PM-Surya Ghar Muft Bijli Jojana : ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…
ಸೌರ ವಿದ್ಯುತ್ (Solar electricity) ಯೋಜನೆ ಬಳಕೆಯನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ಸಂಪುಟವು 2024ರ ಫೆಬ್ರವರಿ 29ರಂದು ಅನುಮೋದನೆ ನೀಡಿರುವ ‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಗೆ (Rooftop Solar Scheme) ದೇಶಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸೂರ್ಯ ಘರ್ ಯೋಜನೆಯಡಿ ಕರ್ನಾಟಕದಲ್ಲಿ ಈತನಕ ಒಟ್ಟು 5,14,000 ಜನ ನೋಂದಣಿ ಮಾಡಿಕೊಂಡಿದ್ದು; ಇದರಲ್ಲಿ 1,17,000 ಅರ್ಜಿಗಳು ಸ್ವೀಕೃತವಾಗಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
ಫಲಾನುಭವಿಗಳಿಗೆ ಭರ್ಜರಿ ಸಬ್ಸಿಡಿ
ಮನೆಯ ತಾರಸಿ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಮುಂದಾಗುವ ಪ್ರತಿ ಕುಟುಂಬಕ್ಕೆ ಯೋಜನೆಯಡಿ ಭರ್ಜರಿ ಸಬ್ಸಿಡಿ ಘೋಷಣೆ ಮಾಡಲಾಗಿದೆ. ‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಯಡಿ ಫಲಾನುಭವಿಗಳಿಗೆ ವಿದ್ಯುತ್ ಬಿಲ್ ಬರುವುದಿಲ್ಲ; ಒಂದು ತಿಂಗಳಿಗೆ 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗಲಿದೆ.
2 ಕಿಲೋ ವ್ಯಾಟ್ ವರೆಗಿನ ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳುವ ಪ್ರತಿ ಮನೆಯ ಯೋಜನಾ ವೆಚ್ಚದ ಶೇ.60ರಷ್ಟು ಹಣವನ್ನು ಕೇಂದ್ರವೇ ನೀಡುತ್ತದೆ. 2ರಿಂದ 3 ಕಿಲೋ ವ್ಯಾಟ್ ಅಳವಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ಶೇ.40ರಷ್ಟು ಹಣ ನೀಡಲಿದೆ. 3 ಕಿಲೋ ವಾಟ್ ವರೆಗಷ್ಟೇ ಆರ್ಥಿಕ ನೆರವು ಸಿಗಲಿದೆ.
ಕುರಿ ಸಾಕಾಣಿಕೆಗೆ ₹50,000 ಸಹಾಯಧನ | ಅರ್ಜಿ ಆಹ್ವಾನ
ಎಷ್ಟೆಷ್ಟು ಸಹಾಯಧನ ಸಿಗಲಿದೆ?
‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಯಡಿ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳಲಿರುವ ಫಲಾನುಭವಿಗಳಿಗೆ ಕೇಂದ್ರ ಸರಕಾರವು ಸಹಾಯಧನ ನೀಡಲಿದೆ. ಮೂರು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡರೆ ಬರೋಬ್ಬರಿ 78,000 ರೂಪಾಯಿ ಸಹಾಯಧನ ಸಿಗಲಿದೆ. ಸಬ್ಸಿಡಿ ವಿವರ ಈ ಕೆಳಗಿನಂತಿದೆ:
- 1 ಕಿಲೋ ವ್ಯಾಟ್ಗೆ 30,000 ರೂಪಾಯಿ
- 2 ಕಿಲೋ ವ್ಯಾಟ್ಗೆ 60,000 ರೂಪಾಯಿ
- 3 ಕಿಲೋ ವ್ಯಾಟ್ಗೆ 78,000 ರೂಪಾಯಿ
ಈ ಯೋಜನೆಗೆ ಯಾರೆಲ್ಲ ಅರ್ಹರು?
ಈ ಯೋಜನೆಯಡಿ ಕುಟುಂಬದ ವಾರ್ಷಿಕ ವರಮಾನವು 1.5 ಲಕ್ಷ ರೂಪಾಯಿ ಮಿತಿಯಲ್ಲಿರುವ, ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರನ ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರಬಾರದು.
ಅರ್ಜಿದಾರರ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್’ಗೆ ಲಿಂಕ್ ಆಗಿರಬೇಕು. ಅರ್ಹ ಫಲಾನುಭವಿಗಳಿಗೆ ಡಿಸ್ಕಾಂ ನಿಂದ ಒಪ್ಪಿಗೆ ಸಿಕ್ಕ ನಂತರ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಜನವರಿ 1ರಿಂದಲೇ ರೈತರಿಗೆ ಸಿಗಲಿದೆ ₹2 ಲಕ್ಷ ಅಡಮಾನ ರಹಿತ ಕೃಷಿ ಸಾಲ
ಅರ್ಜಿ ಸಲ್ಲಿಕೆ ಹೇಗೆ?
ಯೋಜನೆ ಅಳವಡಿಸಿಕೊಂಡ ಮನೆಗಳಿಗೆ 15 ದಿನಗಳಲ್ಲೇ ಸಬ್ಸಿಡಿ ಸಿಗುತ್ತಿರುವುದರಿಂದ ಗಣನೀಯ ಪ್ರಮಾಣದಲ್ಲಿ ಅರ್ಜಿಗಳು ಹರಿದು ಬರುತ್ತಿವೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ಮಾಹಿತಿ ನೀಡಿದೆ.
‘ಪಿಎಂ ಸೂರ್ಯ ಫರ್: ಮುಫ್ ಬಿಜ್ಜಿ ಯೋಜನೆ’ಯಡಿ ಸೋಲಾರ್ ವಿದ್ಯುತ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿದಾರನ ಖಾತೆಗೆ 30 ದಿನಗಳ ಒಳಗಾಗಿ ಸಬ್ಸಿಡಿ ಹಣ ಜಮೆಯಾಗುತ್ತದೆ.
ಇದಕ್ಕಾಗಿ PM – SURYA GHAR: MUFT BIJLI YOJANA National Portal ತೆರೆಯಲಾಗಿದ್ದು; ಅದರ ಹೋಮ್ ಪೇಜ್ನಲ್ಲಿ ಕಾಣುವ ‘ಂಠಿಠಿಟಥಿ ಜಿoಡಿ ಡಿooಜಿಣoಠಿ’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆಯ ವಿವಿಧ ಹಂತಗಳನ್ನು ಪೂರೈಸಬೇಕು.
ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್: Apply ಮಾಡಿ
3 Comments