ಸರಕಾರಿ ಯೋಜನೆಸುದ್ದಿಗಳು

ಪಿಎಂ ಕಿಸಾನ್ 20,000 ಕೋಟಿ ಹಣ ಬಿಡುಗಡೆ | ಈ ರೈತರ ಖಾತೆಗೆ ಮಾತ್ರ ಜಮಾ ಆಗುತ್ತೆ ಹಣ PM Kisan 17th Installment Money Deposited

WhatsApp Group Join Now
Telegram Group Join Now

PM Kisan 17th Installment Money Deposited : ಎನ್‌ಡಿಎ ಮೈತ್ರಿ ಕೂಟದ ಕೇಂದ್ರ ಸರಕಾರ ಅಧಿಕೃತವಾಗಿ ಅಧಿಕಾರಕ್ಕೆ ಬಂದ ಮೊದಲನೇ ದಿನವೇ ದೇಶದ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ. ಮೂರನೇ ಭಾರಿ ಪ್ರದಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ನರೇಂದ್ರ ಮೋದಿ (Narendra Modi) ಅವರು ರೈತರಿಗೆ ನೀಡುವ ಕಿಸಾನ್ ನಿಧಿಯ ಹಣ ಬಿಡುಗಡೆಗೆ ಸಹಿ ಹಾಕಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ ತಲಾ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2,000 ರೂಪಾಯಿ ನೀಡಲಾಗುತ್ತದೆ.

ಕೇಂದ್ರ ಸರಕಾರವು ಕಳೆದ ಆರು ವರ್ಷಗಳಿಂದ ರೈತರಿಗೆ ವರ್ಷಕ್ಕೆ ತಲಾ 6,000 ರೂಪಾಯಿಯಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಆರ್ಥಿಕ ನೆರವು ನೀಡುತ್ತ ಬರುತ್ತಿದೆ. ಸದರಿ ಯೋಜನೆಯಡಿ 2024ರ 17ನೇ ಕಂತು ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಒಂದೆರಡು ದಿನಗಳಲ್ಲಿ ದೇಶದ 9.3 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ.

ಇದನ್ನೂ ಓದಿ: ಈ ರೈತರ ಖಾತೆಗೆ ₹101.61 ಕೋಟಿ ಬೆಳೆ ವಿಮೆ ಜಮಾ | ನಿಮಗೆ ಹಣ ಬಂತಾ ಈಗಲೇ ಚೆಕ್ ಮಾಡಿ Crop Insurance Bele vime Jama

ಈಗಾಗಲೇ 32,000 ರೂಪಾಯಿ ಜಮೆ

ಇದೊಂದು ಕೇಂದ್ರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಯಾಗಿದ್ದು; ಸದರಿ ಯೋಜನೆಗೆ ಭಾರತ ಸರಕಾರವು ಶೇ.100 ಅನುದಾನ ಒದಗಿಸುತ್ತದೆ. ಪಿಎಂ ಕಿಸಾನ್ ಯೋಜನೆಯು 2018ರ ಡಿಸೆಂಬರ್ 1ರಿಂದ ಜಾರಿಗೆ ಬಂದಿದ್ದು; ಮರು ವರ್ಷ ಅಂದರೆ 2019ರ ಫೆಬ್ರವರಿಯಲ್ಲಿ ಮೊದಲ ಕಂತಿನ ಹಣವನ್ನು ದೇಶದ ರೈತರ ಖಾತೆಗೆ ಜಮಾ ಮಾಡಲಾಗಿದೆ.

ಈವರೆಗೂ ಒಟ್ಟು 16 ಕಂತುಗಳಲ್ಲಿ ಬರೋಬ್ಬರಿ 32,000 ರೂಪಾಯಿ ಫಲಾನುಭವಿ ರೈತರ ಖಾತೆಗೆ ಜಮಾ ಆಗಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಪಿಎಂ ಕಿಸಾನ್ ಯೋಜನೆಯ 16ನೇ ಕಂತನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 17ನೇ ಕಂತಿಗೆ ಸಹಿ ಹಾಕಿದ್ದು; ಒಂದೆರಡು ದಿನಗಳಲ್ಲಿ ಫಲಾನುಭವಿ ರೈತರ ಖಾತೆಗೆ ತಲಾ 2,000 ರೂಪಾಯಿ ಹಣ ಜಮೆಯಾಗಲಿದೆ.

