ಉದ್ಯೋಗ

NWKRTC Driver recruitment 2024 : ಪಿಯುಸಿ ಪಾಸಾದವರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

NWKRTC Driver recruitment 2024 : ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (North Western Karnataka Road Transport Corporation – NWKRTC) ಖಾಲಿ ಇರುವ ಚಾಲಕರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ಧಾರವಾಡ, ಚಿಕ್ಕೋಡಿ, ಹಾವೇರಿ ಹಾಗೂ ಶಿರಸಿ ವಿಭಾಗದ ವಿವಿಧ ಡಿಪೋಗಳ ಖಾಲಿ ಇರುವ ಬಸ್ ಚಾಲಕರ ಹುದ್ದೆಗಳ ಭರ್ತಿ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

NWKRTC Driver recruitment 2024 ನೇಮಕಾತಿ ಸಂಕ್ಷಿಪ್ತ ವಿವರ

 • ನೇಮಕಾತಿ ಸಂಸ್ಥೆ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ
 • ಖಾಲಿ ಹುದ್ದೆಗಳು : 180 ಹುದ್ದೆಗಳು
 • ಹುದ್ದೆಗಳ ಹೆಸರು : ಬಸ್ ಚಾಲಕರು (Bus Driver)
 • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ

ಖಾಲಿ ಹುದ್ದೆಗಳ ವಿವರ

ಕರ್ನಾಟಕ ರಾಜ್ಯ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳ ನೇಮಕಾತಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ:

 • ಧಾರವಾಡ ವಿಭಾಗದ ಡಿಪೋ (ಧಾರವಾಡ, ಸವದತ್ತಿ,ರಾಮದುರ್ಗ, ಹಳಿಯಾಳ, ದಾಂಡೇಲಿ) : 30 ಹುದ್ದೆಗಳು
 • ಚಿಕ್ಕೋಡಿ ವಿಭಾಗದ ಡಿಪೋ (ಚಿಕ್ಕೋಡಿ, ಸಂಕೇಶ್ವರ, ಗೋಕಾಕ್, ನಿಪ್ಪಾಣಿ, ರಾಯಬಾಗ್, ಅಥಣಿ, ಹುಕ್ಕೇರಿ) : 40 ಹುದ್ದೆಗಳು
 • ಹಾವೇರಿ ವಿಭಾಗದ ಡಿಪೋ (ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು, ಹಾನಗಲ್, ಬ್ಯಾಡಗಿ, ಸವಣೂರು) : 50 ಹುದ್ದೆಗಳು
 • ಶಿರಸಿ ವಿಭಾಗದ ಡಿಪೋ (ಶಿರಸಿ, ಕುಮಟಾ, ಕಾರವಾರ, ಭಟ್ಕಳ, ಯಲ್ಲಾಪುರ, ಅಂಕೋಲಾ) : 60 ಹುದ್ದೆಗಳು

ಇದನ್ನೂ ಓದಿ: Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ₹47,650 ರೂಪಾಯಿ ಸಂಬಳ

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳು

 • ಅಭ್ಯರ್ಥಿಯ ಆಧಾರ್ ಕಾರ್ಡ್ (Adhar card)
 • ವಾಹನ ಪರವಾನಗಿ (Driver licence)
 • ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರ (Medical fitness certificate)
 • ಪೊಲೀಸರಿಂದ ಪಡೆದ ಪರಿಶೀಲನಾ ಪ್ರಮಾಣ ಪತ್ರ (Police verification certificate)
 • 2 ಭಾವಚಿತ್ರ (Photos)
 • ವಿದ್ಯಾರ್ಹತೆ ಅಂಕಪಟ್ಟಿಗಳು
 • ಬ್ಯಾಂಕ್ ಖಾತೆ ಪುಸ್ತಕ

NWKRTC Driver recruitment 2024 ಅರ್ಜಿ ಸಲ್ಲಿಸುವುದು ಹೇಗೆ?

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಜಿ ಸಲ್ಲಿಸುವಂತಹ ಆಸಕ್ತ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರವಿರುವ ಅಥವಾ ನೀವು ಅರ್ಜಿ ಸಲ್ಲಿಸುವ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಡಿಪೋಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿಗೆ ಸಂಬ೦ಧಿಸಿದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ 

 • 0821-3588801
 • 8618943513
 • 7259382467

ಇದನ್ನೂ ಓದಿ: BMTC Conductor recruitment 2024 : ಪಿಯುಸಿ ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!