇಮಕಾತಿ
ನೇಮಕಾತಿ ಕುರಿತ ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ : ಆರೋಗ್ಯ ಇಲಾಖೆ
- ಹುದ್ದೆಗಳ ಹೆಸರು : ನರ್ಸ್ ಮತ್ತು ಅರೆ ವೈದ್ಯಕೀಯ ಹುದ್ದೆಗಳು
- ಒಟ್ಟು ಖಾಲಿ ಹುದ್ದೆಗಳು : 34+23=57 ಹುದ್ದೆಗಳು
- ಅರ್ಜಿ ಸಲ್ಲಿಕೆ : ಆನ್ಲೈನ್ ಮುಖಾಂತರ
- ಉದ್ಯೋಗ ಸ್ಥಳ : ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆ
ಹುದ್ದೆಗಳ ವಿವರ
ಬಳ್ಳಾರಿ ಜಿಲ್ಲೆ ಹುದ್ದೆಗಳ ವಿವರ
ನರ್ಸಿಂಗ್ ಆಫೀಸರ್ | 03 |
ಸ್ಟಾಫ್ ನರ್ಸ್ | 13 |
ಪ್ರಯೋಗಾಲಯ ತಂತ್ರಜ್ಞ | 03 |
ಕಿರಿಯ ಆರೋಗ್ಯ ಸಹಾಯಕ | 08 |
ಆಡಿಯೋಟ್ರಿಕ್ ಅಸಿಸ್ಟೆಂಟ್ | 01 |
ಇನ್ಸ್ಟ್ರಕ್ಚರ್ | 01 |
ಒಟ್ಟು ಹುದ್ದೆಗಳು | 34 |
ಇದನ್ನೂ ಓದಿ: CBSE Recruitment 2025 : ಸಿಬಿಎಸ್ಇ ನೇಮಕಾತಿ 2025
ಚಿಕ್ಕಬಳ್ಳಾಪುರ ಜಿಲ್ಲೆ ಹುದ್ದೆಗಳ ವಿವರ
ಪಿಎಸ್ಸಿಒ : 03 | 03 |
ಸ್ಟಾಫ್ ನರ್ಸ್ : 19 | 19 |
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಎಎಎಂ : 01 | 01 |
ಒಟ್ಟು ಹುದ್ದೆಗಳು : 23 | 23 |
ಶೈಕ್ಷಣಿಕ ಅರ್ಹತೆ
ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ಎಎನ್ಎಂ, ಜಿಎನ್ಎಂ, ಡಿಪ್ಲೊಮಾ, ಬಿಎಸ್ಸಿ ನರ್ಸಿಂಗ್, ಬಿಡಿಎಸ್, ಬಿಎಎಂಎಸ್, ಬಿಎಚ್ಎಂಎಸ್, ಬಿಯುಎಂಎಸ್, ಬಿವೈಎನ್ಎಸ್, ಎಂಎಸ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ ಮತ್ತು ವೇತನ ವಿವರ
ಅಭ್ಯರ್ಥಿಗಳು ಕನಿಷ್ಠ 35ರಿಂದ 45 ವರ್ಷದ ಒಳಗಿರಬೇಕು. ನಿಯಮಾನುಸಾರ ವರ್ಗ, ಪಂಗಡವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ನಿನ್ನು ಈ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 12,525 ರಿಂದ 30,000 ರೂ. ವರೆಗೂ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: MGNREGA Karnataka : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ
ಆಯ್ಕೆ ಪ್ರಕ್ರಿಯೆ ಹೇಗೆ?
ರೋಸ್ಟರ್ ಹಾಗೂ ಮೆರಿಟ್ ಪಟ್ಟಿ, ದಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಸುವ ಮೂಲಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜನವರಿ 13ರೊಳಗೆ ಅರ್ಜಿ ಸಲ್ಲಿಸಬೇಕು. ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಎಎಎಂ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜನವರಿ 16ರಂದು, ಉಳಿದ ಹುದ್ದೆಗಳಿಗೆ ಜನವರಿ 17ರಂದು ಜಿಲ್ಲಾ ಆರ್ಸಿಎಚ್ ಅಧಿಕಾರಿಗಳ ಕಚೇರಿಗೆ ದಾಖಲೆ ಪರಿಶೀಲನೆಗೆ ಹಾಜರಿರಬೇಕು.
ಬಳ್ಳಾರಿ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜನವರಿ 13ರೊಳಗೆ ಅರ್ಜಿ ಸಲ್ಲಿಸಬೆಕು. ದಾಖಲೆ ಪರಿಶೀಲನೆ ಮತ್ತು ನೇರ ಸಂದರ್ಶನಕ್ಕೆ ಜನವರಿ 15ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣ, ಬಳ್ಳಾರಿ ಈ ವಿಳಾಸಕ್ಕೆ ಆಗಮಿಸಬೇಕು.
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಜನವರಿ 27ರಂದು ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಮೆರಿಟ್ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜನವರಿ 29ರ ವರೆಗೆ ಅವಕಾಶ ನೀಡಲಾಗುತ್ತದೆ.
ಅಧಿಸೂಚನೆ
ಬಳ್ಳಾರಿ : Download
ಚಿಕ್ಕಬಳ್ಳಾಪುರ : Download
ಇದನ್ನೂ ಓದಿ: IPPB SO Recruitment 2025 : ಪೋಸ್ಟ್ ಪೇಮೆಂಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