Property A Khata B Khata Guide- ಆಸ್ತಿಗಳ ‘ಎ’ ಖಾತಾ ಮತ್ತು ‘ಬಿ’ ಖಾತಾ ವಿವರ
ಆಸ್ತಿ ಖರೀದಿಸುವವರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ರಾಜ್ಯದಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾ ನಡುವಿನ ವ್ಯತ್ಯಾಸ ಹಾಗೂ ಪ್ರಾಮುಖ್ಯತೆ ಬಗ್ಗೆ ಅನೇಕರಿಗೆ ಗೊಂದಲವಾಗುತ್ತಿದೆ. ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಭೂಸ್ವತ್ತುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ದಾಖಲೆಗಳ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ಪೈಕಿ ‘ಎ’ ಖಾತಾ (A-Khata) ಮತ್ತು ‘ಬಿ’ ಖಾತಾ (B-Khata) ದಾಖಲೆಗಳು ಪ್ರಮುಖವಾದವು. ಬಹುತೇಕರಿಗೆ ಇದರ ನಡುವಿನ ವ್ಯತ್ಯಾಸ ಹಾಗೂ ಪ್ರಾಮುಖ್ಯತೆ ಅರ್ಥವಾಗದೆ ಗೊಂದಲವಾಗುತ್ತಿದೆ. ಹೀಗಾಗಿ ಈ ಲೇಖನದಲ್ಲಿ ಎ-ಖಾತಾ ಮತ್ತು ಬಿ-ಖಾತಾ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
‘ಎ’ ಖಾತಾ ಎಂದರೇನು?
ಎ-ಖಾತಾ (A-Khata) ಎಂದರೆ ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ಅಧಿಕೃತ ದಾಖಲೆ ಎಂದರ್ಥ. ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಇತರ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಎ-ಖಾತಾ ಹೊಂದಿರುವ ಕಟ್ಟಡ ಮತ್ತು ನಿವೇಶನವು ಕಾನೂನುಬದ್ಧ ನಿಯಮಗಳಿಗೆ ಅನುಗುಣವಾಗಿರುತ್ತದೆ. ಸ್ವತ್ತು ಭೂ ವಿವರ ದಾಖಲೆ (Land Records) ಮತ್ತು ಮಾಲಿಕತ್ವ ದಾಖಲಾತಿಗಳೊಂದಿಗೆ (Ownership Documents) ದೃಢಪಡಿಸಲಾಗಿರುತ್ತದೆ.
ಎ-ಖಾತಾ ಹೊಂದಿರುವ ಆಸ್ತಿಗಳು ಪೂರಕ ತೆರಿಗೆ (Property Tax) ಮರುಪಾವತಿಯಾಗಿರುತ್ತದೆ ಮತ್ತು ಬಿಬಿಎಂಪಿ ನಗರ ಯೋಜನೆ (Master Plan) ಕಟ್ಟಡ ನಿಯಮಗಳಿಗೆ ಅನುಗುಣವಾಗಿರುತ್ತದೆ.
ಇದನ್ನೂ ಓದಿ: Free School Hostel Admission- ಉಚಿತ ಶಾಲೆ ಮತ್ತು ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
‘ಎ’ ಖಾತಾ ಆಸ್ತಿಯ ಪ್ರಯೋಜನಗಳು
‘ಎ’ ಖಾತಾ ಆಸ್ತಿಗಳಿಗೆ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳಲ್ಲಿ ಗೃಹ ನಿರ್ಮಾಣ ಅಥವಾ ನಿವೇಶನ ಅಭಿವೃದ್ಧಿಗಾಗಿ ಸುಲಭವಾಗಿ ಸಾಲ ದೊರೆಯುತ್ತದೆ. ಸರಳವಾಗಿ ಆಸ್ತಿಯನ್ನು ಮಾರಾಟಬಹುದು ಮತ್ತು ಹೆಸರನ್ನು ವರ್ಗಾಯಿಸಲು ಅನುಕೂಲಕರವಾಗಿರುತ್ತದೆ.
‘ಎ’ ಖಾತಾ ಆಸ್ತಿಗಳಿಗೆ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಸರಕಾರದಿಂದ ಸುಲಭವಾಗಿ ಅನುಮೋದನೆ ಪಡೆಯಬಹುದು. ಮಾತ್ರವಲ್ಲ ಬಿಬಿಎಂಪಿಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು.
‘ಬಿ’ ಖಾತಾ ಎಂದರೇನು?