ಇದನ್ನೂ ಓದಿ: ರೈತರಿಗೆ ₹5 ಲಕ್ಷದ ವರೆಗೆ ಬಡ್ಡಿ ಇಲ್ಲದ ಬೆಳೆಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ… Zero Interest Crop Loan

PM-Kisan 17th Installment Money Deposited

ರೈತರ ಖಾತೆಗೆ ನೇರ ಹಣ ವರ್ಗಾವಣೆ

ಯಥಾಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ 17ನೇ ಕಂತಿನ ಹಣವನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಸಹಿ ಹಾಕಿ ಅನುಮತಿ ನೀಡಿರುವುದರಿಂದ ರೈತರ ಖಾತೆಗೆ ಬೇಗನೇ ಹಣ ವರ್ಗಾವಣೆ ಆಗಲಿದೆ.

ಲಕ್ಷಾಂತರ ರೈತರು ಈಗಾಗಲೇ ಇ-ಕೆವೈಸಿ ಸಲ್ಲಿಸಿದ್ದು, ಇನ್ನೂ ಬಹಳಷ್ಟು ರೈತರು ದಾಖಲೆಗಳನ್ನು ಸಲ್ಲಿಸಬೇಕಿದೆ. ಈ ಪೈಕಿ ಹಲವು ಈಗಾಗಲೇ ಮೃತಪಟ್ಟಿದ್ದಾರೆ. ಕೆಲವರು ಹಳ್ಳಿಯಿಂದ ನಗರಕ್ಕೆ ವಲಸೆ ಹೋಗಿದ್ದಾರೆ. ಇನ್ನು ಕೆಲವರು ಈ ಮೊದಲು ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ತಪ್ಪಾಗಿ ನೀಡಿದ್ದಾರೆ. ಈ ಕಾರಣಕ್ಕೆ ಕಿಸಾನ್ ಸಮ್ಮಾನ್ ಹಣ ಸಂಪೂರ್ಣವಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ.

ಇಂತಹ ರೈತರು ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ಅಂಚೆ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳ ಮೂಲಕ ಕಿಸಾನ್ ಸಮ್ಮಾನ್‌ಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಆ ಮೂಲಕ ಕೇಂದ್ರ ಸರಕಾರದಿಂದ ವರ್ಷಕ್ಕೆ 6,000 ರೂಪಾಯಿ ಸಹಾಯಧನ ಪಡೆಯಬಹುದಾಗಿದೆ.

ಇದನ್ನೂ ಓದಿ: ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು Coconut Farming

ಈ ರೈತರ ಖಾತೆಗೆ ಮಾತ್ರ ಹಣ ಜಮಾ

ನಿಮ್ಮೂರಿನ ಎಷ್ಟು ಜನರಿಗೆ ಪಿಎಂ ಕಿಸಾನ್ 14ನೇ ಕಂತಿನ ಹಣ ಬರುವುದಿಲ್ಲ ಎಂಬುವುದನ್ನು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಮೊಬೈಲ್’ನಲ್ಲಿಯೇ ಮಾಹಿತಿ ಪಡೆಯಬಹುದು.

ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ…

ನಿಮಗೆ ಪಿಎಂ ಕಿಸಾನ್ ತಂತ್ರಾಶದ BENIFICIARY LIST (ಫಲಾನುಭವಿಗಳ ಪಟ್ಟಿ) ಡ್ಯಾಶ್‌ಬೋರ್ಡ್ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ಸಬ್ ಜಿಲ್ಲೆ (ತಾಲ್ಲೂಕು), ವಿಲೇಜ್ ಸೆಲೆಕ್ಟ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮೂರಿನ ಅಷ್ಟೂ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ 17ನೇ ಕಂತಿನ 2,000 ರೂಪಾಯಿ ಸಂದಾಯವಾಗಲಿದೆ.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಕಾಲುದಾರಿ, ಬಂಡಿದಾರಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… | ಜಮೀನು ದಾರಿ ಸರಕಾರದ ಆದೇಶವೇನು? Agriculture Land Way Revenue Maps Online

WhatsApp Group Join Now
Telegram Group Join Now

Related Posts

error: Content is protected !!