ಸರಕಾರಿ ಯೋಜನೆ

PM Vishwakarma Scheme free tool kit : ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ

WhatsApp Group Join Now
Telegram Group Join Now

PM Vishwakarma Scheme free tool kit

ಕೇಂದ್ರ ಸರಕಾರ 15,000 ರೂಪಾಯಿ ಬೆಲೆಯ ಉಚಿತ ಟೂಲ್ ಕಿಟ್ / ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಕೇಂದ್ರ ಸರಕಾರವು ವಿಶ್ವಕರ್ಮ ಜಯಂತಿಯ ಸ್ಮರಣಾರ್ಥವಾಗಿ ಸಣ್ಣ ಉದ್ಯೋಗಿಗಳು ಮತ್ತು ನುರಿತ ಕುಶಲಕರ್ಮಿಗಳಿಗೆ ತರಬೇತಿ, ಕೌಶಲ್ಯ ವಿಷಯಗಳ ಕುರಿತು ಸಲಹೆ ಮತ್ತು ಆಧುನಿಕ ತಂತ್ರಗಳ (Modern technology) ಜ್ಞಾನದ ಜೊತೆಗೆ ನಗದು ಬೆಂಬಲವನ್ನು ನೀಡುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ.

ಸದರಿ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಬೇರೆ ಬೇರೆ ವರ್ಗದ ಒಟ್ಟು 18 ವಿಧದ ಕುಶಲಕರ್ಮಿಗಳಿಗೆ ರಾಜ್ಯಗಳಲ್ಲಿರುವ ವಿವಿಧ ಕೌಶಲ್ಯ ತರಬೇತಿ ಕೇಂದ್ರಗಳ ಮುಖಾಂತರ ತರಬೇತಿಯ ಜೊತೆಗೆ 15,000 ರೂಪಾಯಿ ಮೌಲ್ಯದ ಟೂಲ್ ಕಿಟ್ (Free tool kit) ಅಥವಾ ಹೊಲಿಗೆ ಯಂತ್ರವನ್ನು (sewing-machine) ನೀಡಲಾಗುತ್ತ್ತಿದೆ.

ಇದನ್ನೂ ಓದಿ: Farmers Loan Waiver : ರಾಜ್ಯ ಬಜೆಟ್‌ನಲ್ಲಿ ಸಿಗುತ್ತಾ ರೈತರಿಗೆ ಸಾಲಮನ್ನಾ ಭಾಗ್ಯ? | ರೈತರ ಬೇಡಿಕೆಗಳೇನು?

ಉಚಿತ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರ ಪಡೆಯಲು ಏನು ಮಾಡಬೇಕು?

ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಅರ್ಹತೆಗಳನ್ನು ಪರಿಶೀಲಿಕೊಳ್ಳಬೇಕು. ನೀವು ಅರ್ಹರಿದ್ದರೆ, ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸಂಬ೦ಧಿಸಿದ ಇಲಾಖೆ ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತದೆ.

ಅರ್ಹರಾದ ಫಲಾನುಭವಿಗಳಿಗೆ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರ ಖರೀದಿ ಮಾಡಲು ಈ ಯೋಜನೆಯ ಅಡಿಯಲ್ಲಿ 15,000 ರೂಪಾಯಿ ಮೌಲ್ಯದ ಇ-ವೋಚರ್ಸ್ / ಇ-ರೂಪಿಯನ್ನು ಬ್ಯಾಂಕ್ ಮುಖಾಂತರ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Bagar Hukum land : ಈ ರೈತರ ಬಗರ್ ಹುಕುಂ ಜಮೀನು ಸರಕಾರದ ಸ್ವಾಧೀನ | ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ತರಬೇತಿ ವಿವರ (PM Vishwakarma yojana training)

ಪಿ ಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ 15,000 ರೂಪಾಯಿ ಮೌಲ್ಯದ ಟೂಲ್ ಕಿಟ್ ಜೊತೆಗೆ ಸಂಬ೦ಧಿಸಿದ ಇಲಾಖೆಯಿಂದ 5 ರಿಂದ 15 ದಿನದ ವರೆಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ನೌಕರರಾಗಿರಬಾರದು. ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು. ಈ ಯೋಜನೆಯಡಿಯಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಕಳೆದ 5 ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ಪಡೆದಿರಬಾರದು.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಅರ್ಜಿದಾರನ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಗ್ರಾಮ ಪಂಚಾಯತಿಯಿ೦ದ ಪಡೆದ ಸ್ವ-ಉದ್ಯೋಗ ಪ್ರಮಾಣ ಪತ್ರ (self employed certificate)
  • ಅರ್ಜಿದಾರನ ಮೊಬೈಲ್ ನಂಬರ್

ಇದನ್ನೂ ಓದಿ: Ayushman card application in mobile : ಮೊಬೈಲ್‌ನಲ್ಲೇ ಪಡೆಯಿರಿ ₹5 ಲಕ್ಷ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಆರೋಗ್ಯ ಕಾರ್ಡ್

ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಹರಿರುವ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರವಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಭೇಟಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಮನೆಯ ಟೇರಸ್ ಮೇಲೆ ‘ಸೋಲಾರ್ ವಿದ್ಯುತ್ ಕೃಷಿ’ ಮಾಡಿ ಆದಾಯ ಗಳಿಸುವುದು ಹೇಗೆ? ಸಬ್ಸಿಡಿ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ…

WhatsApp Group Join Now
Telegram Group Join Now

Related Posts

error: Content is protected !!