Govt SchemesNews

ರೈತರು, ಮಹಿಳೆಯರಿಗೆ ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… PM Micro Food Processing Scheme- PMFME

PMFME (ಪಿಎಮ್‌ಎಫ್‌ಇ) ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.50ರಷ್ಟು ಸಬ್ಸಿಡಿ ಸೌಲಭ್ಯ ಸಿಗುತ್ತದೆ. ರೈತರಿಗೆ, ರೈತರ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದ್ದು; ರಾಜ್ಯದಲ್ಲಿ ಸಾವಿರಾರು ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈ ಯೋಜನೆಯ ಲಾಭ ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

WhatsApp Group Join Now
Telegram Group Join Now

ಏನಿದು ಪಿಎಮ್‌ಎಫ್‌ಇ ಯೋಜನೆ?

ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯವು (ಎಂಒಎಫ್‌ಪಿಐ) ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಹಣಕಾಸಿನ ನೆರವು, ತಾಂತ್ರಿಕ ಹಾಗೂ ವ್ಯಾಪಾರ ಬೆಂಬಲವನ್ನು ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಗೆ (PM Micro Food Processing Scheme- PM FME) ಚಾಲನೆ ನೀಡಿದೆ.

ರೈತರಿಗೆ, ರೈತ ಮಹಿಳೆಯರಿಗೆ ವರದಾನ

ರಾಜ್ಯದಲ್ಲಿ ಕೃಷಿ ಇಲಾಖೆಯಿಂದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು; ರೈತ ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ತನ್ನ ಆರ್ಥಿಕ ಆದಾಯ ದ್ವಿಗುಣಗೊಳಿಸಿಕೊಳ್ಳಲು ಈ ಯೋಜನೆಯನ್ನು ರೂಪಿಸಲಾಗಿದೆ. ಸ್ವಉದ್ಯೋಗ ಮೂಲಕ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಅನುಕೂಲವಾಗಿದೆ. ಸಾಂಪ್ರದಾಯಿಕ ಉದ್ಯಮ ನಡೆಸುವವರು ಈಗ ಯಂತ್ರಗಳನ್ನು ಖರೀದಿಸಿ ಉದ್ದಿಮೆಯನ್ನು ಅತ್ಯಾಧುನಿಕವಾಗಿ ಮುನ್ನಡೆಸಬಹುದಾಗಿದೆ.

ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

ಸದರಿ PMFME (ಪಿಎಮ್‌ಎಫ್‌ಇ) ಯೋಜನೆಯಿಂದ ಹೊಸದಾಗಿ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಬಹುದು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲೂ ಅವಕಾಶವಿದೆ. ವೈಯಕ್ತಿಕ ಉದ್ದಿಮೆಗಳಿಗೆ, ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಮತ್ತು ಸ್ವಸಹಾಯ ಸಂಘಗಳಿಗೆ ಶೇ.50 ಸಹಾಯಧನದಲ್ಲಿ ಉದ್ಯಮದ ಅಂದಾಜು ವೆಚ್ಚಕ್ಕೆ ಅನುಗುಣವಾಗಿ ಪಡೆಯಬಹುದಾಗಿದೆ.

ಸಹಾಯಧನ ಎಷ್ಟು ಸಿಗಲಿದೆ?

ಕಿರು ಉದ್ದಿಮೆಗಳ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವ ಈ ಯೋಜನೆಯಡಿ ಸ್ಥಾಪಿಸಲು ಇಚ್ಛಿಸುವ ಉದ್ಯಮದ ಅಂದಾಜು ವೆಚ್ಚಕ್ಕೆ ಅನುಗುಣವಾಗಿ ಸಾಲ ಪಡೆಯಬಹುದು. 30 ಲಕ್ಷ ರೂಪಾಯಿ ವರೆಗಿನ ಸಾಲಕ್ಕೆ ಶೇ.50ರಷ್ಟು ಅಂದರೆ 7.5 ಲಕ್ಷ ರೂಪಾಯಿ ವರೆಗೂ ಸಹಾಯಧನ (ಸಬ್ಸಿಡಿ) ಸಿಗಲಿದೆ. 30 ಲಕ್ಷ ಮೆಲ್ಪಟ್ಟು ಎಷ್ಟೇ ಸಾಲ ಪಡೆದರೂ ಒಟ್ಟು 15 ಲಕ್ಷ ರೂಪಾಯಿ ವರೆಗೆ ಸಹಾಯಧನ (ಸಬ್ಸಿಡಿ) ಸಿಗಲಿದೆ. ಶೇ.35ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ.15ರಷ್ಟು ರಾಜ್ಯ ಸರ್ಕಾರ ಸಬ್ಸಿಡಿ ನೀಡುವ ಮೂಲಕ ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ಯಾವೆಲ್ಲ ಉದ್ಯಮಕ್ಕೆ ಸಿಗಲಿದೆ ಸೌಲಭ್ಯ?