ಬಿ-ಖಾತಾ (B-Khata) ಎಂದರೆ ಅನಧಿಕೃತ ಅಥವಾ ನಿಯಮಾನುಸಾರ ನೋಂದಣಿಯಿಲ್ಲದ ಆಸ್ತಿ ಎಂದರ್ಥ. ಬೆಂಗಳೂರು ಮಹಾನಗರ ಪಾಲಿಕೆ (BBMP) ಅಥವಾ ಸಂಬಂಧಿತ ಸ್ಥಳೀಯ ಸಂಸ್ಥೆಗಳು ಈ ದಾಖಲೆಗಳನ್ನು ನೀಡುತ್ತವೆ. ಆದರೆ, ಇದು ಅಧಿಕೃತವಾಗಿ ಕಾನೂನುಬದ್ಧ ಸ್ವತ್ತಾಗಿ ಪರಿಗಣಿಸಲ್ಪಡುವುದಿಲ್ಲ.
ಬಿ-ಖಾತಾ ಹೊಂದಿರುವ ನಿವೇಶನ ಅಥವಾ ಕಟ್ಟಡ ಅನಧಿಕೃತವಾಗಿ ಅಭಿವೃದ್ಧಿಪಡಿಸಿರಬಹುದು. ಭೂ ಮಾಲಿಕತ್ವ ದಾಖಲೆಗಳು ಅಪೂರ್ಣ ಅಥವಾ ಅನುಮೋದನೆ ಇಲ್ಲದಿರಬಹುದು. ಸರ್ಕಾರದ ಕಟ್ಟಡ ನಿಯಮಾವಳಿ ಹಾಗೂ ನಗರ ಯೋಜನೆಗಳಿಗೆ ಅನುಗುಣವಾಗಿರುವುದಿಲ್ಲ. ಈ ಸ್ವತ್ತುಗಳಿಂದ ಕಾನೂನುಬದ್ಧ ಸೌಲಭ್ಯಗಳನ್ನು ಪಡೆಯುವುದು ಕಷ್ಟಕರ.

ಇದನ್ನೂ ಓದಿ: Karnataka Rainfall- ಈ ಜಿಲ್ಲೆಗಳಲ್ಲಿ ಏಪ್ರಿಲ್ 3ರ ವರೆಗೂ ಪೂರ್ವ ಮುಂಗಾರು ಮಳೆ
‘ಬಿ’ ಖಾತಾ ಸ್ವತ್ತುಗಳ ಮುಖ್ಯ ತೊಂದರೆಗಳು
‘ಬಿ’ ಖಾತಾ ಸ್ವತ್ತುಗಳ ಮೇಲೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ. ಕೆಲವೊಂದು ಖಾಸಗಿ ಬ್ಯಾಂಕುಗಳು ಮಾತ್ರ ಈ ಆಸ್ತಿಗೆ ಸಾಲ ನೀಡಬಹುದು. ಆಸ್ತಿ ಮಾರಾಟ ಅಥವಾ ಹೆಸರಿನ ವರ್ಗಾವಣೆಯಲ್ಲಿ ಹೆಚ್ಚಿನ ಕಾನೂನು ತೊಂದರೆಗಳು ಎದುರಾಗಬಹುದು. ಇದು ಅನಧಿಕೃತ ಆಸ್ತಿಗಳ ಪಟ್ಟಿಯಲ್ಲಿ ಸೇರುವುದರಿಂದ ಬಿಬಿಎಂಪಿ ಅಥವಾ ಪಟ್ಟಣ ಪಂಚಾಯತಿಗಳಲ್ಲಿ ಕಟ್ಟಡ ಪರವಾನಗಿ ಪಡೆಯಲು ಸಾಧ್ಯವಿಲ್ಲ.
‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ ಸಾಧ್ಯವೇ?
ಹೌದು, ಬಿ-ಖಾತಾ ಹೊಂದಿರುವ ಆಸ್ತಿಯನ್ನು ನಿರ್ದಿಷ್ಟ ಪ್ರಕ್ರಿಯೆಗಳ ಮೂಲಕ ಎ-ಖಾತಾಗೆ ಪರಿವರ್ತನೆ ಮಾಡಬಹುದು. ಈ ಪ್ರಕ್ರಿಯೆಗೆ ಕೆಲವೊಂದು ಸರ್ಕಾರದ ನಿಯಮಗಳನ್ನು ಅನುಸರಿಸಬೇಕು.
