Old Pension Scheme Relaunch-ಸರ್ಕಾರಿ ನೌಕರರಿಗೆ ಮತ್ತೆ ಹಳೇ ಪಿಂಚಣಿ ಗಿಫ್ಟ್ | ಒಪಿಎಸ್ ಮರುಜಾರಿಗೆ ಸಿದ್ಧತೆ
ರಾಜ್ಯದಲ್ಲಿ ಮತ್ತೆ ಹಳೇ ಪಿಂಚಣಿ ವ್ಯವಸ್ಥೆ ಕುರಿತು ಗರಿಗೆದರಿದ ಚರ್ಚೆ

ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆ (Old Pension Scheme -OPS) ಮರುಸ್ಥಾಪನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕಾಗಿ ಸರ್ಕಾರಿ ನೌಕರರು (Govt Employees) ಪಟ್ಟು ಹಿಡಿದಿದ್ದು; ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಸಂಬ೦ಧಿಸಿದ೦ತೆ ರಚನೆಯಾಗಿರುವ ಅಧ್ಯಯನ ಸಮಿತಿ ಒಪಿಎಸ್ ಬಗ್ಗೆ ಒಲವು ವ್ಯಕ್ತಪಡಿಸಿದೆ. ಇಷ್ಟರಲ್ಲೇ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.
ನೂತನ ಪಿಂಚಣಿ ಯೋಜನೆ ರದ್ದಾಗಿ ಪುನಃ ಹಳೇ ಪಿಂಚಣಿ ಯೋಜನೆಯೇ ಮರುಜಾರಿಯಾದರೆ ಬರೋಬ್ಬರಿ 2.45 ಲಕ್ಷ ಸಿಬ್ಬಂದಿ ಹೋರಾಟಕ್ಕೆ ಗೆಲುವು ಸಿಕ್ಕಂತಾಗಲಿದೆ. ಈಗಾಗಲೇ ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ಮರುಜಾರಿಯಾಗಿರುವ ಒಪಿಎಸ್ ರಾಜ್ಯದಲ್ಲೂ ಜಾರಿಯಾಗುವ ಸಂಭವವಿದೆ.
ಇದನ್ನೂ ಓದಿ: IPPB Group Accident Insurance-500 ರೂಪಾಯಿಗೆ 10 ಲಕ್ಷ ವಿಮೆ ಪರಿಹಾರ | ಅಂಚೆ ಇಲಾಖೆಯ ಈ ಅವಕಾಶ ಮಿಸ್ ಮಾಡದೇ ಬಳಸಿಕೊಳ್ಳಿ…
ಭರವಸೆ ಈಡೇರಿಕೆಗೆ ನೌಕರರ ಪಟ್ಟು
ಇಷ್ಟಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೆ ತರಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಉದ್ಘೋಷಿಸಿತ್ತು. ಇದೀಗ ನೀವು ಚುನಾವಣೆಗೂ ಮುಂಚೆ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದು ಕೂತಿದ್ದಾರೆ. ಈ ಸಂಬ೦ಧ ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.
ಹೊಸ ಪಿಂಚಣಿ ಯೋಜನೆಯಲ್ಲಿ (New Pension Scheme NPS) ಹಲವು ಲೋಪದೋಷಗಳನ್ನು ನೌಕರರು ಎತ್ತಿ ತೋರಿಸಿದ್ದಾರೆ. 2004ಕ್ಕಿಂತ ಮುಂಚೆ ನೇಮಕಗೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಹಳೆಯ ಪಿಂಚಣಿಯ ದೊಡ್ಡ ಪ್ರಯೋಜನವೆಂದರೆ ಮೊದಲೇ ಇಂತಿಷ್ಟೇ ಪಿಂಚಣಿ ಬರಬಹುದು ಎಂದು ಲೆಕ್ಕಾಚಾರ ಹಾಕಬಹುದು.
ಇದನ್ನೂ ಓದಿ: Karnataka Budget-ರಾಜ್ಯ ಬಜೆಟ್ 2025: ಸರಕಾರಿ ನೌಕರರ ಈ ನಿರೀಕ್ಷೆಗಳಿಗೆ ಫಲ ಸಿಗುತ್ತಾ?
ಸಿಎಂ, ಡಿಸಿಎಂ ಭರವಸೆ
ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟ ಭರವಸೆ ಕೊಟ್ಟಿದ್ದು; ಇದು ನೌಕರರಲ್ಲಿ ಆಶಾ ಭಾವನೆ ಮೂಡಿಸಿದೆ. ಎನ್ಪಿಎಸ್ ಸಮಿತಿ ಅಂತಿಮ ಸಭೆ ನಡೆಸಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಿದೆ.
ಈ ಕುರಿತ ವರದಿ ಬಂದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಒಪಿಎಸ್ ಜಾರಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಳೇ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ನಮ್ಮ ಮೇಲೆ ನಂಬಿಕೆ ಇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ
ಒಪಿಎಸ್ನಿಂದ ನೌಕರರಿಗೆ ಸಿಗುವ ಪ್ರಯೋಜನಗಳೇನು?
ಹಳೇ ಪಿಂಚಣಿ ಯೋಜನೆ ಮರುಜಾರಿಯಾದರೆ ನೌಕರರಿಗೆ ನಿವೃತ್ತಿ ವೇಳೆ ಹೊಂದಿದ್ದ ಮೂಲ ವೇತನದ ಶೇ.50 ಪಿಂಚಣಿ ಸಿಗಲಿದೆ. ತುಟ್ಟಿಭತ್ಯೆ, ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ಗಳಿಕೆ ಅಥವಾ ಎರಡರಲ್ಲಿ ಒಂದನ್ನು ಪಡೆಯಲು ಅರ್ಹರಾಗುತ್ತಾರೆ. ಹಳೇ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಾಗಿಲ್ಲ.
ಒಪಿಎಸ್’ನಲ್ಲಿ ನಿವೃತ್ತಿಯ ಬಳಿಕ ಕುಟುಂಬಕ್ಕೆ ಪಿಂಚಣಿಯ ಖಾತರಿ ಇರುತ್ತದೆ. ಪಿಂಚಣಿದಾರರು ಮೃತ ಪಟ್ಟರೆ ಅವರು ನಾಮನಿರ್ದೇಶನ ಮಾಡಿದವರಿಗೆ (ನಾಮಿನೀ) ಈ ಸೌಲಭ್ಯ ಮುಂದುವರಿಯುತ್ತದೆ. ವೇತನ ಆಯೋಗದ ಶಿಫಾರಸಿನಂತೆ, ಪ್ರತೀ ವರ್ಷ ಪಿಂಚಣಿ ಮೊತ್ತದಲ್ಲಿ ಸಣ್ಣ ಮಟ್ಟದಲ್ಲಿ ಬದಲಾವಣೆಯಾಗುತ್ತದೆ.
ಇದನ್ನೂ ಓದಿ: Bapuji Seva Kendra Services : ಗ್ರಾಮ ಪಂಚಾಯತಿಯಲ್ಲೇ ಸಿಗಲಿವೆ ಎಲ್ಲ ಸರಕಾರಿ ಸೇವೆಗಳು