Govt SchemesNews

PM Ujjwala Scheme 2 Free Gas Cylinder : ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ | ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ

ಕೇಂದ್ರ ಸರ್ಕಾರ (Central government) ‘ಉಜ್ವಲ ಯೋಜನೆ’ಯಡಿ (PM Ujjwala Yojana) ಗ್ಯಾಸ್ ಸಿಲಿಂಡರ್ (Gas Cylinder) ಹಾಗೂ ಒಲೆಯನ್ನು ಉಚಿತವಾಗಿ ವಿತರಿಸಲು ಅರ್ಹ ಮಹಿಳೆಯರಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದೆ.

WhatsApp Group Join Now
Telegram Group Join Now

ಈಗಾಗಲೇ ಉಜ್ವಲ ಯೋಜನೆಯಡಿ ದೇಶಾದ್ಯಂತ ಕೋಟ್ಯಾಂತರ ಮಹಿಳೆಯರು ಇದರ ಪ್ರಯೋಜನ ಪಡೆದಿದ್ದು; ಈ ಅವಕಾಶದಿಂದ ವಂಚಿರಾದವರಿಗೆ ಹಾಗೂ ಹೊಸದಾಗಿ ಮದುವೆಯಾದ ಮಹಿಳೆಯರಿಗೆ ಯೋಜನೆಯ ಪ್ರಯೋಜನ ಒದಗಿಸುವ ಹಿನ್ನಲೆಯಲ್ಲಿ ಸರ್ಕಾರ ‘ಉಜ್ವಲ ಯೋಜನೆ 2.0’ ಮೂಲಕ ಮತ್ತೆ ಅವಕಾಶ ಕಲ್ಪಿಸಿದೆ.

ಇಂಥವರಿಗೆ ಮಾತ್ರ ಅವಕಾಶ

ಉಜ್ವಲ ಯೋಜನೆಯ ಲಾಭವನ್ನು ಪ್ರತಿ ಕುಟುಂಬಕ್ಕೆ ಒಮ್ಮೆ ಮಾತ್ರ ಪಡೆಯಲು ಅವಕಾಶವಿದೆ. ಈಗಾಗಲೇ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಈ ಹಿಂದೆ ಇದರ ಪ್ರಯೋಜನವನ್ನು ಪಡೆಯದೇ ಇದ್ದರೆ ಮಾತ್ರ ನೀವು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ಅರ್ಜಿದಾರ ಮಹಿಳೆ ಬಿಪಿಎಲ್ ಕಾರ್ಡ್ ಹೊಂದಿರಬೇಕು ಮತ್ತು ಆಕೆ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಇಂತಹ ಮಹಿಳೆಯರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ಗಾತ್ರದ ಫೋಟೊ ಹಾಗೂ ಪಡಿತರ ಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳುವುದು ಹೇಗೆ?

‘ಉಜ್ವಲ ಯೋಜನೆ 2.0’ಯಡಿ ಉಚಿತ ಸಿಲಿಂಡರ್ ಮತ್ತು ಒಲೆ ಪಡೆದುಕೊಳ್ಳಲು ಹತ್ತಿರದ ಗ್ಯಾಸ್ ಏಜನ್ಸಿ ಭೇಟಿ ನೀಡಿ ಸಂಬAಧಿಸಿದ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬಹುದು.

https://pmuy.gov.in ಅಧಿಕೃತ ಉಜ್ವಲ ಯೋಜನೆ ವೆಬ್‌ಸೈಟ್‌ಗೆ ಭೇಟಿ ನೀಡಿ. ‘ಉಜ್ವಲ ಯೋಜನೆ 2.0’ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!