ಕೃಷಿಸರಕಾರಿ ಯೋಜನೆ

PM Kisan 16th Installment : ಸಣ್ಣ ರೈತರ ಬ್ಯಾಂಕ್ ಖಾತೆಗೆ 2,000 ರೂಪಾಯಿ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

WhatsApp Group Join Now
Telegram Group Join Now

PM Kisan 16th Installment : ಕಿಸಾನ್ ಸಮ್ಮಾನ್ 16ನೇ ಕಂತಿನ ಹಣ ಸಣ್ಣ ರೈತರ ಬ್ಯಾಂಕ್ ಖಾತೆ ಜಮೆಯಾಗಿದೆ. ನಿಮ್ಮ ಖಾತೆಗೆ ಹಣ ಬರುತ್ತಾ? ಈಗಲೇ ಚೆಕ್ ಮಾಡಿ..

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ (PM Kisan) ಯೋಜನೆಯಡಿ ಸಣ್ಣ ರೈತರ ಖಾತೆಗೆ 16ನೇ ಕಂತಿನ 2,000 ರೂಪಾಯಿ ಹಣ ನಿನ್ನೆ (ಫೆಬ್ರವರಿ 28) ಬಿಡುಗಡೆ ಆಗಲಿದೆ. ಇಲ್ಲಿಯ ವರೆಗೆ ದೇಶದ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಅನ್ನದಾತರ ಬದುಕನ್ನು ಹಸನುಗೊಳಿಸುವುದೇ ಈ ಯೋಜನೆಯ ಗುರಿಯಾಗಿದ್ದು; ಈ ಯೋಜನೆಯಡಿ 16ನೇ ಕಂತಿನ ಮೊತ್ತವನ್ನು ದೇಶದ 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 21,000 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ‘X’ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ವರ್ಷಕ್ಕೆ 6,000 ರೂಪಾಯಿ ನೆರವು

ಕೇಂದ್ರ ಸರ್ಕಾರವು 2018ರ ಡಿಸೆಂಬರ್ 1ರಂದು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿತ್ತು. ಇದರಡಿ ಅರ್ಹ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಟ್ಟು 6,000 ರೂಪಾಯಿ ಮೊತ್ತವನ್ನು ಮೂರು ಕಂತುಗಳಲ್ಲಿ ನೇರವಾಗಿ ಜಮೆ ಮಾಡಲಾಗುತ್ತದೆ.

ಅನರ್ಹರು ನಕಲಿ ದಾಖಲೆ ಸೃಷ್ಠಿಸಿ ಯೋಜನೆಯ ಲಾಭ ಪಡೆಯಲು ಆರಂಭಿಸಿದ್ದರಿ೦ದ ಇಡೀ ಯೋಜನೆ ಭ್ರಷ್ಟಾಚಾರ ಅಖಾಡವಾಗಿದೆ. ನೂರಾರು ಕೋಟಿ ರೂಪಾಯಿ ಸಹಾಯಧನ ಅನರ್ಹರ ಪಾಲಾಗಿದೆ. ಈ ಎಲ್ಲ ಕಾರಣದಿಂದಾಗಿ ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಮತ್ತು ನಿಜವಾದ ರೈತರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ.

ಇದನ್ನೂ ಓದಿ: BMTC Conductor recruitment 2024 : ಪಿಯುಸಿ ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

ನಿಮ್ಮ ಹಣ ಜಮೆ ಚೆಕ್ ಮಾಡಿ…

ನಿಮ್ಮೂರಿನ ಎಷ್ಟು ಜನರಿಗೆ ಪಿಎಂ ಕಿಸಾನ್ 16ನೇ ಕಂತಿನ ಹಣ ಬರುವುದಿಲ್ಲ ಎಂಬುವುದನ್ನು ತಿಳಿಯಲು 👉 ಇಲ್ಲಿ ಕ್ಲಿಕ್ ಮಾಡಿ. ನಿಮಗೆ ಪಿಎಂ ಕಿಸಾನ್ ತಂತ್ರಾಶದ BENIFICIARY LIST (ಫಲಾನುಭವಿಗಳ ಪಟ್ಟಿ) ಡ್ಯಾಶ್‌ಬೋರ್ಡ್ ತೆರೆದುಕೊಳ್ಳುತ್ತದೆ.

ಅದರಲ್ಲಿ State, District, Sub-District, Block, Village ಸೆಲೆಕ್ಟ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮೂರಿನ ಅಷ್ಟೂ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ 16ನೇ ಕಂತಿನ 2,000 ರೂಪಾಯಿ ಸಂದಾಯವಾಗಲಿದೆ.

ಇದನ್ನೂ ಓದಿ: Apply for New Ration card : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

Rain forecast 2024 : ಈ ವರ್ಷ ಮಳೆ ಬೆಳೆ ಸಮೃದ್ಧ | ದೈವವಾಣಿ ಮತ್ತು ಹವಾಮಾನ ಮುನ್ಸೂಚನೆ ಏನು ಹೇಳುತ್ತದೆ?

WhatsApp Group Join Now
Telegram Group Join Now

Related Posts

error: Content is protected !!