PMAY Gramin- ಪಿಎಂ ಆವಾಸ್ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಆಹ್ವಾನ
ಗ್ರಾಮೀಣ ಭಾಗದ ವಸತಿ ರಹಿತರಿಗೆ ಇಲ್ಲಿದೆ ಸುವರ್ಣಾವಕಾಶ

ರಾಜ್ಯದ ಗ್ರಾಮೀಣ ಭಾಗದಲ್ಲಿ ವಾಸಿಸುವ ಅರ್ಹ ಫಲಾನುಭವಿಗಳಿಗೆ ಉಚಿತ ಮನೆ ಮತ್ತು ನಿವೇಶನ ನೀಡಲು ಸರ್ಕಾರ ಸಮೀಕ್ಷಾ ನೋಂದಣಿ ಆರಂಭಿಸಿದೆ. ನೋಂದಣಿ ಕುರಿತ ಮಾಹಿತಿ ಇಲ್ಲಿದೆ…
ನೀವು ಹಳ್ಳಿಯಲ್ಲಿ ವಾಸ ಮಾಡುತ್ತಿದ್ದೀರಾ? ನಿಮಗೆ ಮನೆ ಕಟ್ಟಿಕೊಳ್ಳಲು ಜಾಗ ಮತ್ತು ಮಬೆ ಇಲ್ಲವೇ? ನೀವು ಬಡತನ ರೇಖೆಗಿಂತ ಕೆಳಗಿನವರೇ? ಹಾಗಿದ್ದರೇ ನೀವು ಸರ್ಕಾರದಿಂದ ಉಚಿತ ಮನೆ ಪಡೆದುಕೊಳ್ಳಲು ಅರ್ಹರಿದ್ದೀರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ವಸತಿ ರಹಿತರಿಗೆ ಉಚಿತ ಮನೆ ನೀಡಲು ಸುವರ್ಣಾವಕಾಶ ಕಲ್ಪಿಸಿದೆ.
ಹೌದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awaas Yojana- Gramin) ರಾಜ್ಯದಲ್ಲಿ ಹಳ್ಳಿಗಳಲ್ಲಿ ಮನೆ ಹಾಗೂ ನಿವೇಶನ ಇಲ್ಲದವರ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಸಮಸ್ತರಿಗೂ ಸೂರು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಈ ಸಮೀಕ್ಷೆಯಲ್ಲಿ ಮನೆ ಹಾಗೂ ನಿವೇಶನ ಇಲ್ಲದವರು ನೇರವಾಗಿ ಭಾಗವಹಿಸುವ ಮೂಲಕ ಉಚಿತ ಮನೆ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಉಚಿತ ಮನೆ, ಎಲೆಕ್ಟ್ರಿಕ್ ಬೈಕ್, ಲ್ಯಾಪ್‌ಟಾಪ್, ಆಟೋ, ಕಾರು ಖರೀದಿ ಸಬ್ಸಿಡಿಗೆ ಅರ್ಜಿ ಆಹ್ವಾನ
ಉಚಿತ ಮನೆ ಪಡೆಯಲು ಯಾರೆಲ್ಲ ಅರ್ಹರು?
ಬಹುಮುಖ್ಯವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉಚಿತ ಮನೆ ಹಾಗೂ ನಿವೇಶನ ಪಡೆಯುವ ಅಭ್ಯರ್ಥಿಗಳು ಕರ್ನಾಟಕದ ರಾಜ್ಯದ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರಬೇಕು. ಅವರು ಮನೆ ಮತ್ತು ನಿವೇಶನ ಇಲ್ಲದವರಾಗಿರಬೇಕು. ಕಚ್ಚಾ ಮನೆ ಹೊಂದಿರುವವರಿಗೂ ಈ ಯೋಜನೆಯಡಿ ಉಚಿತ ಮನೆ ಪಡೆಯಲು ಅವಕಾಶವಿದೆ. ಕುಟುಂಬದ ವಾರ್ಷಿಕ ಆದಾಯ 1.80 ರೂ. ಮೀರದವರು ಅರ್ಜಿ ಸಲ್ಲಿಸಬಹುದಾಗಿದೆ.

ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು?
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ನರೇಗಾ (NREGA) ಜಾಬ್ ಕಾರ್ಡ್
ಇದನ್ನೂ ಓದಿ: Male nakshatragalu 2025- 2025ರ ಮಳೆ ನಕ್ಷತ್ರಗಳು | ಹೇಗಿದೆ ಈ ವರ್ಷದ ಮಳೆಗಾಲ?
ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಹೇಗೆ?
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಮನೆ ಮತ್ತು ನಿವೇಶನ ಇಲ್ಲದವರನ್ನು ಗುರುತಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಒಬ್ಬ ಸರ್ವೆಕ್ಷಕರನ್ನು (Surveyor) ನಿಯೋಜಿಸಲಾಗಿದೆ. ಆ ಸರ್ವೇಕ್ಷಕರು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮತ್ತು ನಿವೇಶನ ಇಲ್ಲದವರ ಸಮೀಕ್ಷೆ ನಡೆಸಲು ಸಹಕರಿಸಲಿದ್ದಾರೆ.
ಸ್ವಯಂ ನೀವೇ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು?
ಮನೆ ಮತ್ತು ನಿವೇಶನ ಇಲ್ಲದವರು ಗ್ರಾಮ ಪಂಚಾಯತ್ ಸರ್ವೆಕ್ಷಕರ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲದೇ, ಖುದ್ದು ತಾವೇ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಉಚಿತ ಮನೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಂತಿಚಿಚಿsPಟus 2024 ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಅಲ್ಲಿ ಕೇಳಲಾದ ವಿವರವನ್ನು ಭರ್ತಿ ಮಾಡಿ ಸೂಕ್ತ ದಾಖಲಾತಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.
AwaasPlus 2024 App ಡೌನ್‌ಲೋಡ್
ಹೆಚ್ಚಿನ ವಿವರಗಳಿಗೆ: ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Homeloan Tips- ಹೋಮ್ ಲೋನ್ ಪಡೆಯುವ ಮೊದಲು ಈ ನಿಯಮಗಳನ್ನು ತಿಳಿದಿರಿ