ರೊಟ್ಟಿ / ಚಪಾತಿ ತಯಾರಿಕೆ, ಶಾವಿಗೆ ತಯಾರಿಕೆ, ಹಪ್ಪಳ ತಯಾರಿಕೆ, ಬೇಕರಿ ಪದಾರ್ಥಗಳು, ಚಕ್ಕಲಿ ತಯಾರಿಕೆ, ಸಿರಿಧಾನ್ಯ ಸಂಸ್ಕರಣೆ, ಹಿಟ್ಟು/ರವಾ ತಯಾರಿಕೆ, ಶೇಂಗಾ ಪದಾರ್ಥಗಳು, ಅಡಿಗೆ ಎಣ್ಣೆ ತಯಾರಿಕೆ, ಖಾರಾ ಪುಡಿ ತಯಾರಿಕೆ, ಮಸಾಲೆ ಖಾರ ತಯಾರಿಕೆ, ಹುಣಸೆ ಹಣ್ಣಿನ ಉದ್ಯಮ, ಅರಿಷಿಣ ಪುಡಿ ಉದ್ಯಮ, ಬೆಲ್ಲ ತಯಾರಿಕೆ ಉದ್ಯಮ…

…ಸಾವಯವ ಉದ್ಯಮ, ವಿವಿಧ ಚಟ್ನಿ ಪುಡಿಗಳು, ಕುರುಕಲು ತಿಂಡಿ ತಯಾರಿಕೆ, ಉಪ್ಪಿನ ಕಾಯಿ ತಯಾರಿಕೆ. ಲಿಂಬೆ ಜಾಮ್/ಗುಳಂ, ಹಣ್ಣು/ತರಕಾರಿ ಸಂಸ್ಕರಣೆ, ಅರಿಶಿನ ಪೌಡರ್, ಚುರುಮರಿ (ಮಂಡಕ್ಕಿ) / ಅವಲಕ್ಕಿ ತಯಾರಿಕೆ, ಬೆಳ್ಳುಳ್ಳಿ / ಈರುಳ್ಳಿ ಸಂಸ್ಕರಣೆ, ಹಾಲಿನ ಉತ್ಪನ್ನಗಳ ತಯಾರಿಕೆ ಸೇರಿದಂತೆ ಅನೇಕ ಕಿರು ಉದ್ಯಮಗಳ ಸ್ಥಾಪನೆಗೆ ಈ ಯೋಜನೆಯಿಂದ ತುಂಬ ಸುಲಭವಾಗಿ ಸಾಲ ಮತ್ತು ಸಬ್ಸಿಡಿ ಪಡೆಯಬಹುದಾಗಿದೆ.

ಬೇಕಾಗುವ ದಾಖಲಾತಿಗಳು

ಆಧಾರ್ ಕಾರ್ಡ, ಪಾನ್‌ಕಾರ್ಡ, ಬ್ಯಾಂಕ್ ಪಾಸ್ ಬುಕ್, ಕರೆಂಟ್ ಬಿಲ್, ಉದ್ಯೋಗ ಸ್ಥಳದ ಉತಾರ, ಬಾಡಿಗೆ ಕರಾರು ಪತ್ರ, ಎಂ.ಎಸ್.ಎA.ಇ ಲೈಸೆನ್ಸ್ (ಉದ್ಯಮ), ಸೈಟಿನ ಬಳಿ ನಿಂತಿರುವ ಅರ್ಜಿದಾರರ ಭಾವಚಿತ್ರ

ಬ್ಯಾಂಕ್ ಅಧಿಕಾರಿಗಳು ಒಪ್ಪಿದ ನಂತರ ನೀಡಬೇಕಾದ ದಾಖಲೆಗಳು

  • ಪಂಚಾಯ್ತಿ ಅಥವಾ ಮುನ್ಸಿಪಾಲಿಟಿ ಲೈಸೆನ್ಸ್ ಮತ್ತು ಎನ್‌ಓಸಿ,
  • ಬ್ಯಾಂಕ್ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು
  • ಉದ್ಯಮಶೀಲತಾ ತರಬೇತಿ ಪ್ರಮಾಣ ಪತ್ರ
  • 10% ಯಂತ್ರಗಳಿಗೆ ಹಾಗೂ 20% ವಂತಿಗೆ ಬಂಡವಾಳಕ್ಕೆ ಫಲಾನುಭವಿ ವಂತಿಗೆ

ಸಾಲ ಮತ್ತು ಸಹಾಯಧನ ಸೌಲಭ್ಯ ಕುರಿತ ಮಾಹಿತಿ ಪಡೆಯಲು ವಿವಿಧ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ : ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!