ಆಸ್ತಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ನಿಗದಿತ ಕಾನೂನು ನಿಯಮಗಳನ್ನು ಪೂರೈಸಿದರೆ ಮಾತ್ರ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಸಾಧ್ಯ. ಮೊದಲನೆಯದಾಗಿ ಪೂರಕ ಆಸ್ತಿ ತೆರಿಗೆ (Property Tax) ಕಟ್ಟಬೇಕು.
ರಾಜಸ್ವ ಇಲಾಖೆ, ಪಟ್ಟಣ ಪಂಚಾಯಿತಿ ಅಥವಾ ಬಿಬಿಎಂಪಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ನಿಯಮಿತ ಅನುಮೋದನೆಗಳನ್ನು ಪಡೆಯಬೇಕು. ಬಿಬಿಎಂಪಿ ಅಥವಾ ಸಂಬಂಧಿತ ಸ್ಥಳೀಯ ಸಂಸ್ಥೆಯ ಮೂಲಕ ಖಾತಾ ಪರಿವರ್ತನೆಯ ಅಧಿಕೃತ ಪ್ರಕ್ರಿಯೆ ಮುಗಿಯಬೇಕು.
ಇದನ್ನೂ ಓದಿ: ಪ್ರೊಸೆಸಿಂಗ್ ಶುಲ್ಕವಿಲ್ಲದೇ ₹30 ಲಕ್ಷದ ವರೆಗೆ ಲೋನ್ Zero Processing Fee Home Loan
ಆಸ್ತಿ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳು
ಆಸ್ತಿ ಖರೀದಿ ಮಾಡುವ ಮುನ್ನ ಅದರ ದಾಖಲೆಗಳನ್ನು ಚೆಕ್ ಮಾಡುವುದು ಅತ್ಯಗತ್ಯ. ಈ ಕೆಳಗಿನ ಅಂಶಗಳನ್ನು ಗಮನಿಸುವುದು ಉತ್ತಮ:
- ಖಾತಾ ಪ್ರಮಾಣಪತ್ರ (A-Khata / B-Khata) ಪರಿಶೀಲನೆ.
- ಭೂ ದಾಖಲೆಗಳು ಸರಿಯಾಗಿ ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
- ಸರಕಾರದ ಅನುಮೋದಿತ ಪ್ಲಾಟ್ ಅಥವಾ ಜಮೀನಾಗಿದೆಯೇ ಎಂಬುದನ್ನು ನೋಡುವುದು.
- ಬ್ಯಾಂಕುಗಳ ಸಾಲ ಸಾಧ್ಯತೆಗಳ ಬಗ್ಗೆ ಗಮನಿಸುವುದು.
- ಆಸ್ತಿಯ ಪ್ರವೇಶ ಮತ್ತು ಮೂಲಭೂತ ಸೌಕರ್ಯಗಳ ಲಭ್ಯತೆ ಪರಿಶೀಲಿಸುವುದು.
ಖಾತಾ ಮತ್ತು ಭೂಸ್ವತ್ತುಗಳ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಸಾರ್ವಜನಿಕರು ತಮ್ಮ ಹತ್ತಿರದ ಬಿಬಿಎಂಪಿ ಕಚೇರಿ, ಗ್ರಾಮ ಪಂಚಾಯತಿ ಅಥವಾ ನಗರ ಅಭಿವೃದ್ಧಿ ಪ್ರಾಧಿಕಾರ ಕಚೇರಿಗಳನ್ನು ಭೇಟಿ ಮಾಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದು.
ನೀವು ಆಸ್ತಿ ಖರೀದಿಸುವ ಮುನ್ನ ಖಾತಾ ಪ್ರಮಾಣಪತ್ರದ ಪರಿಶೀಲನೆ ಮಾಡುವುದು ಅತ್ಯಗತ್ಯ. ಎ-ಖಾತಾ ಹೊಂದಿರುವ ಆಸ್ತಿಗಳು ಹೆಚ್ಚು ಸುರಕ್ಷಿತ ಹಾಗೂ ಕಾನೂನುಬದ್ಧ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲಕರವಾಗಿರುತ್ತದೆ. ಅಂತಹ ಸ್ವತ್ತುಗಳನ್ನು ಮಾತ್ರ ಖರೀದಿಸಿದರೆ ಉತ್ತಮ.
ಇದನ್ನೂ ಓದಿ: Homeloan Tips- ಹೋಮ್ ಲೋನ್ ಪಡೆಯುವ ಮೊದಲು ಈ ನಿಯಮಗಳನ್ನು ತಿಳಿದಿರಿ