ಸರಕಾರಿ ಯೋಜನೆ

PM-Surya Ghar Muft Bijli yojana 2024 : ಮನೆ ತಾರಸಿ ಸೋಲಾರ್ ವಿದ್ಯುತ್‌ಗೆ ₹78,000 ಸಬ್ಸಿಡಿ | ಸೋಲಾರ್ ವಿದ್ಯುತ್ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

WhatsApp Group Join Now
Telegram Group Join Now

PM-Surya Ghar Muft Bijli yojana 2024 : ಸೌರ ವಿದ್ಯುತ್ ಯೋಜನೆ ಬಳಕೆಯನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಆರಂಭಿಸಿರುವ ‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ (PM – Surya Ghar Muft Bijli Jojana) ಅಧಿಕೃತವಾಗಿ ಅನುಷ್ಠಾನಗೊಂಡಿದೆ. ನಿನ್ನೆ (ಫೆಬ್ರವರಿ 29) ಕೇಂದ್ರ ಸಚಿವ ಸಂಪುಟವು ಸದರಿ ಯೋಜನೆಗೆ ಅನುಮೋದನೆ ನೀಡಿದೆ.

ಅಯೋದ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ಘೋಷಿಸಲಾಗಿದ್ದ ಈ ಯೋಜನೆ ಬಗ್ಗೆ ದೇಶಾದ್ಯಂತ ಭಾರೀ ಕುತೂಹಲ ಒಡಮೂಡಿತ್ತು. ಕಳೆದ ಫೆಬ್ರುವರಿ 13ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು; ನಿನ್ನೆ ಫೆಬ್ರವರಿ 29ರಂದು ಕೇಂದ್ರ ಸಂಪುಟವು ಅನುಮೋದನೆ ನೀಡಿದೆ.

ಇದನ್ನೂ ಓದಿ: Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ₹47,650 ರೂಪಾಯಿ ಸಂಬಳ

ಫಲಾನುಭವಿಗಳಿಗೆ ಭರ್ಜರಿ ಸಬ್ಸಿಡಿ

ಮನೆಯ ತಾರಸಿ (Terrace of the house) ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಮುಂದಾಗುವ ಪ್ರತಿ ಕುಟುಂಬಕ್ಕೆ ಯೋಜನೆಯಡಿ ಭರ್ಜರಿ ಸಬ್ಸಿಡಿ ಘೋಷಣೆ ಮಾಡಲಾಗಿದೆ. ₹75,021 ಕೋಟಿ ಮೊತ್ತದ ‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಯಡಿ ಫಲಾನುಭವಿಗಳಿಗೆ ವಿದ್ಯುತ್ ಬಿಲ್ ಬರುವುದಿಲ್ಲ; ಒಂದು ತಿಂಗಳಿಗೆ 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗಲಿದೆ.

2 ಕಿಲೋ ವ್ಯಾಟ್ ವರೆಗಿನ ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳುವ ಪ್ರತಿ ಮನೆಯ ಯೋಜನಾ ವೆಚ್ಚದ ಶೇ.60ರಷ್ಟು ಹಣವನ್ನು ಕೇಂದ್ರವೇ ನೀಡಲಿದೆ. 2ರಿಂದ 3 ಕಿಲೋ ವ್ಯಾಟ್ ಅಳವಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ಶೇ.40ರಷ್ಟು ಹಣ ನೀಡಲಿದೆ. 3 ಕಿಲೋ ವಾಟ್ ವರೆಗಷ್ಟೇ ಆರ್ಥಿಕ ನೆರವು ಸಿಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: PM Kisan 16th Installment : ಸಣ್ಣ ರೈತರ ಬ್ಯಾಂಕ್ ಖಾತೆಗೆ 2,000 ರೂಪಾಯಿ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಎಷ್ಟೆಷ್ಟು ಸಹಾಯಧನ ಸಿಗಲಿದೆ?

‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಯಡಿ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳಲಿರುವ ಫಲಾನುಭವಿಗಳಿಗೆ ಕೇಂದ್ರ ಸರಕಾರವು ಈ ಕೆಳಗಿನಂತೆ ಪ್ರತಿ ಕಿಲೋ ವ್ಯಾಟ್’ಗೆ ಇಂತಿಷ್ಟು ಸಬ್ಸಿಡಿ ನಿಗದಿ ಮಾಡಿದೆ.

  • 1 ಕಿಲೋ ವ್ಯಾಟ್‌ಗೆ 30,000 ರೂಪಾಯಿ
  • 2 ಕಿಲೋ ವ್ಯಾಟ್‌ಗೆ 60,000 ರೂಪಾಯಿ
  • 3 ಕಿಲೋ ವ್ಯಾಟ್‌ಗೆ 78,000 ರೂಪಾಯಿ

ಮೂರು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡರೆ ಬರೋಬ್ಬರಿ 78,000 ರೂಪಾಯಿ ಸಹಾಯಧನ ಸಿಗಲಿದೆ ಎಂದು ಕೇಂದ್ರ ಸಂಪುಟ ಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Village accountant recruitment 2024 :1000 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಪ್ರಕಟಣೆ | ಕಂದಾಯ ಸಚಿವರಿಂದ ಅಧಿಕೃತ ಮಾಹಿತಿ

ಈ ಯೋಜನೆಗೆ ಯಾರೆಲ್ಲ ಅರ್ಹರು?

ಈ ಯೋಜನೆಯಡಿ ಕುಟುಂಬದ ವಾರ್ಷಿಕ ವರಮಾನವು 1.5 ಲಕ್ಷ ರೂಪಾಯಿ ಮಿತಿಯಲ್ಲಿರುವ, ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರನ ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರಬಾರದು.

ಅರ್ಜಿದಾರರ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್’ಗೆ ಲಿಂಕ್ ಆಗಿರಬೇಕು. ಅರ್ಹ ಫಲಾನುಭವಿಗಳಿಗೆ ಡಿಸ್ಕಾಂ ನಿಂದ ಒಪ್ಪಿಗೆ ಸಿಕ್ಕ ನಂತರ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಅರ್ಜಿ ಸಲ್ಲಿಕೆ ಹೇಗೆ?

‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಯಡಿ ಸೋಲಾರ್ ವಿದ್ಯುತ್ ಪಡೆಯಲು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿದಾರನ ಖಾತೆಗೆ 30 ದಿನಗಳ ಒಳಗಾಗಿ ಸಬ್ಸಿಡಿ ಹಣ ಜಮೆಯಾಗುತ್ತದೆ.

ಇದಕ್ಕಾಗಿ PM – SURYA GHAR: MUFT BIJLI YOJANA National Portal ತೆರೆಯಲಾಗಿದ್ದು; ಅದರ ಹೋಮ್ ಪೇಜ್‌ನಲ್ಲಿ ಕಾಣುವ  Apply for rooftop ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆಯ ವಿವಿಧ ಹಂತಗಳನ್ನು ಪೂರೈಸಬೇಕು.

ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Labour card Registration 2024 : ಲೇಬರ್ ಕಾರ್ಡ್ ನೋಂದಣಿ ಆರಂಭ | ಈ ಕಾರ್ಡ್ ಇದ್ರೆ ಕುಟುಂಬದ ಎಲ್ಲರಿಗೂ ಉಚಿತ ಸೌಲಭ್ಯ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!