ಪಶುಪಾಲನೆಹಣಕಾಸು

NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ

WhatsApp Group Join Now
Telegram Group Join Now

ಕುರಿ-ಮೇಕೆ, ಕೋಳಿ, ಹಂದಿ ಸಾಕಣೆಗೆ ಈ ಯೋಜನೆಯಲ್ಲಿ 10 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೂ ಸಾಲ ಸೌಲಭ್ಯ ಮತ್ತು ಅರ್ಧ ಭಾಗ ಸಾಲ ಸಬ್ಸಿಡಿ ರೂಪದಲ್ಲಿ ಮನ್ನಾ ಆಗಲಿದೆ. ಯೋಜನೆ ಸಂಪೂರ್ಣ ಮಾಹಿತಿ ಇಲ್ಲಿದೆ…

NLM Scheme Loan : ಅಸಂಘಟಿತರಾಗಿರುವ ರೈತರು / ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಹಾಗೂ ಪ್ರಗತಿಪರ ರೈತರು ಮತ್ತು ಉದ್ದಿಮೆದಾರರನ್ನು ಪರಿಪೂರ್ಣ ಉದ್ದಿಮೆದಾರರನ್ನಾಗಿ ಪರಿವರ್ತಿಸುವ ಸದುದ್ದೇಶದೊಂದಿಗೆ ಕೇಂದ್ರ ಸರ್ಕಾರವು ‘ಆತ್ಮ ನಿರ್ಭರ ಅಭಿಯಾನ ಯೋಜನೆ’ (Atma Nirbhar Abhiyan Yojana) ಹಮ್ಮಿಕೊಂಡಿದೆ. ಈ ಯೋಜನೆಯಡಿ ಕೃಷಿ, ಪಶುಪಾಲನೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ.

ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ, ಮೊಟ್ಟೆ, ಉಣ್ಣೆ ಉತ್ಪಾದನೆ ಹೆಚ್ಚಿಸುವುದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಜಾನುವಾರುಗಳ ಉತ್ಪನ್ನಗಳನ್ನು ಒದಗಿಸುವುದು, ತನ್ಮೂಲಕ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಪ್ರೋತ್ಸಾಸಿಸುವುದು ಈ ಯೋಜನೆಗಳ ಗುರಿಯಾಗಿವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಯಾವೆಲ್ಲ ಯೋಜನೆಗಳು?

 1. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (NLM-ED)
 2. ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ (PM-FME)
 3. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಲಭ ಬಡ್ಡಿ ದರದಲ್ಲಿ ಪಶುಪಾಲನಾ ಚಟುವಟಿಕೆಗಳಿಗೆ ದುಡಿಮೆ ಬಂಡವಾಳ ನೀಡುವುದು
 4. ಪಶುಸಂಗೋಪನೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ನಿಧಿ (AHIDF)

…ಹೀಗೆ ಕೇಂದ್ರ ಸರಕಾರದ ಆತ್ಮ ನಿರ್ಭರ ಅಭಿಯಾನ ಯೋಜನೆಯಡಿ ವಿಶೇಷ ಸಾಲ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು; ಇಲ್ಲಿ ‘ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ’ಯಡಿ (National Livestock Mission Scheme – NLM) ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ’ದಡಿ ಸಿಗುವ ಸಾಲ, ಸಹಾಯಧನ ಹಾಗೂ ಇತರೆ ಮಾಹಿತಿ ಬಗ್ಗೆ ತಿಳಿಯೋಣ.

ಇದನ್ನೂ ಓದಿ: Kisan Credit Card loan : ಪಶುಪಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು | ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯಧನ

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.

ಯಾವ ಘಟಕಕ್ಕೆ ಎಷ್ಟು ಸಾಲ ಮತ್ತು ಸಹಾಯಧನ?

ಇದನ್ನೂ ಓದಿ: Weather Report 2023 : ಸರಾಸರಿ ಮಳೆಯಾದರೂ ಬರಗಾಲ ಹೇಗೆ ಬಂತು? ಹವಾಮಾನ ಇಲಾಖೆ ರಿಪೋರ್ಟ್ ಇಲ್ಲಿದೆ…

ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು

 1. ಯೋಜನಾ ವರದಿ (DPR)
 2. ಭೂ ದಾಖಲೆಗಳು (RTC-Land records)
 3. ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ GPS ಫೋಟೋ (Project site Photo)
 4. ಪಾನ್ ಕಾರ್ಡ್ (PAN)
 5. ಆಧಾರ್ ಕಾರ್ಡ್ (Aadhar)
 6. ಚುನಾವಣೆ ಗುರುತಿನ ಚೀಟಿ (Voter ID)
 7. 3 ವರ್ಷಗಳ ಆದಾಯ ತೆರಿಗೆ ಪಾವತಿಸಿರುವ ವರದಿ (Last 3 years IT returns)
 8. ಕಳೆದ 6 ತಿಂಗಳ ಬ್ಯಾಂಕ್ ವಹಿವಾಟು ವಿವರ (Bank A/C statement for last 6 months)
 9. ರದ್ದುಪಡಿಸಿದ ಬ್ಯಾಂಕ್ ಚೆಕ್ ಪ್ರತಿ (Cancelled cheque)
 10. ಪಾಸ್‌ಪೋರ್ಟ್ ಅಳತೆಯ ಫೋಟೋ (Applicant passport size photo)
 11. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (Education certificate)
 12. ತರಬೇತಿ ಪ್ರಮಾಣ ಪತ್ರ (Training certificate)
 13. ಅನುಭವ ಹೊಂದಿರುವ ಕುರಿತು ಪ್ರಮಾಣ ಪತ್ರ (Experience certificate / letter)

ಇದನ್ನೂ ಓದಿ: Sheep-Goat & Dairy Farminf Free training : ರೈತರಿಗೆ ಉಚಿತ ಆಡು ಕುರಿ, ಹೈನುಗಾರಿಕೆ ತರಬೇತಿ | ಊಟ ವಸತಿ ಕೂಡ ಪ್ರೀ | ಮೊಬೈಲ್‌ನಲ್ಲೇ ಹೆಸರು ನೋಂದಾಯಿಸಿ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಈ ಕೆಳಕಂಡ ತಾಲ್ಲೂಕುಗಳ ಮುಖು ಪಶುವೈದ್ಯಾಧಿಕಾರಿಗಳನ್ನು (ಆಡಳಿತ) ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರಾ (ಆಡಳಿತ) ಡಾ. ಜಿ ಎಂ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 • ನೆಲಮಂಗಲ 9845637387
 • ದೇವನಹಳ್ಳಿ 9480910509
 • ದೊಡ್ಡಬಳ್ಳಾಪುರ 9845305839
 • ಹೊಸಕೋಟೆ 9448988649

ವೆಬ್‌ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

BPNL Recruitment 2024 : ಪಶುಪಾಲನಾ ನಿಗಮದಲ್ಲಿ SSLC, PUC ಪಾಸಾದವರಿಗೆ 1884 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!